Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತಂದೆ ಕೊಲೆ ಮಾಡಿ ‘ಏಲಿಯನ್ ಗಳು ಅಂಗಾಂಗ ಹೊತ್ತೊಯ್ದರು’ ಎಂದ ಮಗ! ಟೆಕ್ಸಾಸ್‌ನಲ್ಲಿ ಭೀಕರ ಘಟನೆ

Spread the love

ಅಮೆರಿಕ: ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಭೀಕರವಾಗಿ ಕೊಂದು ಕರುಳನ್ನು ಹೊರತೆಗೆದಿದ್ದಲ್ಲದೇ ತಂದೆಯ ಅಂಗಾಂಗವನ್ನು ಏಲಿಯನ್ ಗಳು ಹೊತ್ತೊಯ್ದಿದ್ದಾರೆ ಎಂದು ಕತೆ ಕಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು 39 ವರ್ಷದ ಜೈಮ್ ಆಡ್ರಿಯನ್ ಕಾಂಟ್ರೆರಾಸ್ ಎಂದು ಗುರುತಿಸಲಾಗಿದೆ.

ಏ.12 ರಂದು ಜೈಮ್ ತನ್ನ ತಂದೆಯಾದ ವಿಕ್ಟರ್ ಗೆರಾರ್ಡೊ ಕಾಂಟ್ರೆರಾಸ್ (74) ನ ಚಾಕುವಿನಿಂದ ಕುತ್ತಿಗೆ ಸೀಳಿ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಅಷ್ಟೇ ಅಲ್ಲದೆ ತಂದೆಯ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರತೆಗೆದಿದು ಶವವನ್ನು ಮನೆಯಲ್ಲೇ ಬಿಟ್ಟಿದ್ದ.. ಆದರೆ ವಿಕ್ಟರ್ ನ ಮತ್ತೋರ್ವ ಮಗ ಕರೆ ಮಾಡಿದರೆ ತಂದೆ ರಿಸೀವ್ ಮಾಡದ ಹಿನ್ನಲೆ ಮನೆಗೆ ಬಂದು ನೋಡಿದ್ದಾನೆ. ಈ ವೇಳೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಕಿಟಕಿಯಿಂದ ನೋಡಿದಾಗ ತಂದೆ ಮೃತಪಟ್ಟಿರುವುದು ತಿಳಿದು ಬಂದಿದೆ.

ಕೂಡಲೇ ಬಾಗಿಲನ್ನು ಒಡೆದು ಒಳಗೆ ಹೋಗಿದಾಗ ಹಾಸಿಗೆ ಹಾಗೂ ನೆಲವೆಲ್ಲ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ ಜೈಮ್ ಆಡ್ರಿಯನ್ ತಂದೆಯನ್ನು ಏಲಿಯನ್ ಗಳು ಬಂದು ಕೊಲೆ ಮಾಡಿ ಅಂಗಾಂಗವನ್ನು ಹೊತ್ತೊಯ್ದಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ. ಆದರೆ ಈ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಜೈಮ್ ಆಡ್ರಿಯನ್ ಕೆಲ ದಿನಗಳಿಂದ ಹುಚ್ಚನಂತೆ ವರ್ತಿಸುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಪಕ್ಕದ ಮನೆಯವರ ಸಾಕುಪ್ರಾಣಿಗಳನ್ನು ಕೂಡ ಹತ್ಯೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯ ಆರೋಪಿ ಜೈಮ್ ಆಡ್ರಿಯನ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *