ಹುಟ್ಟುಹಬ್ಬದ ದಿನವೇ ಮಗ ಸಾವು: ದುಃಖದಲ್ಲೂ ಸಾರ್ಥಕತೆ ಮೆರೆದ ಕೊಪ್ಪಳ ಪೋಷಕರು; ಅಪಘಾತದಲ್ಲಿ ಮೃತಪಟ್ಟ ಆರ್ಯನ್‌ನ ಅಂಗಾಂಗ ದಾನ

ಕೊಪ್ಪಳ: ಅಪಘಾತಕ್ಕೊಳಗಾಗಿ (Accident) ಚಿಕಿತ್ಸೆ ಪಡೆಯುತ್ತಿದ್ದ ಮಗ ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ್ದು, ಪೋಷಕರು ಅಂಗಾಂಗ ದಾನ (Organ Donation) ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಕೊಪ್ಪಳದ (Koppal) ಕನಕಗಿರಿ ಮೂಲದ ಆರ್ಯನ್ (22) ಮೃತ ಯುವಕ. 15 ದಿನಗಳ ಹಿಂದೆ ಹಾಸನದ (Hassan) ಸಮೀಪ ಬೈಕ್ ಅಪಘಾತಕ್ಕೊಳಗಾಗಿ, ಆರ್ಯನ್ ಗಾಯಗೊಂಡಿದ್ದ. ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಹುಟ್ಟುಹಬ್ಬದ ದಿನವೇ (ಅ.24) ಯುವಕ ಸಾವನ್ನಪ್ಪಿದ್ದಾನೆ.
ಮೃತಪಟ್ಟ ಮಗನ ಕೈ ಹಿಡಿದು ಪೋಷಕರು ಕೇಕ್ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇಂದು (ಅ.25) ಕೊಪ್ಪಳದ ಕನಕಗಿರಿಯಲ್ಲಿ ಆರ್ಯನ್ ಅಂತ್ಯಕ್ರಿಯೆ ನಡೆಯಲಿದೆ.