Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಶ್ಚಿಮ ಬಂಗಾಳದಲ್ಲಿ ಗಾಯಕಿ ಲಗ್ನಜಿತಾ ಚಕ್ರವರ್ತಿಗೆ ಅವಮಾನ: ‘ಜಾಗೋ ಮಾ’ ಹಾಡಿದ್ದಕ್ಕೆ ವ್ಯಕ್ತಿಯಿಂದ ಹಲ್ಲೆ ಯತ್ನ; ಆರೋಪಿ ಬಂಧನ

Spread the love

ಕೋಲ್ಕತ್ತಾ: ಬಂಗಾಳಿ ಖ್ಯಾತ ಗಾಯಕಿ ಲಗ್ನಜಿತಾ ಚಕ್ರವರ್ತಿ ದೇವರ ಹಾಡು ಹಾಡಿದ್ದಕ್ಕೆ ವ್ಯಕ್ತಿಯೊಬ್ಬ ಆಕ್ಷೇಪಿಸಿ ಕಿರುಕುಳ ನೀಡಿದ್ದಾನೆ.

ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಗಾಯಕಿ ದೂರಿನ ಆಧಾರದ ಮೇಲೆ, ಕಾರ್ಯಕ್ರಮ ನಡೆದ ಶಾಲೆಯ ಸಹ-ಮಾಲೀಕ, ಪ್ರಮುಖ ಆರೋಪಿ ಮೆಹಬೂಬ್ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದೆ.

ಕಾರ್ಯಕ್ರಮದಲ್ಲಿ 45 ನಿಮಿಷ ವಿವಿಧ ಹಾಡುಗಳನ್ನ ಹಾಡಿದ್ದಾರೆ. ನಂತರ ದೇಬಿ ಚೌಧುರಾಣಿ ಎನ್ನುವ ಬಂಗಾಳಿ ಸಿನಿಮಾದ ಜಾಗೋ ಮಾ ಗೀತೆ ಹಾಡಲು ಮುಂದಾಗಿದ್ದರು. ಈ ವೇಳೆ ವೇದಿಕೆ ಏರಿದ ಮೆಹಬೂಬ್ ಮಲ್ಲಿಕ್ ಲಗ್ನಜಿತಾ ಅವರನ್ನು ನಿಂದಿಸಿ ಹೊಡೆಯಲು ಯತ್ನಿಸಿದ್ದಾನೆ. ಜಾಗೋ ಮಾ ಹಾಡಿದ್ದು ಸಾಕು. ಈಗ ಏನಾದರೂ ಸೆಕ್ಯೂಲರ್‌ನಂಥದ್ದು ಹಾಡು ಎಂದಿದ್ದಾನೆ. ಬಳಿಕ ಗಾಯಕಿ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿ ಪೊಲೀಸರಿಗೆ ದೂರು ನೀಡಿದ್ದು, ಮಲ್ಲಿಕ್‌ನನ್ನು ಅರೆಸ್ಟ್ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *