ಶಿವಮೊಗ್ಗ: ಬೈಕ್ ಡಿಕ್ಕಿ ಪರಿಣಾಮ ಸ್ಥಳದಲ್ಲೇ ಯುವತಿ ಸಾವು

ಶಿವಮೊಗ್ಗ : ಎರಡು ಬೈಕ್ ಗಳ ನಡುವಿನ ಅಪಘಾತದಲ್ಲಿ ರಸ್ತೆಗೆ ಬಿದ್ದ ಯುವತಿ ಮೇಲೆ ಖಾಸಗಿ ಬಸ್ ಹರಿದು ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಬಳಿ ನಡೆದಿದೆ.

ಮೃತರನ್ನು ದುಮ್ಮಳ್ಳಿ ತಾಂಡಾದ ಕವಿತಾ (27) ಎಂದು ಗುರುತಿಸಲಾಗಿದೆ. ಮನೆಯಿಂದ ಕೆಲಸಕ್ಕೆ ಶಿವಮೊಗ್ಗಕ್ಕೆ ಅಣ್ಣನ ಜತೆ ಬೈಕ್ ನಲ್ಲಿ ಬರುವಾಗ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿ ಯುವತಿ, ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆಯೇ ಬರುತ್ತಿದ್ದ ಖಾಸಗಿ ಬಸ್ ಹರಿದು ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
