Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಂಪೇಗೌಡ ಏರ್‌ಪೋರ್ಟ್‌ಗೆ ಎರಡನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ: ಶಂಕಿತ ಇಮೇಲ್‌ಗಳ ಮೇಲೆ ತನಿಖೆ ಆರಂಭ

Spread the love

ಬೆಂಗಳೂರು, ಜೂನ್​ 19: ಕಳೆದು ಒಂದು ತಿಂಗಳಿಂದ ಕರ್ನಾಟಕದ ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬಾಂಬ್​ ಬೆದರಿಕೆಯ ಇ-ಮೇಲ್​ಗಳು (Bomb threat) ಬಂದಿವೆ. ಇತ್ತೀಚೆಗೆ ಹಾಸನದ ಮೂರು ಖಾಸಗಿ ಶಾಲೆಗೆ, ಮೈಸೂರಿನ ಖಾಸಗಿ ಶಾಲೆಗೆ, ಬೆಂಗಳೂರಿನ ಹಲವು ಶಾಲೆಗಳು ಮತ್ತು ಪ್ರತಿಷ್ಠಿತ ಹೋಟೆಲ್​​ಗಳಿಗೂ ಬಾಂಬ್​​ ಬೆದರಿಕೆ ಬಂದಿತ್ತು. ಅಷ್ಟೇ ಅಲ್ಲದೆ ಒಂದೇ ವಾರದಲ್ಲಿ ಎರಡೆರಡು ಬಾರಿಗೆ ಕೆಂಪೇಗೌಡ ಏರ್​​​ಪೋರ್ಟ್​ಗೆ ಹುಸಿ ಬಾಂಬ್​ ಮೇಲ್​ ಬಂದಿದೆ. ಹೀಗಾಗಿ ಜನರಲ್ಲಿ ಆತಂಕ ಶುರುವಾಗಿದೆ.

ಒಂದೇ ವಾರದಲ್ಲಿ ಎರಡನೇ ಬಾರಿ ಹುಸಿ ಬಾಂಬ್​

ನಗರದಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್​ಗಳು ಮತ್ತೆ ಆಕ್ಟೀವ್​ ಆಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಮತ್ತೊಂದು ಹುಸಿ ಬಾಂಬ್​ ಮೇಲ್​ ಬಂದಿದೆ. ಒಂದೇ ವಾರದಲ್ಲಿ ಇದು ಎರಡನೇ ಹುಸಿ ಬಾಂಬ್​ ಮೇಲ್ ಆಗಿದೆ. ಜೂ.13, 16ರಂದು ಎರಡು ಬಾಂಬ್​ ಬೆದರಿಕೆ ಇ-ಮೇಲ್ ಬಂದಿತ್ತು.


ಏರ್​​ಪೋರ್ಟ್​ ಭದ್ರತಾ ಪಡೆಗೆ ಮೇಲ್​ ಬಂದಿದ್ದು, ‘ಉಗ್ರ ಅಜ್ಮಲ್ ಕಸಬ್​ ಗಲ್ಲಿಗೆ ಹಾಕಿದ್ದು ಸರಿಯಿಲ್ಲ. ಶೌಚಾಲಯದ ಪೈಪ್​ಲೈನ್​ನಲ್ಲಿ ಬಾಂಬ್ ಇಟ್ಟಿದ್ದು, ಪಝಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲ್ಯಾನ್​ ಎ ಫೇಲ್​​ ಆದರೆ ಪ್ಲ್ಯಾನ್ ಬಿ’ ಎಂದು ಬೆದರಿಕೆ ಸಂದೇಶ ರವಾನಿಸಲಾಗಿದೆ.
ಬೆದರಿಕೆ ಮೇಲ್ ಹಿನ್ನೆಲೆ‌ ಎಲ್ಲೆಡೆ ಪರಿಶೀಲನೆ ಮಾಡಿದ ಅಧಿಕಾರಿಗಳು ಬಳಿಕ ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿಸಿದ್ದಾರೆ. ಸದ್ಯ ಕೆಂಪೇಗೌಡ ಏರ್​​​ಪೋರ್ಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಹುಸಿ‌ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿದ್ದು, ಹುಸಿ‌ ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *