ಮಂಗಳೂರು: ಆರ್.ಟಿ.ಒಗೆ ಬಾಂಬ್ ಬೆದರಿಕೆ

ಮಂಗಳೂರು ನಗರದ ನೆಹರೂ ಮೈದಾನದ ಬಳಿ ಇರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ.) ಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದೆ. ರವಿವಾರ ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳು ಆರ್.ಟಿ.ಓ ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ ಬೆದರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ಈ ಮೇಲ್‌ನಲ್ಲಿ ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಉಲ್ಲೇಖಿಸಲಾಗಿದ್ದು, ಸೋಮವಾರ ಅಪರಾಹ್ನ 12 ಗಂಟೆಯ ಸುಮಾರಿಗೆ ಆರ್.ಟಿ.ಓ ಅಧಿಕಾರಿಯೊಬ್ಬರು ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಾದ ತಕ್ಷಣ ಮಂಗಳೂರು ನಗರದ ಎ.ಎಸ್.ಸಿ. ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ (BDDS) ತಂಡಗಳು ಸ್ಥಳಕ್ಕೆ ತೆರಳಿ ಆರ್.ಟಿ.ಓ ಕಚೇರಿ ಹಾಗೂ ಅದರ ಆವರಣದಲ್ಲಿ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ.
