Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿವೃತ್ತ ಎಸಿಪಿ ಮೇಲೆ ರಾಬರಿ: ವಾಕಿಂಗ್ ಮಾಡುವಾಗ ಚಿನ್ನಾಭರಣ ಕಿತ್ತುಕೊಂಡು ಹಲ್ಲೆ, ಮೂವರು ಆರೋಪಿಗಳ ಬಂಧನ

Spread the love

ಬೆಂಗಳೂರು: ಅವರು ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ . ನಿವೃತ್ತ ಜೀವನ ಕಳೆಯುತ್ತಿದ್ದ ಆ ಪೊಲೀಸ್ ಅಧಿಕಾರಿ ಪ್ರತಿನಿತ್ಯ ವಾಕಿಂಗ್​​ಗೆ ಹೋಗುತ್ತಿದ್ದ ಜಾಗದಲ್ಲೇ ಅದೊಂದು ದಿನ ಸಂಕಷ್ಟಕ್ಕೆ ಸಿಲುಕಿದ್ದರು. ವಾಕಿಂಗ್ ಮಾಡುವಾಗಲೇ ಆಗಂತುಕರ ದಾಳಿಗೆ ಒಳಗಾಗಿ ಚಿನ್ನಾಭರಣ ಕಳೆದುಕೊಂಡಿದ್ದರು. ಸದ್ಯ ಆ ಖತರ್ನಾಕ್ ಆಸಾಮಿಗಳನ್ನು ಪೊಲೀಸರು ಹೆಡೆಮುರಿ  ಕಟ್ಟಿದ್ದಾರೆ.

ಬೆಂಗಳೂರಿನಂತ ದೊಡ್ಡ ನಗರದಲ್ಲಿ ಸುಲಿಗೆ, ರಾಬರಿಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ ನಾಲ್ಕೈದು ಘಟನೆಗಳು ನಡೆಯುತ್ತಲೇ ಇದ್ದು, ಆಟೋ, ಕ್ಯಾಬ್ ಚಾಲಕರು, ಸಾರ್ವಜನಿಕರಿಗೆ ರಾಬರ್ಸ್​​ಗಳು ಕಂಟಕವಾಗ್ತಿದ್ದಾರೆ. ಕಳೆದು ಒಂದು ತಿಂಗಳಲ್ಲಿ 100ಕ್ಕೂ ಹೆಚ್ಚು ಸುಲಿಗೆ, ರಾಬರಿ ಕೇಸ್​ಗಳು ದಾಖಲಾಗಿವೆ. ಸದ್ಯ ಇಂತ ರಾಬರಿ ಪ್ರಕರಣಗಳ ಪಟ್ಟಿಗೆ ನಿವೃತ್ತ ಎಸಿಪಿಯೊಬ್ಬರ ಘಟನೆ ಕೂಡ ಸೇರಿದೆ.

ಕೆಲದಿನಗಳ ಹಿಂದೆ ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ಸುಬ್ಬಣ್ಣ ಎಂದಿನಂತೆ ಮಾರ್ನಿಂಗ್ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಾಸ್ಕ್ ಧರಿಸಿದ್ದ ಇಬ್ಬರು ಆಗಂತುಕರು ಸುಬ್ಬಣ್ಣ ಮೇಲೆ ದಾಳಿ ಮಾಡಿದ್ದರು. ಚಾಕು ತೋರಿಸಿ ಕತ್ತಿನಲ್ಲಿದ್ದ ಸರ ಕಸಿದುಕೊಂಡಿದ್ದರು. ಆಗಂತುಕರ ಈ ದಾಳಿ ತಡೆಯಲು ಮುಂದಾದ ಸುಬ್ಬಣ್ಣ ಕೈಗೆ ಚಾಕುವಿನಿಂದ ಹಲ್ಲೆ ಕೂಡ ಮಾಡಿದ್ದಾರೆ. ಬಳಿಕ ಕೈಯಲ್ಲಿದ್ದ ಚಿನ್ನದ ಬ್ರೇಸ್​ ಲೇಟ್​ ಕಿತ್ಕೊಂಡು ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದರು. ಬಳಿಕ ಸುಬ್ಬಣ್ಣ ಸಂಜಯ್ ನಗರ ಪೊಲೀಸ್ ಠಾಣೆಗೆ ರಾಬರಿ ಬಗ್ಗೆ ದೂರು ನೀಡಿದ್ದು, ಪೊಲೀಸರು ಡಿಜೆ ಹಳ್ಳಿಯ ಮೂವರು ರಾಬರ್ಸ್​ಗಳನ್ನ ಹೆಡೆಮುರಿ ಕಟ್ಟಿದ್ದಾರೆ.

ಮೂವರ ಬಂಧನ

ಮೊಹಮ್ಮದ್ ಸಲ್ಮಾನ್, ಮೋಸೀನ್, ಮೊಹಮ್ಮದ್ ಇರ್ಫಾನ್ ಬಂಧಿತರು. ಒಂದೇ ಏರಿಯಾದ ಈ ಮೂವರಲ್ಲಿ ಮೋಸಿನ್ ಮತ್ತು ಇರ್ಫಾನ್ ರಾಬರಿ ಮಾಡಿದರೆ, ಸಲ್ಮಾನ್ ತಾನು ಕದ್ದ ಬೈಕ್​ನಲ್ಲಿ ಇನ್ನಿಬ್ಬರಿಗೆ ಸಹಾಯ ಮಾಡಿದ್ದ. ಹೀಗಾಗಿ ಮೂರು ಜನರನ್ನ ಬಂಧಿಸಿರುವ ಸಂಜಯ್ ನಗರ ಪೊಲೀಸರು ಆರೋಪಿಗಳನ್ನ ಜೈಲಿಟ್ಟಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಲ್ಲಿ ಪ್ರತಿನಿತ್ಯ ರಾಬರಿ, ಸುಲಿಗೆ ಕೇಸ್​ಗಳು ಹೆಚ್ಚಾಗುತ್ತಿವೆ. ಮಾರಕಾಸ್ತ್ರಗಳನ್ನ ತೋರಿಸಿ ಜನರನ್ನ ಸುಲಿಗೆ ಮಾಡಲಾಗುತ್ತಿದೆ. ಖಾಕಿ ಪಡೆ ಎಷ್ಟೇ ಅಲರ್ಟ್ ಆಗಿದ್ದರೂ, ಎಷ್ಟೇ ಅರೆಸ್ಟ್ ಮಾಡಿದರೂ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವ ವ್ಯಕ್ತಿಗಳು ಮತ್ತೆ ಮತ್ತೆ ಇದೇ ಕೆಲಸಕ್ಕೆ ಇಳಿದು ಸುಲಭವಾಗಿ ಹಣ ಮಾಡುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *