Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಕ್ಕಟ್ಟಿನ ನಡುವೆ ಭಾರತಕ್ಕೆ ನಿರಾಳ: 20,400 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಜಗ್ ವಿಕ್ರಮ್’ ಹಡಗು ಗುಜರಾತ್ ಬಂದರಿಗೆ ಆಗಮನ

Spread the love

ಅಹ್ಮದಾಬಾದ್: ಪಶ್ಚಿಮ ಏತ್ಯಾ ಬಿಕ್ಕಟ್ಟಿನ ನಡುವೆ 20,400 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಭಾರತದ ‘ಜಗ್ ವಿಕ್ರಮ್ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಮೆರಿಕ ಹಾಗೂ ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಹಿನ್ನೆಲೆಯಲ್ಲಿ ಈ ಹಡಗು ಹಾರ್ಮುಝ್ ಜಲಸಂಧಿಯನ್ನು ದಾಟಿತ್ತು. ಅದು ಮಂಗಳವಾರ ರಾತ್ರಿ ಕಚ್ಚಿನ ಡಿಪಿಎ ಕಾಂಡ್ಲಾ ಬಂದರಿನ ತೈಲ ಜಟ್ಟಿ-1ರಲ್ಲಿ ಲಂಗರು ಹಾಕಿದೆ ಎಂದು ದೀನ್ ದಯಾಳ್ ಬಂದರು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ ತಿಂಗಳ ಆರಂಭದಲ್ಲಿ ಪರ್ಶಿಯನ್ ಕೊಲ್ಲಿಯಿಂದ ನಿರ್ಗಮಿಸಿದ 9ನೇ ಹಡಗು ಇದಾಗಿದೆ. ಈಗ ಭಾರತದ ಇತರ 15 ಹಡಗುಗಳು ಈ ವಲಯದಲ್ಲಿದ್ದು ಅನುಮತಿಗಾಗಿ ಕಾಯುತ್ತಿವೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
‘ಜಗ್ ವಿಕ್ರಮ್ ಹಡಗು ಎಪ್ರಿಲ್ 11ರಂದು ಹಾರ್ಮುಝ್ ಜಲ ಸಂಧಿಯನ್ನು ದಾಟಿತ್ತು. ಇದರೊಂದಿಗೆ ಎರಡು ವಾರಗಳ ಕದನ ವಿರಾಮ ಘೋಷಿಸಿದ ಬಳಿಕ ಅಲ್ಲಿಂದ ಸಾಗಿ ಬಂದ ಮೊದಲ ಹಡಗು ಇದಾಗಿದೆ.


Spread the love
Share:

administrator

Leave a Reply

Your email address will not be published. Required fields are marked *