Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಿಲಯನ್ಸ್‌ನ ಮೆಗಾ ಯೋಜನೆಗಳು: ಜಿಯೋ ಐಪಿಒ, ವಿಶ್ವದ ಅತಿದೊಡ್ಡ ಇಂಧನ ಸಂಕೀರ್ಣ ಘೋಷಣೆ

Spread the love

ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಸಂಸ್ಥೆಯ 48ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಭಾರೀ ದೊಡ್ಡ ಗುರಿ ಮತ್ತು ಯೋಜನೆಗಳನ್ನು ಘೋಷಿಸಲಾಗಿದೆ. ಎಜಿಎಂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ (Mukesh Ambani), ತಮ್ಮ ಕಂಪನಿಯ ಮುಂದಿನ ಯೋಜನೆಗಳನ್ನು ವಿವರಿಸಿದ್ದಾರೆ. ಎಐನಿಂದ ಹಿಡಿದು ಐಪಿಒವರೆಗೆ ಎಲ್ಲವೂ ಕೂಡ ಆಕರ್ಷಕ ಯೋಜನೆಗಳೇ ಇವೆ.

ಟೆಸ್ಲಾದ ಗಿಗಾ ಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದ ಎನರ್ಜಿ ಕಾಂಪ್ಲೆಕ್ಸ್

ಟೆಸ್ಲಾದ ಗೀಗಾ ಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದಿರುವ ಗಿಗಾ ಎನರ್ಜಿ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಗುಜರಾತ್​ನ ಜಾಮನಗರ್​ನಲ್ಲಿ ನಿರ್ಮಾಣವಾಗುತ್ತಿರುವ ಧೀರೂಭಾಯಿ ಅಂಬಾನಿ ಗಿಗಾ ಎನರ್ಜಿ ಕಾಂಪ್ಲೆಕ್ಸ್ ವಿಶ್ವದಲ್ಲೇ ಅತಿದೊಡ್ಡ ನ್ಯೂ ಎನರ್ಜಿ ಮತ್ತು ಸಾಂಪ್ರದಾಯಿಕ ಎನರ್ಜಿ ಕಾಂಪ್ಲೆಕ್ಸ್ ಎನಿಸಲಿದೆ. ರಿಲಾಯನ್ಸ್​ನ ಸೌರ ವಿದ್ಯುತ್ ಘಟಕವು ಸಿಂಗಾಪುರಕ್ಕಿಂತ ಗಾತ್ರದಲ್ಲಿ ಮೂರು ಪಟ್ಟು ದೊಡ್ಡದಿರಲಿದೆ. 44 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಗೀಗಾ ಎನರ್ಜಿ ಕಾಂಪ್ಲೆಕ್ಸ್ ನಿರ್ಮಾಣ ಆಗುತ್ತಿದೆ.

ಜಿಯೋ ಐಪಿಒ ಷೇರುಪೇಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ

ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಿಲಾಯನ್ಸ್ ಜಿಯೋ ಸಂಸ್ಥೆ ಮುಂದಿನ ವರ್ಷ ಷೇರು ಮಾರುಕಟ್ಟೆ ಪ್ರವೇಶಿಸಲಿದೆ. ಮುಕೇಶ್ ಅಂಬಾನಿ ಈ ಸಂಗತಿಯನ್ನು ಆರ್​ಐಎಲ್ ಎಜಿಎಂ ಸಭೆಯಲ್ಲಿ ತಿಳಿಸಿದ್ದಾರೆ. 2026ರ ಮೊದಲಾರ್ಧದಲ್ಲಿ ರಿಲಾಯನ್ಸ್ ಜಿಯೋ ಐಪಿಒ ಬಿಡುಗಡೆ ಆಗಬಹುದು. ಅದಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡುತ್ತಿರುವುದಾಗಿ ಅಂಬಾನಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ರಿಲಾಯನ್ಸ್ ಜಿಯೋದ್ದು ಅತಿದೊಡ್ಡ ಐಪಿಒ ಆಗಬಹುದು.

ಎಐ ಕ್ಷೇತ್ರಕ್ಕೆ ರಿಲಾಯನ್ಸ್ ದೊಡ್ಡ ಹೆಜ್ಜೆ

ಮುಕೇಶ್ ಅಂಬಾನಿ ಅವರು ಎಜಿಎಂ ಸಭೆಯಲ್ಲಿ ಮಾಡಿದ ಮತ್ತೊಂದು ಮುಖ್ಯ ಘೋಷಣೆ ಎಐ ಸೆಕ್ಟರ್​ನದ್ದು. ರಿಲಾಯನ್ಸ್ ಇಂಟೆಲಿಜೆನ್ಸ್ ಎನ್ನುವ ಹೊಸ ಅಂಗ ಸಂಸ್ಥೆಯ ಸ್ಥಾಪನೆಯನ್ನು ಅವರು ಘೋಷಿಸಿದ್ದಾರೆ. ಈ ಸಂಸ್ಥೆಯು ಗೂಗಲ್ ಮತ್ತು ಮೆಟಾ ಜೊತೆ ಸಹಭಾಗಿತ್ವ ಹೊಂದಿರಲಿದೆ.

ಅಂಬಾನಿ ಅವರ ಎಐ ಅನ್ನು ಕಾಮಧೇನು ಎಂದು ಬಣ್ಣಿಸಿದ್ದಾರೆ. ಮುಂದಿನ ತಲೆಮಾರಿನ ಎಐ ಇನ್​ಫ್ರಾಸ್ಟ್ರಕ್ಚರ್ ಅನ್ನು ದೇಶೀಯವಾಗಿ ನಿರ್ಮಿಸಲಾಗುತ್ತದೆ. ಗಿಗಾವ್ಯಾಟ್ ಮಟ್ಟದಲ್ಲಿ ಡಾಟಾ ಸೆಂಟರ್​ಗಳನ್ನು ನಿರ್ಮಿಸಲಿದೆ. ಇದಕ್ಕೆ ಹಸಿರು ಇಂಧನದ ವಿದ್ಯುತ್ ಶಕ್ತಿ ಒದಗಿಸಲಾಗುವುದು ಎಂದಿದ್ದಾರೆ. ಜಾಮ್​ನಗರದಲ್ಲಿ ಈ ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣವಾಗುತ್ತಿದೆ.

ರಿಲಾಯನ್ಸ್​ನ ಅತ್ಯುತ್ತಮ ಶಕ್ತಿ ಇನ್ನೂ ಹೊರಹೊಮ್ಮಿಲ್ಲ…

ರಿಲಾಯನ್ಸ್ ಇಂಡಸ್ಟ್ರೀಸ್​ನ 48ನೇ ಎಜಿಎಂ ಸಭೆಯಲ್ಲಿ ಅಂಬಾನಿ ಅವರು ತಮ್ಮ ಸಂಸ್ಥೆಯ ಅತ್ಯುತ್ತಮ ಶಕ್ತಿ ಇನ್ನಷ್ಟೇ ಬರಬೇಕಿದೆ ಎಂದು ಹೇಳುವ ಮೂಲಕ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ. 2027ರೊಳಗೆ ರಿಲಾಯನ್ಸ್ ಎರಡು ಪಟ್ಟು ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *