“ನೂರು ರೂಪಾಯಿನೂ ಕೊಡಲ್ಲ” ಎಂದಿದ್ದೇ ತಪ್ಪಾಯ್ತು: ರಾಜಸ್ಥಾನದ ಉದ್ಯಮಿ ರಮೇಶ್ ರುಲಾನಿಯಾ ಹತ್ಯೆ

ಜೈಪುರ: ನೂರು ರೂಪಾಯಿನೂ ಕೊಡಲ್ಲ ಎಂದಿದ್ದಕ್ಕೆ ರಾಜಸ್ಥಾನದ ಉದ್ಯಮಿ(Businessman)ಯನ್ನು ರೋಹಿತ್ ಗೋದಾರ ಗ್ಯಾಂಗ್ ಗುಂಡಿಕ್ಕಿ ಹತ್ಯೆ(Murder) ಮಾಡಿರುವ ಘಟನೆ ವರದಿಯಾಗಿದೆ. ನಗರದಲ್ಲಿ ಬೈಕ್ ಶೋ ರೂಂ ಹಾಗೂ ಹೋಟೆಲ್ ಹೊಂದಿರುವ 40 ವರ್ಷದ ರಮೇಶ್ ರುಲಾನಿಯಾ ಅವರ ಮೇಲೆ ಮುಸುಕುಧಾರಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಬೆಳಗಿನ ಜಾವ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿ ಎರಡನೇ ಮಹಡಿಯಲ್ಲಿರುವ ಜಿಮ್‌ಗೆ ಪ್ರವೇಶಿಸಿ ರುಲಾನಿಯಾ ಮೇಲೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.

ಪಶ್ಚಿಮ ರಾಜಸ್ಥಾನದಲ್ಲಿ ರೋಹಿತ್ ಗ್ಯಾಂಗ್ನ ಹವಾ ಹೆಚ್ಚಿದೆ. ಪೋರ್ಚುಗಲ್‌ನಲ್ಲಿ ಇದ್ದಾರೆ ಎಂದು ನಂಬಲಾದ ರೋಹಿತ್ ಗೋದಾರನ ಸಹಚರ ವೀರಂದರ್ ಚರಣ್, ರುಲಾನಿಯಾಗೆ ಹಣ ಕೊಡುವಂತೆ ಕರೆ ಮಾಡಿ ಬೆದರಿಕೆ ಹಾಕಿದ್ದ, ಆ ಸಮಯದಲ್ಲಿ ರುಲಾನಿಯಾ ನಿನಗೆ 100 ರೂಪಾಯಿನೂ ಕೊಡಲ್ಲ ಎಂದು ಹೇಳಿ ಕರೆ ಕಟ್ ಮಾಡಿದ್ದರು.
ಅದೇ ಕೋಪವನ್ನಯ ಮನಸ್ಸಿನಲ್ಲಿಟ್ಟುಕೊಂಡಿದ್ದ ಆತ ರುಲಾನಿಯಾ ಹತ್ಯೆಗೆ ಸಂಚು ರೂಪಿಸಿದ್ದ, ಯಾರನ್ನೂ ಮರೆಯುವುದಿಲ್ಲ ಎಲ್ಲವೂ ನೆನಪಿರುತ್ತದೆ ಎಂದು ಹೇಳುತ್ತಾ ಗುಂಡು ಹಾರಿಸಿದ್ದಾನೆ. ನಮ್ಮ ಕರೆಗಳನ್ನು ಯಾರು ನಿರ್ಲಕ್ಷಿಸುತ್ತಾರೋ ಅಥವಾ ಕಿವಿಗೊಡುವುದಿಲ್ಲವೋ ಸಿದ್ಧರಾಗಿರಿ ಮುಂದಿನ ಸರದಿ ನಿಮ್ಮದೇ ಎಂದು ಹೇಳಿದ್ದಾನೆ. ಇತ್ತೀಚೆಗೆ ಈ ಪ್ರದೇಶದ ಹಲವಾರು ಇತರ ಉದ್ಯಮಿಗಳಿಗೂ ಇದೇ ರೀತಿಯ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿದೆ.
ರೋಹಿತ್ ಗೋದಾರ ಗ್ಯಾಂಗ್ ರಾವತರಾಮ್ ಸ್ವಾಮಿ, ಅಲಿಯಾಸ್ ರೋಹಿತ್ ಗೋದಾರ, ರಾಜಸ್ಥಾನದ ಬಿಕಾನೇರ್‌ನ ಕುಖ್ಯಾತ ಗ್ಯಾಂಗ್ಸ್ಟರ್ ಆಗಿದ್ದು, ಪ್ರಸ್ತುತ ಪೋರ್ಚುಗಲ್‌ನಲ್ಲಿದ್ದಾನೆಂದು ಹೇಳಲಾಗುತ್ತದೆ. ಡಿಸೆಂಬರ್ 2022 ರಲ್ಲಿ ಸಿಕಾರ್‌ನಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಗ್ಯಾಂಗ್ಸ್ಟರ್ ರಾಜು ಥೆಹತ್ ಹತ್ಯೆಯ ಮಾಸ್ಟರ್ ಮೈಂಡ್ ಕೂಡ ಈತನೇ ಎಂದು ನಂಬಲಾಗಿದೆ.
ಮೇ 2022 ರಲ್ಲಿ ನಡೆದ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲೂ ಗೋದಾರಾ ಹೆಸರು ಕೇಳಿಬಂದಿತ್ತು. ಡಿಸೆಂಬರ್ 2023 ರಲ್ಲಿ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ ಅವರ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಮಾಜಿ ಅಧ್ಯಕ್ಷ ರೋನಕ್ ಖತ್ರಿ ಕೂಡ ಇತ್ತೀಚೆಗೆ ತಮಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ 5 ಕೋಟಿ ರೂ.ಗೆ ಬೆದರಿಕೆ ಕರೆ ಬಂದಿತ್ತು ಎಂದು ಆರೋಪಿಸಿದ್ದರು. ಕರೆ ಮಾಡಿದ ವ್ಯಕ್ತಿ ರೋಹಿತ್ ಗೋದಾರ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡು ಹಣ ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಕರೆ ಬಂದ ಕೂಡಲೇ, ಅದೇ ಸಂಖ್ಯೆಯಿಂದ ನನಗೆ ಕೊಲೆ ಬೆದರಿಕೆ ಮತ್ತು ಬೇಡಿಕೆಯನ್ನು ಪುನರಾವರ್ತಿಸುವ ವಾಟ್ಸಾಪ್ ಸಂದೇಶ ಬಂದಿತು ಎಂದು ಖತ್ರಿ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.