Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಣಬೀರ್‌-ಆಲಿಯಾ ಕನಸಿನ ಮನೆ ಸಿದ್ಧ: 250 ಕೋಟಿ ರೂ. ವೆಚ್ಚದ ಐಷಾರಾಮಿ ಬಂಗಲೆ

Spread the love

ಬಾಲಿವುಡ್‌ನ ಖ್ಯಾತ ದಂಪತಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಅವರ ಕನಸಿನ ಮನೆ ಸಿದ್ಧವಾಗಿದೆ (Alia Bhatt And Ranbir Kapoor). ಈ ಮನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅದ್ಧೂರಿ ಮನೆಯ ನಿರ್ಮಾಣ ವರ್ಷಗಳಿಂದಲೂ ನಡೆಯುತ್ತಿತ್ತು.

ಅಂತಿಮವಾಗಿ ಸಿದ್ಧವಾಗಿದೆ.. ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ನಿವಾಸ ಒಂದು ದೊಡ್ಡದಾದ ಬಂಗಲೆ. ಒಟ್ಟು ಆರು ಅಂತಸ್ತುಗಳಿವೆ. ಐಷಾರಾಮಿಯಾಗಿದೆ.

ವೆಚ್ಚ ಎಷ್ಟು?

ಸೋಷಿಯಲ್‌ ಮೀಡಿಯಾದಲ್ಲಿ ರಣಬೀರ್‌ ಕಪೂರ್‌-ಆಲಿಯಾ ಜೋಡಿಯ 6 ಅಂತಸ್ತಿನ ನಿವಾಸದ ಫಸ್ಟ್‌ಲುಕ್‌ ವೈರಲ್‌ ಆಗುತ್ತಿದೆ. ಹೊರಗಿನಿಂದ ನೋಡೋಕೆ ಇಷ್ಟು ಅದ್ಧೂರಿಯಾಗಿ ಕಾಣಿಸುವ ಮನೆ ಒಳಗೆ ಹೇಗಿರಬಹುದು ಎಂಬ ಕುತೂಹಲ ಜಾಸ್ತಿಯಾಗಿದೆ. ಆಯತಾಕಾರದ ಈ ಕಟ್ಟಡವು ಗ್ಲಾಸ್‌ಹೌಸ್‌ ಮಾದರಿಯಲ್ಲಿ ಕಾಣುತ್ತಿದೆ. ಈ ಮನೆಯನ್ನ ಬರೋಬ್ಬರಿ 250 ಕೋಟಿ ರೂಪಾಯಿ ಖರ್ಚಿನಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗಿದೆ.
ಅಂದಹಾಗೇ, ಇದು ಕೇವಲ ಒಂದು ಐಷಾರಾಮಿ ಮನೆಯಲ್ಲ. ಇದಕ್ಕೊಂದು ಪರಂಪರೆಯಿದೆ. ಇಲ್ಲಿರುವ ಆಸ್ತಿ ಹಿಂದೆ ರಾಜ್‌ ಕಪೂರ್‌ ಮತ್ತು ಕೃಷ್ಣಾ ರಾಜ್‌ಕುಮಾರ್‌ಗೆ ಸೇರಿದ್ದಾಗಿತ್ತು. ಬಳಿಕ ಇದನ್ನ ಅವರು ರಿಷಿ ಕಪೂರ್‌ ಮತ್ತು ನೀತು ಕಪೂರ್‌ಗೆ ಹಸ್ತಾಂತರ ಮಾಡಿದರು. ಅದೇ ಜಾಗದಲ್ಲಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಇದೀಗ ಹೊಸ ಮನೆಯನ್ನ ಕಟ್ಟಿಸಿದ್ದಾರೆ. ಈ ಮೂಲಕ ಕಪೂರ್‌ ಮನೆತನದ ನೆನಪನ್ನ-ಪೀಳಿಗೆಯನ್ನ ಇಲ್ಲಿ ಹಿಡಿದಿಟ್ಟಂತಾಗಿದೆ. ಅದ್ಭುತವಾಗಿ, ಸ್ಟೈಲೀಶ್‌ ಆಗಿ ಬಂಗಲೆ ಕಟ್ಟಿಸಲಾಗಿದೆ. ಹೊರಭಾಗಕ್ಕೆ ಸ್ವಲ್ಪ ಬೂದು ಬಣ್ಣದ ಪೇಂಟಿಂಗ್‌ ಮಾಡಲಾಗಿದೆ. ಪ್ರತಿ ಬಾಲ್ಕನಿಯಲ್ಲೂ ಸಸಿಗಳು ಇವೆ. ಮೊದಲ ಮಹಡಿಯಲ್ಲಿ ಲೈಟ್‌ ಉರಿಯುತ್ತಿದೆ.

ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಇಬ್ಬರೂ ತಮ್ಮ ಮಗಳು ರಾಹಾ ಜೊತೆ ಈ ಜಾಗಕ್ಕೆ ಆಗಾಗ ಭೇಟಿ ಕೊಡುತ್ತಿದ್ದರು. ಕಟ್ಟಡ ಕಾಮಗಾರಿ ಕೆಲಸವನ್ನ ಪರಿಶೀಲನೆ ಮಾಡುತ್ತಿದ್ದರು. ಇದೀಗ ಸಂಪೂರ್ಣವಾಗಿ ಮನೆ ನಿರ್ಮಾಣಗೊಂಡಿದ್ದು, ರಣಬೀರ್‌ ಕಪೂರ್‌, ಆಲಿಯಾ ಭಟ್‌ ಶೀಘ್ರದಲ್ಲೇ ಇಲ್ಲಿಗೆ ಶಿಫ್ಟ್‌ ಆಗಲಿದ್ದಾರೆ ಎಂದು ಹೇಳಲಾಗಿದೆ.

ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ 2022ರ ಏಪ್ರಿಲ್‌ನಲ್ಲಿ ಮದುವೆಯಾಗಲಿದ್ದಾರೆ. ಈಗಾಗಲೇ ಒಬ್ಬಳು ಮಗಳು ಜನಿಸಿದ್ದಾಳೆ. ಆಲಿಯಾ ಭಟ್ ಕೊನೆಯ ಬಾರಿಗೆ ಜಿಗ್ರಾ ಚಿತ್ರದಲ್ಲಿ ಕಾಣಿಸಿಕೊಂಡರು. ವಾಸನ್ ಬಾಲಾ ನಿರ್ದೇಶನದ ಈ ಚಿತ್ರದಲ್ಲಿ ವೇದಾಂಗ್ ರೈನಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ, ಅವರು ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್ ಪ್ರಾಜೆಕ್ಟ್ ಆಲ್ಫಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ರಣಬೀರ್ ಕಪೂರ್ ಅವರು ನಿತೇಶ್ ತಿವಾರಿ ಅವರ ರಾಮಾಯಣ: ಭಾಗ 1 ಗಾಗಿ ಸಜ್ಜಾಗುತ್ತಿದ್ದಾರೆ. ಈ ಚಿತ್ರ 2026 ರ ದೀಪಾವಳಿಗೆ ಚಿತ್ರಮಂದಿರಗಳಿಗೆ ಬರಲಿದೆ.


Spread the love
Share:

administrator

Leave a Reply

Your email address will not be published. Required fields are marked *