Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ಯೋಂಗ್ಯಾಂಗ್: ಅಮೆರಿಕಕ್ಕೆ ಸವಾಲೆಸೆಯಬಲ್ಲ ಬಲಿಷ್ಠ ಕ್ಷಿಪಣಿ ಇಂಜಿನ್ ಪರೀಕ್ಷಿಸಿದ ಉತ್ತರ ಕೊರಿಯಾ

Spread the love

ಪ್ಲೋಂಗ್ಯಾಂಗ್: ಕ್ಷಿಪಣಿಗಳಿಗೆ ಬಳಸುವ ಸುಧಾರಿತ ತಂತ್ರಜ್ಞಾನದ ಬಲಿಷ್ಠ ಇಂಧನ ಇಂಜಿನ್ ಪರೀಕ್ಷೆಯನ್ನು ರವಿವಾರ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ವೀಕ್ಷಿಸಿದರು.
ಇದು ದೇಶದ ಕಾರ್ಯತಂತ್ರದ ಮಿಲಿಟರಿ ಸಾಮರ್ಥ್ಯಕ್ಕೆ ಉತ್ತೇಜನ ನೀಡಲಿದೆ ಎಂದು ಅವರು ಶ್ಲಾಘಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಕೆಸಿಎನ್‌ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಮುಖ್ಯ ಭೂಭಾಗವನ್ನು ಗುರಿಯಾಗಿಸುವ ಸಾಮರ್ಥ್ಯವಿರುವ ಕ್ಷಿಪಣಿಯ ಇಂಜಿನ್ ಪರೀಕ್ಷೆ ಇದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಿಮ್, “ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭಿಸುವ ಮೂಲಕ ಅಮೆರಿಕ ಜಾಗತಿಕ ಭಯೋತ್ಪಾದನೆ ಮತ್ತು ಆಕ್ರಮಣ ಕೃತ್ಯಗಳನ್ನು ಮುಂದುವರಿಸಿದೆ” ಎಂದು ಆರೋಪಿಸಿದರು.
ಉತ್ತರ ಕೊರಿಯಾವು ಪರಮಾಣು ಶಸ್ತ್ರಾಸ್ತ್ರ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದರು ಎಂದು ವರದಿ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *