Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು: ಹದಿನೆಂಟು ಮೆಟ್ಟಿಲೇರಿ ವಿಶೇಷ ಪೂಜೆ ಸಲ್ಲಿಸಿದ ದೇಶದ ಪ್ರಥಮ ಪ್ರಜೆ

Spread the love

ಶಬರಿಮಲೆ ಅಕ್ಟೋಬರ್ 22: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇಂದು ಬೆಳಿಗ್ಗೆ ಪಂಪಾ ಮೂಲಕ ವಿಶೇಷ ವಾಹನದಲ್ಲಿ ಶಬರಿಮಲೆಗೆ ತೆರಳಿದ ರಾಷ್ಟ್ರಪತಿಗಳು ಹದಿನೆಂಟು ಮೆಟ್ಟಿಲೇರಿ ಅಯ್ಯಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಾಲ್ಕು ದಿನಗಳ ಕಾಲ ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಶಬರಿಮಲೆಗೆ ಆಗಮಿಸಿದ್ದಾರೆ. ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಕೇರಳದ ಪಟ್ಟಣಂತಿಟ್ಟ ಬಳಿಯ ಪ್ರಮದಂ ಗೆ ಬಂದ ಅವರು ಬಳಿಕ ವಾಹನದಲ್ಲಿ ಪಂಪೆಗೆ ಆಗಮಿಸಿದ್ದಾರೆ. ಪಂಪಾ ನದಿಯಲ್ಲಿ ಸ್ನಾನ ಮಾಡುವ ಬದಲು, ರಾಷ್ಟ್ರಪತಿಗಳು ತಮ್ಮ ಪಾದಗಳನ್ನು ತೊಳೆಯುವ ಮೂಲಕ ಸಾಂಪ್ರದಾಯಿಕ ಶುದ್ಧೀಕರಣ ಆಚರಣೆಯನ್ನು ಮಾಡಿದ್ದಾರೆ. ಬಳಿಕ ಗಣಪತಿ ದೇವಸ್ಥಾನದಲ್ಲಿ ಸಂಪ್ರದಾಯಿಕವಾಗಿ ಇರುಮುಡಿಯನ್ನು ಕಟ್ಟಿಕೊಂಡು ವಿಶೇಷ ವಾಹನದಲ್ಲಿ ಶಬರಿಮಲೆಗೆ ತೆರಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *