Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಾಜಾ ಯುದ್ಧಕ್ಕೆ ತೆರೆ ಬೀಳುವ ಸಾಧ್ಯತೆ: ಷರತ್ತಿಲ್ಲದೆ ಕದನವಿರಾಮಕ್ಕೆ ಹಮಾಸ್ ಒಪ್ಪಿಗೆ, ಇಸ್ರೇಲ್‌ನಿಂದ ಪ್ರತಿಕ್ರಿಯೆ ನಿರೀಕ್ಷೆ

Spread the love

ಗಾಝಾ : ಹಮಾಸ್ ಉಗ್ರ ಸಂಘಟನೆ 2023ರ ಅಕ್ಟೋಬರ್ 7 ರಂದು ಏಕಾಏಕಿ ಇಸ್ರೇಲ್ ಮೇಲೆ ದಾಳಿ ನಡೆಸಿ ನರಮೇಧ ನಡೆಸಿತ್ತು. ಮಕ್ಕಳು, ಹೆಣ್ಣುಮಕ್ಕಳು, ವೃದ್ಧರು ಸೇರಿದಂತೆ ಇಸ್ರೇಲಿಗರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿತ್ತು. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಹಮಾಸ್ ಮೇಲೆ ಪ್ರತಿ ದಾಳಿ ಆರಂಭಿಸಿತ್ತು.

ಪ್ಯಾಲಿಸ್ತೇನ್ ನಿವಾಸವಾಗಿರುವ ಗಾಜಾ ಪಟ್ಟಿ ಮೇಲೆ ದಾಳಿ ತೀವ್ರಗೊಳಿಸಿತು. ಇದರ ಸುತ್ತಮುತ್ತಲಿನ ಲೆಬನಾನ್, ಜೋರ್ಡಾನ್ , ಸಿರಿಯಾ ಸೇರಿದಂತೆ ಹಲವು ಮುಸ್ಲಿಮ್ ರಾಷ್ಟ್ರಗಳು ಇಸ್ರೇಲ್ ಮೇಲೆ ಮುಗಿಬಿದ್ದಿತ್ತು. ಆದರೆ ಇಸ್ರೇಲ್ ಏಕಾಂಗಿಯಾಗಿ ಹೋರಾಟ ನಡೆಸಿತ್ತು. ಬರೋಬ್ಬರಿ 22 ತಿಂಗಳನಿಂದ ಇಸ್ರೇಸ್ ಹಮಾಸ್ ವಿರುದ್ದ ಹೋರಾಡುತ್ತಿದೆ. ಇಸ್ರೇಲ್ ದಾಳಿಯಿಂದ ಕಂಗೆಟ್ಟ ಹಮಾಸ್ ಇದೀಗ ಯಾವುದೇ ಷರತ್ತಿಲ್ಲದೆ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.

22 ತಿಂಗಳಿಗೂ ಹೆಚ್ಚು ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲು ಹೊಸ ರಾಜತಾಂತ್ರಿಕ ಪ್ರಯತ್ನದ ನಂತರ, ಹಮಾಸ್ ಯಾವುದೇ ತಿದ್ದುಪಡಿ, ಷರತ್ತುಗಳ ಬೇಡಿಕೆ ಇಲ್ಲದೆ ಗಾಜಾಕ್ಕೆ ಹೊಸ ಯುದ್ಧ ವಿರಾಮ ಪ್ರಸ್ತಾಪವನ್ನು ಒಪ್ಪಿಕೊಂಡಿದೆ ಮೂಲವೊಂದು ಎಎಫ್‌ಪಿ ತಿಳಿಸಿದೆ ಎಂದು ವರದಿಯಾಗಿದೆ. ಮಧ್ಯವರ್ತಿಗಳಾದ ಈಜಿಪ್ಟ್ ಮತ್ತು ಕತಾರ್, ಯುನೈಟೆಡ್ ಸ್ಟೇಟ್ಸ್ ಬೆಂಬಲದೊಂದಿಗೆ, ಸಂಘರ್ಷದಲ್ಲಿ ಶಾಶ್ವತ ಯುದ್ಧವಿರಾಮವನ್ನು ಖಚಿತಪಡಿಸಿಕೊಳ್ಳಲು ಹೆಣಗಾಡುತ್ತಿವೆ. ಇದು ಗಾಜಾ ಪಟ್ಟಿಯಲ್ಲಿ ತೀವ್ರ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿದೆ. ಆದರೆ ಮಧ್ಯವರ್ತಿಗಳಿಂದ ಹೊಸ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ, ಹಮಾಸ್ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದೆ.

ಯಾವುದೇ ಪ್ರತಿಕ್ರಿಯೆ ನೀಡದ ಇಸ್ರೇಲ್

ಮಧ್ಯವರ್ತಿಗಳ ಮೂಲಕ ಒಪ್ಪಂದಕ್ಕೆ ಹಮಾಸ್ ಸಂಪೂರ್ಣ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈ ಕುರಿತು ಇಸ್ರೇಲ್ ಜೊತೆ ಮಧ್ಯವರ್ತಿಗಳು ಮಾತುಕತೆ ನಡೆಸಿ ಅಂತಿಮ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದೆಡೆ ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಅನ್ನೋ ಸುದ್ದಿ ಎಲ್ಲೆಡೆ ಹರಡಿದೆ. ಆದರೆ ಇಸ್ರೇಲ್ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಆರಂಭಿಕ 60 ದಿನಗಳ ಯುದ್ಧವಿರಾಮ ಮತ್ತು ಎರಡು ಹಂತಗಳಲ್ಲಿ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಗಾಜಾ ನಗರ ಮತ್ತು ಹತ್ತಿರದ ನಿರಾಶ್ರಿತರ ಶಿಬಿರಗಳಿಗೆ ಯುದ್ಧವನ್ನು ವಿಸ್ತರಿಸುವ ಯೋಜನೆಗಳನ್ನು ಅನುಮೋದಿಸಿದ ಬೆನ್ನಲ್ಲೇ ಇದೀಗ ಕದನವಿರಾಮದ ಮಾತುಗಳು ಕೇಳಿಬರುತ್ತಿದೆ. ಈ ಕದನ ವಿರಾಮದಲ್ಲಿ 10 ಇಸ್ರೇಲಿಗಳನ್ನು ಜೀವಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹಮಾಸ್‌ನ 2023 ರ ಅಕ್ಟೋಬರ್ ದಾಳಿಯ ಸಮಯದಲ್ಲಿ ತೆಗೆದುಕೊಂಡ 251 ಒತ್ತೆಯಾಳುಗಳಲ್ಲಿ, 49 ಇನ್ನೂ ಗಾಜಾದಲ್ಲಿ ಇರಿಸಿದ್ದಾರೆ. ಈ ಪೈಕಿ 27 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇತ್ತ ಮೊದಲ ಹಂತದಲ್ಲಿ 10, ಎರಡನೇ ಹಂತದಲ್ಲಿ ಉಳಿದ ಜೀವಂತ ಸೆರೆಯಾಳುಗಳ ಬಿಡುಗಡೆ ಮಾಡಲಾಗುತ್ತದೆ ಎಂದು ಹಮಾಸ್ ಮೂಲಗಳು ಮಧ್ಯವರ್ತಿಗಳ ಜೊತೆ ಹೇಳಿದೆ ಎಂದು ವರದಿಯಾಗಿದೆ.

ಕಳೆದ ವಾರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ “ಎಲ್ಲಾ ಒತ್ತೆಯಾಳುಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಲು ಒಪ್ಪಿದರೆ ಯುದ್ಧವನ್ನು ಕೊನೆಗೊಳಿಸಲಾಗುತ್ತದೆ. ನಮ್ಮ ಷರತ್ತುಗಳ ಪ್ರಕಾರ ಬಿಡುಗಡೆ ಮಾಡುವ ಒಪ್ಪಂದಕ್ಕೆ ಒಪ್ಪಿದರೆ ಯುದ್ಧ ವಿರಾಮ ಘೋಷಣೆಯಾಗಲಿದೆ ಎಂದಿದ್ದರು . ಈಜಿಪ್ಟ್‌ನ ವಿದೇಶಾಂಗ ಸಚಿವ ಬದರ್ ಅಬ್ದೆಲಾಟ್ಟಿ ಸೋಮವಾರ ಗಾಜಾದ ಪಕ್ಕದ ರಫಾ ಗಡಿಗೆ ಭೇಟಿ ನೀಡಿದ್ದರು. ಈ ವೇಳೆ ಕದನವಿರಾಮ ಕುರಿತು ಹೇಳಿಕೆ ನೀಡಿದ್ದರು.

ಹಮಾಸ್‌ನ 2023 ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲಿನ ದಾಳಿಯು 1,219 ಜನರ ಸಾವಿಗೆ ಕಾರಣಗಿತ್ತು.ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 62,004 ಕ್ಕೂ ಹೆಚ್ಚು ಪ್ಯಾಲೆಸ್ಟಿನಿಯರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *