Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪೋಪ್ ಫ್ರಾನ್ಸಿಸ್ ಇನ್ನಿಲ್ಲ: 12 ವರ್ಷಗಳ ಪವಿತ್ರ ಹುದ್ದೆಗೆ ತೆರೆ, ಹೊಸ ನಾಯಕನ ಆಯ್ಕೆ ಪ್ರಕ್ರಿಯೆಗೆ ಆರಂಭ

Spread the love

ಸುಮಾರು 12 ವರ್ಷಗಳ ಕಾಲ ರೋಮನ್ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದ್ದ ಅರ್ಜೆಂಟೀನಾದ ಪೋಪ್ ಫ್ರಾನ್ಸಿಸ್ ಸೋಮವಾರ ಅಂದರೆ ಇಂದು ನಿಧನರಾಗಿದ್ದಾರೆ.ಪವಿತ್ರ ಫಾದರ್ ಫ್ರಾನ್ಸಿಸ್ ಅವರ ನಿಧನವನ್ನು ನಾನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ ಎಂದು ಕಾರ್ಡಿನಲ್ ಕೆವಿನ್ ಫಾರೆಲ್ ಸೋಮವಾರ ವ್ಯಾಟಿಕನ್‌ನ ಟಿವಿ ಚಾನೆಲ್‌ನಲ್ಲಿ ಪೋಪ್ ಸಾವಿನ ಬಗ್ಗೆ ಘೋಷಿಸಿದರು. ಇಂದು ಬೆಳಗ್ಗೆ 7:35 ಕ್ಕೆ ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ಫಾದರ್ ಅವರ ಮನೆಗೆ ಮರಳಿದರು ಎಂದು ಅವರು ಹೇಳಿದ್ದಾರೆ. 

ಕಳೆದ ತಿಂಗಳು, ವಾರಪೂರ್ತಿ ಬ್ರಾಂಕೈಟಿಸ್ ಕಾಯಿಲೆ ಉಲ್ಬಣಗೊಂಡ ನಂತರ ಫೆಬ್ರವರಿ 14 ರಂದು ಪೋಪ್ ಅವರನ್ನು ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ 38 ದಿನಗಳನ್ನು ಕಳೆದ ಪೋಪ್‌ ನಂತರ ವ್ಯಾಟಿಕನ್‌ಗೆ ಮರಳಿದ್ದರು ಇದು ಅವರ 12 ವರ್ಷಗಳ ಪೋಪ್ ಹುದ್ದೆಯಲ್ಲಿಯೇ ಅತಿ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇದ್ದ ಸಮಯವಾಗಿತ್ತು. ಈಗ ಪೋಪ್ ಅವರ ನಿಧನದಿಂದ ಕ್ಯಾಥೋಲಿಕ್ ಚರ್ಚ್ ಈಗ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ. ಪೋಪ್ ಆಯ್ಕೆಗೆ ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾದ ನಿಯಮಗಳಿಂದ ಮಾರ್ಗದರ್ಶನ ಮಾಡಲಾಗುತ್ತದೆ. ಇದಕ್ಕೆ ಕ್ರಿಶ್ಚಿಯನ್ ಸಮುದಾಯದಲ್ಲಿ ಆಳವಾದ ಧಾರ್ಮಿಕ ಮಹತ್ವ ಇದೆ. 

ಪೋಪ್‌ಗಳ ಆಯ್ಕೆ ಹೇಗೆ?
ವಿಶ್ವಾದ್ಯಂತ ಚರ್ಚ್‌ನ ಅತ್ಯಂತ ಹಿರಿಯ ಅಧಿಕಾರಿಗಳಾದ ಕಾಲೇಜ್ ಆಫ್‌ ಕಾರ್ಡಿನಲ್ಸ್‌ಗಳು ಪೋಪ್ ಅವರನ್ನು ಆಯ್ಕೆ ಮಾಡುತ್ತಾರೆ ಪೋಪ್ ನಿಧನದ ಅಥವಾ ರಾಜೀನಾಮೆಯ ನಂತರ, ವಿಶ್ವದೆಲ್ಲೆಡೆಯ ಕಾರ್ಡಿನಲ್‌ಗಳನ್ನು ಪಾಪಲ್ ಚುನಾವಣೆ ಅಥವಾ ಸಮಾವೇಶಕ್ಕಾಗಿ ವ್ಯಾಟಿಕನ್‌ಗೆ ಕರೆಸಲಾಗುತ್ತದೆ. ಪೋಪ್ ನಿಧನರಾದ 15 ರಿಂದ 20 ದಿನಗಳ ನಂತರ ಸಮಾವೇಶವು ಈ ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ, ಇದರಿಂದಾಗಿ ಶೋಕಾಚರಣೆಗೆ ಸಮಯ ಸಿಗುತ್ತದೆ ಮತ್ತು ಎಲ್ಲಾ ಕಾರ್ಡಿನಲ್‌ಗಳು ರೋಮ್‌ಗೆ ಆಗಮಿಸುತ್ತಾರೆ. ಯುನೈಟೆಡ್ ಸ್ಟೇಟ್ಸ್ ಕಾನ್ಫರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್‌ಗಳ ಪ್ರಕಾರ, ಪಾಪಲ್ ಚುನಾವಣೆಗಾಗಿ ಕಾರ್ಡಿನಲ್‌ಗಳನ್ನು ವ್ಯಾಟಿಕನ್‌ನಲ್ಲಿರುವ ಐತಿಹಾಸಿಕ ಸಿಸ್ಟೀನ್ ಚಾಪೆಲ್‌ನಲ್ಲಿ ಒಟ್ಟುಗೂಡಿಸಲಾಗುತ್ತದೆ.

ಬಹಳ ರಹಸ್ಯವಾಗಿ ಈ ಚುನಾವಣೆ ನಡೆಯುತ್ತದೆ. ಕಾರ್ಡಿನಲ್‌ಗಳು ರಹಸ್ಯವನ್ನು ಕಾಯ್ದುಕೊಳ್ಳುವುದಾಗಿ ಪ್ರಮಾಣ ಮಾಡುತ್ತಾರೆ. ಅಲ್ಲದೇ ಈ ವೋಟಿಂಗ್ ಸಮಯದಲ್ಲಿ ಅವರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುತ್ತಾರೆ. ಅವರು  ರಹಸ್ಯವಾದ ಅಂದರೆ ಹೊರ ಜಗತ್ತಿನೊಂದಿಗೆ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಮತ ಚಲಾಯಿಸುತ್ತಾರೆ ಮತ್ತು ಮಲಗುತ್ತಾರೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ಹೊರಗಿನ ಪ್ರಪಂಚದೊಂದಿಗೆ ಅವರಿಗೆ ಯಾವುದೇ ಸಂಪರ್ಕವನ್ನು ಹೊಂದಲು ಅವಕಾಶವಿಲ್ಲ. ಮೊಬೈಲ್ ಫೋನ್‌ಗಳು, ರೇಡಿಯೋಗಳು, ದೂರದರ್ಶನ ಮತ್ತು ಪತ್ರಿಕೆಗಳು ಹೀಗೆ ಎಲ್ಲಾ ಸಂವಹನ ಮಾಧ್ಯಮಗಳನ್ನು ಅವರಿಗೆ ನಿಷೇಧಿಸಲಾಗುತ್ತದೆ.. ಬಿಬಿಸಿ ಪ್ರಕಾರ ಇವರಿರುವ ಮನೆಯ ಮನೆಗೆಲಸದವರು ಮತ್ತು ಭದ್ರತಾ ಸಿಬ್ಬಂದಿಗಳು ಸಹ ಶಾಶ್ವತ ಗೌಪ್ಯತೆಯನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ.

ಮತದಾನವನ್ನು ಬಹಳ ರಹಸ್ಯವಾಗಿ ಮಾಡಲಾಗುತ್ತದೆ. ಸಿಎನ್‌ಎನ್‌ ವರದಿಯ  ಪ್ರಕಾರ, ಕಾರ್ಡಿನಲ್‌ಗಳು ತಾವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರನ್ನು “ಎಲಿಗೊ ಇನ್ ಸಮ್ಮುನ್ ಪಾಂಟಿಫಿಸೆಮ್ ಎನ್ನುತ್ತಾರೆ ಲ್ಯಾಟಿನ್ ಭಾಷೆಯಲ್ಲಿ ಇದರರ್ಥ ನಾನು ಸರ್ವೋಚ್ಚ ಪೋಪ್  ಆಯ್ಕೆ ಮಾಡುತ್ತೇನೆ ಎಂದು  ಅಭ್ಯರ್ಥಿಯ ಹೆಸರಿನ ಕೆಳಗೆ ಬರೆಯುತ್ತಾರೆ.ಈ ಕಾರ್ಡಿನಲ್‌ಗಳು ವೋಟು ಹಾಕಿದ ನಂತರ ಈ ವೋಟುಗಳನ್ನು ಮಿಶ್ರ ಮಾಡಿ ಎಣಿಕೆ ಮಾಡಲಾಗುತ್ತದೆ. ಪೋಪ್‌ ಆಗಿ ಆಯ್ಕೆಯಾಗಬೇಕಾದ ವ್ಯಕ್ತಿಯೂ ಕನಿಷ್ಠ ಮೂರನೇ ಎರಡರಷ್ಟು ಮತ ಪಡೆಯಬೇಕಾಗಿರುತ್ತದೆ. 

ಪ್ರತಿ ಮತದಾನದ ನಂತರ, ಮತಪತ್ರಗಳನ್ನು ಸುಡಲಾಗುತ್ತದೆ. ಒಂದು ವೇಳೆ ಯಾವುದೇ ಅಭ್ಯರ್ಥಿ ಸಾಕಷ್ಟು ಮತಗಳನ್ನು ಪಡೆಯದಿದ್ದರೆ, ಸಿಸ್ಟೀನ್ ಚಾಪೆಲ್‌ನ ಚಿಮಣಿಯಿಂದ ಕಪ್ಪು ಹೊಗೆ ಮೇಲೇರುತ್ತದೆ. ಇದು ಮತದಾನ ಮುಂದುವರಿಯುತ್ತದೆ ಎಂದು ಹೊರಗಿನ ಪ್ರಪಂಚಕ್ಕೆ ಸೂಚನೆ ನೀಡುತ್ತದೆ. ಒಂದು ವೇಳೆ ಪೋಪ್ ಆಯ್ಕೆಯಾದರೆ ಮುಖ್ಯ ಕಾರ್ಡಿನಲ್ ಅಭ್ಯರ್ಥಿಯು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಆಗಲು ಒಪ್ಪಿಕೊಳ್ಳುತ್ತಾರೆಯೇ ಎಂದು ಕೇಳುತ್ತಾರೆ. ಉತ್ತರ ಹೌದು ಎಂದಾದರೆ, ಅಭ್ಯರ್ಥಿಗೆ ಪಾಪಲ್ ಹೆಸರನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ ಮತ್ತು ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಗೆ ಹೋಗುವ ಮೊದಲು ಪಾಪಲ್ ನಡುವಂಗಿಗಳನ್ನು (papal vests)ಧರಿಸಲಾಗುತ್ತದೆ. ಹಾಗೂ ಅಂತಿಮ ಸುತ್ತಿನ ಮತಪತ್ರಗಳನ್ನು ಬಿಳಿ ಹೊಗೆಯನ್ನು ಉತ್ಪಾದಿಸುವ ರಾಸಾಯನಿಕಗಳಿಂದ ಸುಡಲಾಗುತ್ತದೆ, ಇದು ಹೊಸ ಪೋಪ್ ಆಯ್ಕೆಯಾಗಿದ್ದಾರೆಂದು ಜಗತ್ತಿಗೆ ತಿಳಿಸುತ್ತದೆ. 

ಇದಾದ ನಂತರ ಹಿರಿಯ ಕಾರ್ಡಿನಲ್ ಧರ್ಮಾಧಿಕಾರಿ ಕೂಡ ಸೇಂಟ್ ಪೀಟರ್ಸ್ ಚರ್ಚ್‌ನ ಬಾಲ್ಕನಿಯಲ್ಲಿ ಹೆಜ್ಜೆ ಹಾಕಿ ಹ್ಯಾಬೆಮಸ್ ಪಾಪಮ್ ಎಂದು ಘೋಷಿಸುತ್ತಾರೆ, ಇದರರ್ಥ ನಮಗೆ ಪೋಪ್ ಇದ್ದಾರೆ ಎಂಬುದಾಗಿದೆ.


Spread the love
Share:

administrator

Leave a Reply

Your email address will not be published. Required fields are marked *