Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಂದು ಸಿನಿಮಾ ಟಿಕೆಟ್‌ಗೆ ₹1,29,999 ಪಾವತಿಸಿದ ಪವನ್ ಕಲ್ಯಾಣ್ ಅಭಿಮಾನಿ!

Spread the love

ತಮ್ಮಿಷ್ಟದ ನಟನಿಗಾಗಿ ಸರ್ವ ತ್ಯಾಗಕ್ಕೂ ಸಿದ್ಧವಿರುವ ಕೆಲ ಅಭಿಮಾನಿಗಳಿರ್ತಾರೆ. ಅಭಿಮಾನದ ಪರಾಕಾಷ್ಠೆಗೆ ಸಿಕ್ಕಿ ಹಣವನ್ನ ನೀರಿನಂತೆ ಖರ್ಚು ಮಾಡೋದಕ್ಕೂ ಅವರು ಯೋಚಿಸೋದಿಲ್ಲ. ಅಂಥದ್ದೇ ಹುಚ್ಚು ಅಭಿಮಾನಿಯೊಬ್ಬ (Pawan Kalyan fan) ಹೈದ್ರಾಬಾದ್‌ನಲ್ಲಿ ಗಮನ ಸೆಳೆದಿದ್ದಾನೆ. ಕೇವಲ ಒಂದೇ ಒಂದು ಸಿನಿಮಾ ಟಿಕೆಟ್‌ ಅನ್ನು 1,29,999 ರೂಪಾಯಿ ಕೊಟ್ಟು ಖರೀದಿಸಿದ್ದಾನೆ.

ಆಂಧ್ರ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ ಅಭಿಮಾನಿ ಈ ಹುಚ್ಚು ಸಾಹಸ ಮಾಡಿದ್ದಾನೆ. ಪವನ್ ಕಲ್ಯಾಣ್ OG ಸಿನಿಮಾ (OG Movie) ಟ್ರೈಲರ್‌ ರಿಲೀಸ್ ಕಾರ್ಯಕ್ರಮದಲ್ಲಿ ಬೆನಿಫಿಟ್ ಶೋ ಹೆಸರಿನಲ್ಲಿ ಟಿಕೆಟ್ ಹರಾಜು ಕೂಗಲಾಗಿತ್ತು. ಈ ವೇಳೆ ಚೌಟುಪ್ಪಲ್‌ನ ಅಮುದಲ ಪರಮೇಶ್ ಹೆಸರಿನ ಹುಚ್ಚು ಅಭಿಮಾನಿ, ಹರಾಜಿನಲ್ಲಿ 1,29,999 ರೂಪಾಯಿ ಬೆಲೆ ಕೂಗಿ ಚಿತ್ರದ ಮೊದಲ ಟಿಕೆಟ್ ಖರೀದಿಸಿದ್ದಾನೆ.

ಅಂದಹಾಗೆ ಟಿಕೆಟ್ ಬೆಲೆ ಕೇವಲ 800 ರೂಪಾಯಿ ಆಗಿತ್ತಷ್ಟೆ. ಅದಕ್ಕವನು ಹರಾಜಿನಲ್ಲಿ 1,29,999 ದಾಖಲೆ ಬೆಲೆಗೆ ಕೊಂಡುಕೊಂಡಿರುವುದು ವಿಶೇಷ. 


Spread the love
Share:

administrator

Leave a Reply

Your email address will not be published. Required fields are marked *