Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ಯಾರಾಸೈಲಿಂಗ್ ಕೇಬಲ್ ಕಟ್ ಆಗಿ ನೂರಾರು ಅಡಿ ಎತ್ತರದಿಂದ ಸಮುದ್ರಕ್ಕೆ ಬಿದ್ದ ಪ್ರವಾಸಿಗ!

Spread the love

ಗೋವಾದ ಬಾಗಾ ಬೀಚ್‌ನಲ್ಲಿ ಭಾನುವಾರ ಸಂಜೆ ಪ್ರವಾಸಿಗನೊಬ್ಬ ಆಕಾಶದಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಹಠಾತ್ತನೆ ಕೇಬಲ್ ತುಂಡಾಗಿದ್ದು (Cable Snapped), ಪ್ರವಾಸಿಗ ಸಮುದ್ರಕ್ಕೆ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂದೆ ಏನಾಯ್ತು ಎಂಬ ಆತಂಕ ಭಾರೀ ಮನೆ ಮಾಡಿತ್ತು. ಇದೀಗ ವೈರಲ್ ವಿಡಿಯೋ ಬಳಿಕ ಗೋವಾ ಪೊಲೀಸರು ಈ ಬಗ್ಗೆ ತನಿಖೆ ಮಾಡಿದ್ದು, ಅದೃಷ್ಟವಶಾತ್ ಪ್ರವಾಸಿಗನಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

ಘಟನೆಯ ವಿವರ:
ಮಾರ್ಚ್ 29, 2026 ರಂದು ಸಂಜೆ ಸುಮಾರು 5 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅನಿಲ್ ಚಾಂದೇಲಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಭಯಾನಕ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಪ್ರವಾಸಿಗನೊಬ್ಬ ಬೋಟ್‌ನ ಸಹಾಯದಿಂದ ಪ್ಯಾರಾಸೈಲಿಂಗ್ ಮಾಡುತ್ತಾ ನೂರಾರು ಅಡಿ ಎತ್ತರದಲ್ಲಿದ್ದಾಗ, ಬೋಟ್ ಮತ್ತು ಪ್ಯಾರಾಚೂಟ್ ನಡುವೆ ಸಂಪರ್ಕ ಕಲ್ಪಿಸುವ ಕೇಬಲ್ ಹಠಾತ್ತನೆ ತುಂಡಾಗಿದೆ. ಕೇಬಲ್ ಕಟ್ ಆದ ತಕ್ಷಣ ಪ್ಯಾರಾಚೂಟ್ ಗಾಳಿಯ ವೇಗಕ್ಕೆ ನಿಯಂತ್ರಣ ತಪ್ಪಿ ಸಮುದ್ರದ ಕಡೆಗೆ ವಾಲಿತ್ತು. ಕೂಡಲೇ ಎಚ್ಚೆತ್ತ ಲೈಫ್‌ಗಾರ್ಡ್‌ಗಳು ಮತ್ತು ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರವಾಸಿಗನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಗಂಭೀರ ಕ್ರಮ:
ಬಾಗಾ ಬೀಚ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತಿರುವ ಗೋವಾ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೇದಾರ್ ನಾಯಕ್ ಅವರು ಈ ಬಗ್ಗೆ ಸಮಗ್ರ ವರದಿ ಕೇಳಿದ್ದಾರೆ. ‘ಪ್ರವಾಸಿಗರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಘಟನೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಯೋಜಕರ ನಿರ್ಲಕ್ಷ್ಯ ಕಂಡುಬಂದರೆ ಅಥವಾ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾದರೆ, ಅವರ ಪರವಾನಗಿಯನ್ನು (Licence) ತಕ್ಷಣವೇ ರದ್ದುಗೊಳಿಸಲಾಗುವುದು’ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.ಪ್ರವಾಸಿಗರ ಆಕ್ರೋಶ ಮತ್ತು ಸುರಕ್ಷತೆಯ ಪ್ರಶ್ನೆ:
ಈ ಘಟನೆಯ ವಿಡಿಯೋಗೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಗೋವಾದಲ್ಲಿ ವಾಟರ್ ಸ್ಪೋರ್ಟ್ಸ್ ನಡೆಸುವವರು ಹಳೆಯ ಹಗ್ಗಗಳನ್ನು ಬಳಸುತ್ತಾರೆ ಮತ್ತು ಸಲಕರಣೆಗಳ ಸರಿಯಾದ ನಿರ್ವಹಣೆ ಮಾಡುವುದಿಲ್ಲ. ಕೇವಲ ಹಣ ಮಾಡುವುದೇ ಇವರ ಉದ್ದೇಶವಾಗಿದೆ ಹೊರತು ಪ್ರವಾಸಿಗರ ಪ್ರಾಣದ ಬಗ್ಗೆ ಕಾಳಜಿಯಿಲ್ಲ’ ಎಂದು ಹಲವರು ದೂರಿದ್ದಾರೆ. ಇನ್ನು ಕೆಲವು ಪ್ರವಾಸಿಗರು ‘ಗೋವಾ ಸಾಹಸ ಕ್ರೀಡೆಗಳಿಗೆ ಅತ್ಯಂತ ಕೆಟ್ಟ ಜಾಗವಾಗಿ ಬದಲಾಗುತ್ತಿದೆ, ಇಲ್ಲಿ ಯಾವುದೇ ಹೊಣೆಗಾರಿಕೆ ಇಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ.ವಿಮಾನ ಇಂಧನದ ಬೆಲೆಯಂತೆ ವಾಟರ್ ಸ್ಪೋರ್ಟ್ಸ್ ದರಗಳೂ ಹೆಚ್ಚಾಗುತ್ತಿವೆ, ಆದರೆ ಸುರಕ್ಷತಾ ಗುಣಮಟ್ಟ ಮಾತ್ರ ಕುಸಿಯುತ್ತಿದೆ ಎಂಬುದು ಪ್ರವಾಸಿಗರ ಅಳಲಾಗಿದೆ. ಗೋವಾಕ್ಕೆ ಹೋಗುವವರು ಇಂತಹ ಸಾಹಸ ಕ್ರೀಡೆಗಳಲ್ಲಿ ತೊಡಗುವ ಮೊದಲು ಸಲಕರಣೆಗಳ ಗುಣಮಟ್ಟವನ್ನು ಪರಿಶೀಲಿಸಿಕೊಳ್ಳುವುದು ಒಳಿತು.


Spread the love
Share:

administrator

Leave a Reply

Your email address will not be published. Required fields are marked *