Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಪರೇಷನ್ ಸಿಂಧೂರ್‌ಗೆ ಪಾಕ್ ಕಂಗೆ: 72 ಉಗ್ರ ಲಾಂಚ್‌ಪ್ಯಾಡ್‌ಗಳನ್ನು ಸ್ಥಳಾಂತರಿಸಿದ ಪಾಕಿಸ್ತಾನ

Spread the love

ಶ್ರೀನಗರ: ಆಪರೇಷನ್ ಸಿಂಧೂರ್‌ನಿಂದ (Operation Sindoor) ಕಂಗೆಟ್ಟ ಪಾಕಿಸ್ತಾನ (Pakistan) ಸುಮಾರು 72 ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದೆ ಎಂದು ಬಿಎಸ್‌ಎಫ್ (BSF) ಡಿಐಜಿ ವಿಕ್ರಮ್ ಕುನ್ವರ್ ತಿಳಿಸಿದ್ದಾರೆ.

ವಿಕ್ರಮ್ ಕುನ್ವರ್, ಜಮ್ಮು ಗಡಿನಾಡಿನ ಬಿಎಸ್‌ಎಫ್ ಐಜಿ ಶಶಾಂಕ್ ಆನಂದ್ ಮತ್ತು ಡಿಐಜಿ ಕುಲ್ವಂತ್ ರಾಯ್ ಶರ್ಮಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ 2025 ರಲ್ಲಿ ಪಡೆಯ ಸಾಧನೆಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಸರ್ಕಾರ ಗಡಿಯಾಚೆಗಿನ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿದರೆ ಶತ್ರುಗಳ ಹುಟ್ಟಡಗಿಸಲು ಸೇನಾ ಪಡೆಗಳು ಸಿದ್ಧವಾಗಿವೆ. ಅದಕ್ಕಾಗಿ ಆಪರೇಷನ್ ಸಿಂಧೂರ್ 2.0ಗೆ ಸಿದ್ಧವಾಗಿದ್ದೇವೆ. ಆದರೆ ಘರ್ಷಣೆಯ ನಂತರ ಕೈಗೊಳ್ಳಲಾದ ಕದನ ವಿರಾಮವನ್ನು ಭದ್ರತಾ ಪಡೆಗಳು ಗೌರವಿಸುತ್ತವೆ ಎಂದಿದ್ದಾರೆ. 

ಆಪರೇಷನ್ ಸಿಂಧೂರ್ ಸಮಯದಲ್ಲಿ ಗಡಿಯುದ್ದಕ್ಕೂ ಅನೇಕ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು‌ ಬಿಎಸ್ಎಫ್ ನಾಶಪಡಿಸಿದೆ. ಇದಾದ ನಂತರ, ಪಾಕಿಸ್ತಾನ ಸರ್ಕಾರ ಅಂತಹ ಎಲ್ಲಾ ಸೌಲಭ್ಯಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಸುಮಾರು 12 ಲಾಂಚ್‌ಪ್ಯಾಡ್‌ಗಳು ಸಿಯಾಲ್‌ಕೋಟ್ ಮತ್ತು ಜಫರ್ವಾಲ್‌ನ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತಿವೆ. ಅವು ನಿಖರವಾಗಿ ಗಡಿಯಲ್ಲಿಲ್ಲ. ಅದೇ ರೀತಿ, 60 ಲಾಂಚ್‌ಪ್ಯಾಡ್‌ಗಳು ಗಡಿಯಿಂದ ದೂರದಲ್ಲಿರುವ ಇತರ ಆಳ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ಲಾಂಚ್‌ಪ್ಯಾಡ್‌ಗಳು ಮತ್ತು ಅವುಗಳಲ್ಲಿರುವ ಭಯೋತ್ಪಾದಕರು ಬದಲಾಗುತ್ತಲೇ ಇದ್ದಾರೆ. ಉಗ್ರರು ಅಲ್ಲಿ ಶಾಶ್ವತವಾಗಿ ಕುಳಿತುಕೊಳ್ಳುವುದಿಲ್ಲ. ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುವಾಗ ಅವು ಸಾಮಾನ್ಯವಾಗಿ ಸಕ್ರಿಯವಾಗಿರುತ್ತವೆ. ಅವರನ್ನು ಎರಡು ಅಥವಾ ಮೂರು ಗುಂಪುಗಳಿಗಿಂತ ಹೆಚ್ಚಾಗಿ ಇರಿಸುವುದಿಲ್ಲ. ಪ್ರಸ್ತುತ ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ಯಾವುದೇ ತರಬೇತಿ ಶಿಬಿರಗಳಿಲ್ಲ ಎಂದು ತಿಳಿಸಿದರು.

ಹಿಂದೆ ಜೈಶ್-ಎ-ಮೊಹಮ್ಮದ್‌ಗೆ ಸೇರಿದವರು ಕೆಳಭಾಗದ ಪ್ರದೇಶಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಲಷ್ಕರ್-ಎ-ತೈಬಾದವರು ಮೇಲ್ಭಾಗದಲ್ಲಿ ಸಕ್ರಿಯರಾಗಿರುತ್ತಿದ್ದರು. ಆಪರೇಷನ್ ಸಿಂಧೂರ್ ನಂತರ, ಅವರು ಮಿಶ್ರ ಗುಂಪನ್ನು ರಚಿಸಿದ್ದಾರೆ. ಆಪರೇಷನ್ ಸಿಂಧೂರ್‌ನ್ನು ಪುನರಾರಂಭಿಸಲು ನಿರ್ಧರಿಸಿದರೆ ಸರ್ಕಾರದ ಆದೇಶಗಳನ್ನು ಪಾಲಿಸಲು ಬಿಎಸ್‌ಎಫ್ ಸಿದ್ಧವಾಗಿದೆ ಎಂದು ಐಜಿ ಆನಂದ್ ಹೇಳಿದರು.

ನಮಗೆ ಅವಕಾಶ ಸಿಕ್ಕರೆ, ಮೇ ತಿಂಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ನಾವು ಉಂಟುಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಸರ್ಕಾರ ಯಾವುದೇ ನಿರ್ದಾರ ಕೈಗೊಂಡರೂ ಬಿಎಸ್‌ಎಫ್ ತನ್ನ ಪಾತ್ರವನ್ನು ನಿರ್ವಹಿಸಲಿದೆ ಎಂದಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *