ಮುಕಳೆಪ್ಪನ ಮದುವೆ ಕಥೆ: ಹೈಕೋರ್ಟ್ ಮೊರೆ ಹೋದ ಪತ್ನಿಯ ತಾಯಿ

ಧಾರವಾಡ: ಕಾಮಿಡಿ ಯೂಟ್ಯೂಬರ್ ಮುಕಳೆಪ್ಪನ ಮದುವೆ ಕಥೆ (Mukaleppa Marriage Story) ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಇಷ್ಟು ದಿನ ಮುಕಳೆಪ್ಪನ ಮದುವೆ ವಿಚಾರವಾಗಿ ಪೊಲೀಸ್ ಠಾಣೆ ಮೇಟ್ಟಿಲೇರುತಿದ್ದ ಮುಕಳೆಪ್ಪ ಪತ್ನಿಯ ತಾಯಿ ಶಿವಕ್ಕ ಈಗ ಧಾರವಾಡ ಹೈಕೋರ್ಟ್ (High Court) ಮೇಟ್ಟಿಲೇರಿದ್ದಾರೆ.


ಹೈಕೋರ್ಟ್ ಕೊಟ್ಟ ಸಮನ್ಸ್ ಮುಕಳೆಪ್ಪನ ಮನೆಗೆ ತಲುಪಿಸಲು ಸ್ವತಃ ಶಿವಕ್ಕಳೇ ಶ್ರೀರಾಮ ಸೇನೆ ಕಾರ್ಯಕರ್ತರ ಜೊತೆಗೆ ಆಗಮಿಸಿದ್ದರು.

ಧಾರವಾಡ ನಗರದ ಭಾರತ ಕಾಲೋನಿಯ ಮುಕಳೆಪ್ಪನ ಮನೆಗೆ ಬಂದ ಶಿವಕ್ಕ, ಸಮನ್ಸ್ ಕೊಡಬೇಕು ಎಂದು ಮುಕಳೆಪ್ಪನ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ಅಲ್ಲಿ ಯಾರೂ ಇಲ್ಲದ ಕಾರಣ ಸಮನ್ಸ್ ಕೈಯಲ್ಲೇ ಹಿಡಿದುಕೊಂಡು ಅಳಿಯ ಮುಕಳೆಪ್ಪನ ಮೇಲೆ ಮತ್ತೇ ಹಿಂದೆ ಮಾಡಿದ್ದ ಆರೋಪಗಳೇ ಮಾಡಿದ್ದಾರೆ.

ಮಗಳ ತಲೆ ಕೆಡಿಸಿ ನಕಲಿ ದಾಖಲೆ ನೀಡಿ ಮುಕಳೆಪ್ಪ ಮಗಳ ಜೊತೆ ಮದುವೆಯಾಗಿದ್ದಾನೆ ಎಂದು ಆರೋಪ ಮಾಡಿದ್ದಾರೆ.