ಆನ್ಲೈನ್ ಟ್ರೇಡಿಂಗ್ ಆಮಿಷ: ತುಮಕೂರಿನ ಪ್ರಾಧ್ಯಾಪಕರಿಗೆ ₹59.21 ಲಕ್ಷ ವಂಚನೆ

ತುಮಕೂರು: ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯದ ದೇವರಾಯಪಟ್ಟಣದ ಪ್ರಾಧ್ಯಾಪಕ ವಿಲಾಸ್ ಎಂ.ಕಂದ್ರೋಳಕರ್ ₹59.21 ಲಕ್ಷ ಕಳೆದುಕೊಂಡಿದ್ದಾರೆ.

ಮನೆಯಲ್ಲಿ ಕುಳಿತು ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಗಳಿಸುವ ಬಗ್ಗೆ ಜಾಹೀರಾತು ವೀಕ್ಷಿಸಿದ್ದಾರೆ.
ಏನು ಕೆಲಸ’ ಅಂತ ಮೆಸೇಜ್ ಮಾಡಿದ್ದಕ್ಕೆ ಅವರ ನಂಬರ್ ಅನ್ನು C-10 Raag Rhythms, VIP-126 Faerpe Inner Room ವಾಟ್ಸ್ ಆಯಪ್ ಗ್ರೂಪ್ಗೆ ಸೇರಿಸಿದ್ದಾರೆ. ‘ನಾನು ಹೇಳಿದಂತೆ ಹಣ ವರ್ಗಾವಣೆ ಮಾಡಿದರೆ, ಅದನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡುತ್ತೇವೆ’ ಎಂದು ಆರೋಪಿಗಳು ತಿಳಿಸಿದ್ದಾರೆ.
Faer PE’ ಎಂಬ ಆಯಪ್ ಇನ್ಸ್ಟಾಲ್ ಮಾಡಿ ಅಗತ್ಯ ವಿವರ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ₹10 ಸಾವಿರ ಹೂಡಿಕೆ ಮಾಡಿದ್ದು, ₹2 ಸಾವಿರ ಲಾಭಾಂಶ ಎಂದು ವಾಪಸ್ ಹಾಕಿದ್ದಾರೆ. ಲಾಭದ ಹಣ ನೀಡಿದ ನಂತರ ಆರೋಪಿಗಳನ್ನು ನಂಬಿ ಹಂತ ಹಂತವಾಗಿ ಒಟ್ಟು ₹59.21 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಹೂಡಿಕೆ ಮಾಡಿದ ಹಣ ವಾಪಸ್ ಕೇಳಿದಾಗ ಇನ್ನೂ ₹20 ಲಕ್ಷ ವರ್ಗಾಯಿಸಿದರೆ ಮಾತ್ರ ಬಾಕಿ ಹಣ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ವಿಲಾಸ್ ಸೈಬರ್ ಠಾಣೆ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಾಗಿದೆ.