ನೊಬೆಲ್ ವಿಜೇತೆ ನರ್ಗೆಸ್‌ಗೆ 6 ವರ್ಷ ಜೈಲು: ಇರಾನ್ ಕೋರ್ಟ್‌ನಿಂದ ಕಠಿಣ ಶಿಕ್ಷೆ!

ಟೆಹ್ರಾನ್: ನೊಬೆಲ್ ಶಾಂತಿ ಪ್ರಶಸ್ತಿ (Nobel Peace Laureate) ವಿಜೇತೆ ನರ್ಗೆಸ್ ಮೊಹಮ್ಮದಿಗೆ (Narges Mohammadi) ಇರಾನಿನ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಪರಾಧಗಳನ್ನು ನಡೆಸಲು ಗುಂಪುಗೂಡುವಿಕೆ ಮತ್ತು ಒಳಸಂಚು ನಡೆಸಿದ್ದಕ್ಕಾಗಿ ಆಕೆಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವಕೀಲೆ ಮೊಸ್ತಫಾ ನಿಲಿ ಹೇಳಿದ್ದಾರೆ. ದೇಶವನ್ನು ತೊರೆಯದಂತೆ ಎರಡು ವರ್ಷಗಳ ನಿಷೇಧವನ್ನು ಸಹ ಹೇರಲಾಗಿದೆ.
ಪ್ರಚಾರ ಚಟುವಟಿಕೆಗಳಿಗಾಗಿ ಮೊಹಮ್ಮದಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ದಕ್ಷಿಣ ಖೊರಾಸಾನ್‌ನ ಪೂರ್ವ ಪ್ರಾಂತ್ಯದ ಖೋಸ್ಫ್ ನಗರಕ್ಕೆ ಎರಡು ವರ್ಷಗಳ ಕಾಲ ಗಡಿಪಾರು ಮಾಡಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

ಇರಾನಿನ ಕಾನೂನಿನ ಪ್ರಕಾರ, ಜೈಲು ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ. ಮೊಹಮ್ಮದಿ ಅವರಿಗೆ ಆರೋಗ್ಯ ಸಮಸ್ಯೆಗಳಿಂದಾಗಿ ಚಿಕಿತ್ಸೆ ಪಡೆಯಲು ಜಾಮೀನಿನ ಮೇಲೆ ಬಿಡುಗಡೆಯಾಗಬಹುದು ಎಂದು ತಿಳಿಸಲಾಗಿದೆ.
ಹೊರಡಿಸಲಾದ ತೀರ್ಪು ಅಂತಿಮವಾಗಿಲ್ಲ. ಮೇಲ್ಮನವಿ ಸಲ್ಲಿಸಬಹುದು. ಕಳೆದ ಕಾಲು ಶತಮಾನದಲ್ಲಿ 53 ವರ್ಷದ ಮೊಹಮ್ಮದಿ ಇರಾನ್‌ನಲ್ಲಿ ಮರಣದಂಡನೆ ಮತ್ತು ಮಹಿಳೆಯರಿಗೆ ಕಡ್ಡಾಯ ವಸ್ತ್ರ ಸಂಹಿತೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಪದೇ ಪದೇ ವಿಚಾರಣೆಗೆ ಒಳಗಾಗಿ ಜೈಲುಪಾಲಾಗುತ್ತಿದ್ದಾರೆ

ಮೊಹಮ್ಮದಿ ಕಳೆದ ದಶಕದಲ್ಲಿ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆದಿದ್ದಾರೆ. 2015 ರಿಂದ ಪ್ಯಾರಿಸ್‌ನಲ್ಲಿ ವಾಸಿಸುವ ತನ್ನ ಅವಳಿ ಮಕ್ಕಳನ್ನು ನೋಡಿಲ್ಲ. ಇರಾನ್‌ನಲ್ಲಿ ಮರಣದಂಡನೆಯ ವಿರುದ್ಧದ ಅಭಿಯಾನಕ್ಕಾಗಿ ಮೊಹಮ್ಮದಿ 2023 ರಲ್ಲಿ ಶಾಂತಿ ಪ್ರಶಸ್ತಿ ಲಭಿಸಿತ್ತು. ಆ ಸಮಯದಲ್ಲಿ ಜೈಲಿನಲ್ಲಿದ್ದ ಕಾರಣ ಮೊಹಮ್ಮದಿ ಮಕ್ಕಳು ಅವರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.