Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜ್ಯುವೆಲ್ಲರಿ ಶಾಪ್‌ಗಳಲ್ಲಿ ಹಿಜಾಬ್, ಬುರ್ಖಾ, ಮಾಸ್ಕ್ ಧರಿಸಿದವರಿಗೆ ನೋ ಎಂಟ್ರಿ! ಭದ್ರತೆಗಾಗಿ ಸಂಘಟನೆ ಹೊಸ ರೂಲ್ಸ್‌.

Spread the love

ಬಿಹಾರದಾದ್ಯಂತ ಇರುವ ಚಿನ್ನಾಭರಣ ಮಳಿಗೆಗಳಲ್ಲಿ ಇನ್ನು ಮುಂದೆ ಹಿಜಾಬ್, ಬುರ್ಖಾ ಅಥವಾ ಮಾಸ್ಕ್ ಧರಿಸಿ ಮುಖ ಮುಚ್ಚಿಕೊಂಡಿರುವ ಗ್ರಾಹಕರಿಗೆ ಪ್ರವೇಶವನ್ನು ನಿರಾಕರಿಸಲು ನಿರ್ಧರಿಸಲಾಗಿದೆ. ಆಲ್ ಇಂಡಿಯಾ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ ಫೆಡರೇಶನ್ (AIJGF) ಈ ಆದೇಶವನ್ನು ಹೊರಡಿಸಿದ್ದು, ಹೆಚ್ಚುತ್ತಿರುವ ಕಳ್ಳತನ ಮತ್ತು ದರೋಡೆ ಪ್ರಕರಣಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಸಿಸಿಟಿವಿ ಕ್ಯಾಮೆರಾಗಳಲ್ಲಿ ಗ್ರಾಹಕರ ಮುಖ ಸ್ಪಷ್ಟವಾಗಿ ಕಾಣಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದು ಜನವರಿ 8 ರಿಂದ ಜಾರಿಗೆ ಬಂದಿದೆ.

ಈ ನಿಯಮವು ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ, ಹೆಲ್ಮೆಟ್ ಅಥವಾ ಸ್ಕಾರ್ಫ್ ಧರಿಸಿ ಮುಖ ಮುಚ್ಚಿಕೊಳ್ಳುವ ಪುರುಷರಿಗೂ ಅನ್ವಯಿಸುತ್ತದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ. ಈ ನಿರ್ಧಾರವು ಕೇವಲ ಭದ್ರತಾ ದೃಷ್ಟಿಯಿಂದ ಕೂಡಿದೆಯೇ ಹೊರತು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ವಿರುದ್ಧವಾದುದಲ್ಲ ಎಂದು ಜ್ಯುವೆಲ್ಲರ್ಸ್ ಸಂಘಟನೆ ಹೇಳಿದೆ. ಆದಾಗ್ಯೂ, ಈ ಆದೇಶಕ್ಕೆ ಬಿಹಾರದ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (RJD) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಟೀಕಿಸಿದೆ.

ಸದ್ಯ ಬಿಹಾರದ ಪ್ರಮುಖ ನಗರಗಳಾದ ಪಾಟ್ನಾ, ಮುಜಾಫರ್‌ಪುರ ಮತ್ತು ದರ್ಭಾಂಗದ ಹಲವು ಅಂಗಡಿಗಳ ಮುಂದೆ “ಮುಖ ಮುಚ್ಚಿದವರಿಗೆ ಪ್ರವೇಶವಿಲ್ಲ” ಎಂಬ ಫಲಕಗಳನ್ನು ಹಾಕಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *