Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನವದೆಹಲಿ: ತೀವ್ರಗೊಂಡ ಆರ್ಥಿಕ ಕೊರತೆ; ಮಾರ್ಚ್‌ನಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ ಸ್ಪೈಸ್‌ಜೆಟ್ ಪೈಲಟ್‌ಗಳು!

Spread the love

ಹೊಸದಿಲ್ಲಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಸ್ಟೈಸ್‌ಜೆಟ್ ನಲ್ಲಿ ಆರ್ಥಿಕ ಕೊರತೆ ಮತ್ತಷ್ಟು ತೀವ್ರಗೊಂಡಿದ್ದು, ಅನೇಕ ಪೈಲಟ್ ಗಳು ಮತ್ತು ಸಿಬ್ಬಂದಿ ಮಾರ್ಚ್ ನಿಂದ ತಮ್ಮ ವೇತನಕ್ಕಾಗಿ ಕಾಯುತ್ತಿದ್ದಾರೆ ಎಂದು Reuters ವರದಿ ಮಾಡಿದೆ.
ಇದೇ ವೇಳೆ, ತನ್ನ ಕಾರ್ಯಾಚರಣೆಗಳನ್ನು ಮುಂದುವರಿಸಲು ಸರ್ಕಾರಿ ಬೆಂಬಲಿತ ತುರ್ತು ಸಾಲ ಪಡೆಯಲು ಸಂಸ್ಥೆ ಪ್ರಯತ್ನಿಸುತ್ತಿದೆ.
‘ರಾಯಿಟರ್ಸ್’ ವರದಿಯ ಪ್ರಕಾರ ಆಂತರಿಕ, ಮಾರ್ಚ್ ವೇಳೆಗೆ ಸ್ಪೇಸ್ ಜೆಟ್ ನಲ್ಲಿ 375 ಪೈಲಟ್ ಗಳು ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಅನೇಕರಿಗೆ ಹಲವು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ ಎಂದು ಇಬ್ಬರು ಪೈಲಟ್ ಗಳು ತಿಳಿಸಿದ್ದಾರೆ. ಬೋಯಿಂಗ್ ವಿಮಾನಗಳ ಪೈಲಟ್‌ಗಳು ಹಾಗೂ ಕನಿಷ್ಠ ಒಬ್ಬ ಹಿರಿಯ ಅಧಿಕಾರಿಯನ್ನು ಒಳಗೊಂಡ 180ಕ್ಕೂ ಹೆಚ್ಚು ಸದಸ್ಯರಿರುವ ವಾಟ್ಸಾಪ್ ಗುಂಪಿನಲ್ಲಿ ನಡೆದ ಸಂದೇಶಗಳ ವಿನಿಮಯವನ್ನು ‘ರಾಯಿಟರ್ಸ್‌ ಪರಿಶೀಲಿಸಿದೆ.

ಮೇ 26ರಂದು ಸಿಬ್ಬಂದಿಗೆ ಕಳುಹಿಸಲಾದ ಸಂದೇಶದಲ್ಲಿ ವಿಮಾನ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷ ವೀರೇಂದ್ರ ಮಲ್ಲೋತ್ರಾ, ವೇತನ ವಿಳಂಬದಿಂದ ಸಿಬ್ಬಂದಿ ಎದುರಿಸುತ್ತಿರುವ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ.
‘ವೇತನ ವಿತರಣೆಯಲ್ಲಿ ಉಂಟಾಗಿರುವ ವಿಳಂಬದಿಂದ ನೀವು ಸಂಕಷ್ಟ ಎದುರಿಸುತ್ತಿರುವುದು ನನಗೆ ತಿಳಿದಿದೆ. ಫೆಬ್ರವರಿ ತಿಂಗಳ ವೇತನದ ಬಾಕಿ ಮೊತ್ತವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಪರಿಸ್ಥಿತಿ ಕಷ್ಟಕರವಾಗಿದ್ದರೂ ಇದು ತಾತ್ಕಾಲಿಕ’ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಪೈಲಟ್, ಈ ಸಂದೇಶವು ಭರವಸೆ ನೀಡುವಂತಿದೆ. ಆದರೆ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳ ವೇತನವನ್ನು ಯಾವಾಗ ಬಿಡುಗಡೆ ಮಾಡಲಾಗುವುದು?’ ಎಂದು ಪ್ರಶ್ನಿಸಿದ್ದಾರೆ.ಆದರೆ ಬಳಿಕ ‘ರಾಯಿಟರ್ಸ್ ಸಂಪರ್ಕಿಸಿದಾಗ, ಇಂತಹ ಯಾವುದೇ ಸಂದೇಶವನ್ನು ತಾವು ಕಳುಹಿಸಿಲ್ಲ ಎಂದು ಮಲ್ಲೋತ್ರಾ ನಿರಾಕರಿಸಿದ್ದಾರೆ.
‘ಅಂತಹ ಯಾವುದೇ ಸಂವಹನವನ್ನು ನೀಡಿಲ್ಲ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ’ ಎಂದು ಅವರು ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದಾರೆ.
ಸಿಬ್ಬಂದಿಗೆ ವೇತನ ಪಾವತಿಯಲ್ಲಿ ವಿಳಂಬವಾಗಿರುವುದನ್ನು ಸ್ಟೈಸ್‌ಜೆಟ್ ಒಪ್ಪಿಕೊಂಡಿದೆ. ‘ಕಳೆದ ಹಲವು ತಿಂಗಳುಗಳಿಂದ ಅನುಸರಿಸುತ್ತಿರುವ ಪ್ರಕ್ರಿಯೆಯಂತೆ ಸಿಬ್ಬಂದಿಗೆ ಹಂತ ಹಂತವಾಗಿ ವೇತನ ವಿತರಿಸಲಾಗುತ್ತಿದೆ. ಹೆಚ್ಚಿನ ಉದ್ಯೋಗಿಗಳಿಗೆ ಈಗಾಗಲೇ ಮಾರ್ಚ್‌ ತಿಂಗಳ ವೇತನ ಪಾವತಿಸಲಾಗಿದೆ’ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ವೇತನ ವಿಳಂಬದಿಂದ ಪೈಲಟ್‌ಗಳ ವೈಯಕ್ತಿಕ ಹಣಕಾಸಿನ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ‘ದೈನಂದಿನ ಖರ್ಚುಗಳನ್ನು ನಿರ್ವಹಿಸುವುದೇ ದೊಡ್ಡ ಸವಾಲಾಗಿದೆ. ಅಗತ್ಯ ಹಣಕಾಸು ಬದ್ಧತೆಗಳನ್ನು ಪೂರೈಸಲು ಇತರರ ಸಹಾಯ ಪಡೆಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಒಬ್ಬ ಪೈಲಟ್ ವಾಟ್ಸಾಪ್ ಗುಂಪಿನಲ್ಲಿ ಬರೆದಿದ್ದಾರೆ.
ಸರ್ಕಾರದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS) ಅಡಿಯಲ್ಲಿ ಹಣಕಾಸು ನೆರವು ಪಡೆಯಲು ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಸ್ಟೈಸ್‌ಜೆಟ್ ತಿಳಿಸಿದೆ. ಈ ಯೋಜನೆಯಡಿ ವಿಮಾನಯಾನ ಸಂಸ್ಥೆಗಳು 1,500 ಕೋಟಿ ರೂಪಾಯಿಯವರೆಗೆ ಸರ್ಕಾರಿ ಬೆಂಬಲಿತ ಸಾಲ ಪಡೆಯಲು ಅವಕಾಶವಿದೆ.

‘ಸಾಮಾನ್ಯ ಸ್ಥಿತಿಗೆ ಮರಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಸೇರಿದಂತೆ ಹಲವು ಬಾಹ್ಯ ಅಂಶಗಳು ಕಾರ್ಯಾಚರಣೆ ಹಾಗೂ ಆರ್ಥಿಕ ಹರಿವಿನ ಮೇಲೆ ಪರಿಣಾಮ ಬೀರಿವೆ. ಮುಂದಿನ ತಿಂಗಳುಗಳಲ್ಲಿ ವ್ಯವಹಾರ ಚಟುವಟಿಕೆಗಳು ಸಾಮಾನ್ಯವಾಗುವ ನಿರೀಕ್ಷೆಯಿದೆ’ ಎಂದು ಸಂಸ್ಥೆ ಹೇಳಿದೆ.
2019ರಲ್ಲಿ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ 15% ಪಾಲು ಹೊಂದಿದ್ದ ಸ್ಪೇಸ್‌ಜೆಟ್, ಆಗ ಭಾರತದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿತ್ತು. ಆದರೆ ಈಗ ಅದರ ಮಾರುಕಟ್ಟೆ ಪಾಲು 3.4%ಕ್ಕೆ ಕುಸಿದಿದ್ದು, ದೇಶದ ನಾಲ್ಕನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಇಂಧನ ವೆಚ್ಚ ಹೆಚ್ಚಳವಾಗಿದ್ದು, ಕೆಲವು ವಾಯುಪ್ರದೇಶಗಳ ಮೇಲಿನ ನಿರ್ಬಂಧಗಳು ಸಂಸ್ಥೆಯ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿವೆ. ಇದರಿಂದ ಸ್ಪೇಸ್‌ಜೆಟ್‌ನ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಸಂಸ್ಥೆ ಹೇಳಿದೆ. ಇದೇ ಸವಾಲುಗಳನ್ನು ಇಂಡಿಗೊ ಮತ್ತು ಏರ್ ಇಂಡಿಯಾ ಕೂಡ ಎದುರಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಸ್ಪೇಸ್‌ಜೆಟ್ 21 ವಿಮಾನಗಳನ್ನು ನಿರ್ವಹಿಸುತ್ತಿದೆ. ಬೋಯಿಂಗ್ 737 ಮ್ಯಾಕ್ಸ್ ವಿಮಾನವೊಂದನ್ನು ಸೋಮವಾರ ಮತ್ತೆ ಸೇವೆಗೆ ತಂದಿರುವುದಾಗಿ ಸಂಸ್ಥೆ ತಿಳಿಸಿದೆ. ಅಲ್ಲದೆ, ಮೂರು ಏರ್‌ಬಸ್ A320 ವಿಮಾನಗಳನ್ನು ಸಿಬ್ಬಂದಿ ಸಹಿತ ಗುತ್ತಿಗೆ ಪಡೆಯುವ ಒಪ್ಪಂದವನ್ನೂ ಅಂತಿಮಗೊಳಿಸಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಈ ವಿಮಾನಗಳು ಜುಲೈನಲ್ಲಿ ಸಂಸ್ಥೆಯ ವಾಯುಯಾನ ಸೇವೆಗೆ ಸೇರುವ ನಿರೀಕ್ಷೆಯಿದೆ.
ಈ ವರ್ಷ ಇಂಡಿಗೊ ಷೇರುಗಳು 13.8% ಕುಸಿದಿದ್ದರೆ, ಸ್ಟೈಸ್‌ಜೆಟ್ ಷೇರುಗಳು 60% ಕುಸಿದಿವೆ. ವಿಮಾನಯಾನ ವಿಶ್ಲೇಷಣಾ ಸಂಸ್ಥೆ OAG ದತ್ತಾಂಶದ ಪ್ರಕಾರ, ಸ್ಟೈಸ್‌ಜೆಟ್ ಮೇ ತಿಂಗಳಲ್ಲಿ 3,053 ನಿಗದಿತ ವಿಮಾನಯಾನ ಸೇವೆಗಳನ್ನು ನಡೆಸಿದ್ದು, ಜನವರಿಯಲ್ಲಿ ಈ ಸಂಖ್ಯೆ 4,494 ಆಗಿತ್ತು.

2005ರಿಂದ ಪ್ರಸ್ತುತ ಬ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟೈಸ್‌ಜೆಟ್ ಈ ಹಿಂದೆಯೂ ಹಣಕಾಸಿನ ಸಂಕಷ್ಟಗಳನ್ನು ಎದುರಿಸಿತ್ತು. 2014ರಲ್ಲಿಯೂ ಸಂಸ್ಥೆ ಸಿಬ್ಬಂದಿಯ ವೇತನ ಪಾವತಿಯನ್ನು ವಿಳಂಬಗೊಳಿಸಿತ್ತು ಎಂದು ಹಿಂದಿನ ವರದಿಗಳು ತಿಳಿಸಿವೆ.
2019ರಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಜಾಗತಿಕ ಸ್ಥಗಿತದ ಬಳಿಕ ಸ್ಟೈಸ್‌ಜೆಟ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ನಂತರ ಕೋವಿಡ್-19 ಸಾಂಕ್ರಾಮಿಕ, ಕಾನೂನು ವಿವಾದಗಳು ಮತ್ತು ಪಾವತಿ ಸಮಸ್ಯೆಗಳು ಸಂಸ್ಥೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು.
2019ರಿಂದ ನಷ್ಟದಲ್ಲಿರುವ ಸ್ಟೈಸ್‌ಜೆಟ್, 2024-25ನೇ ಹಣಕಾಸು ವರ್ಷದಲ್ಲಿ ಮಾತ್ರ ಒಮ್ಮೆಗಿನ ಹಣಕಾಸು ಒಪ್ಪಂದದ ನೆರವಿನಿಂದ ಸಣ್ಣ ಪ್ರಮಾಣದ ಲಾಭ ದಾಖಲಿಸಿತ್ತು. ಆದರೂ ಬಾಕಿ ಪಾವತಿ ಸಮಸ್ಯೆಗಳು ಮುಂದುವರಿದಿದ್ದು, ಈ ವರ್ಷ ಕನಿಷ್ಠ ಇಬ್ಬರು ವಿಮಾನ ಗುತ್ತಿಗೆದಾರರು ಸಂಸ್ಥೆಗೆ ಡೀಫಾಲ್ಟ್ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸ್ಟೈಸ್‌ಜೆಟ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. wel


Spread the love
Share:

administrator

Leave a Reply

Your email address will not be published. Required fields are marked *