Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದ್ಯಕ್ಕಾಗಿ ಹಣ ನಿರಾಕರಣೆ; ಯುವಕನ ಕೊಲೆ

Spread the love

ದಕ್ಷಿಣ ಕನ್ನಡ : ಬೈಕಂಪಾಡಿಯಲ್ಲಿ ಮದ್ಯಕ್ಕಾಗಿ ಹಣ ನಿರಾಕರಿಸಿದ್ದಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.ಕೊಲೆಯಾದವನು ಉತ್ತರ ಪ್ರದೇಶ ಮೂಲದ ಸಚಿನ್ ಕುಮಾರ್. ಆರೋಪಿಯನ್ನು ಬೆಳಗಾವಿ ಮೂಲದ ಪ್ರವೀಣ್ ಶಿವಶಂಕರಪ್ಪ ಎಂದು ಗುರುತಿಸಲಾಗಿದೆ.ಮದ್ಯ ಸೇವಿಸಿ ಬಂದ ಸಚಿನ್, ಹಣ ನೀಡದ ಪ್ರವೀಣ್‌ನ ಪೋಷಕರಿಗೆ ಬೈದಿದ್ದಕ್ಕೆ ಆಕ್ರೋಶಗೊಂಡ ಪ್ರವೀಣ್ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪಣಂಬೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಮಂಗಳೂರು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *