ಬಟ್ಟೆ ಒಗೆದಂತೆ ಕಂದಮ್ಮನ ನೆಲಕ್ಕೆ ಬಡಿದ ಪಾಪಿ : ಐಸಿಯುನಲ್ಲಿ ಬಾಲಕ ಸಾ*ವು ಬದುಕಿನ ಹೋರಾಟ

ಮುಂಬೈ: ಅಪ್ಪನ ಮೇಲಿನ ಸಿಟ್ಟಿಗೆ 4 ವರ್ಷದ ಮಗುವಿನ ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿ ಕಿರಾತಕ ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ.
ಆರೋಪಿ ಸಂದೀಪ್ ಪವಾರ್ 4 ವರ್ಷದ ಮಗುವಿನೊಂದಿಗೆ ವಿಕೃತಿ ಮೆರೆದಿದ್ದಾನೆ. ಘಟನೆಯ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಯು ಮಗುವಿನ ತಂದೆಯೊಂದಿಗೆ ಜಗಳವಾಡುತ್ತಿದ್ದ. ಈ ವೇಳೆ ಬಾಲಕ ಇತರ ಮಕ್ಕಳೊಂದಿಗೆ ಆಟವಾಡುತ್ತಾ ಆಟೋದಲ್ಲಿ ಕುಳಿತಿದ್ದ. ತಂದೆಯ ಮೇಲಿನ ಸಿಟ್ಟಿನಿಂದ ಆರೋಪಿ ಆಟೋದ ಬಳಿ ಹೋಗಿ ಮಗುವಿನ ಎರಡು ಕಾಲು ಹಿಡಿದು ಎಳೆದುತಂದಿದ್ದಾನೆ. ಬಳಿಕ ಮಗುವನ್ನು ಬಟ್ಟೆ ಒಗೆದಂತೆ ತಲೆಯನ್ನು ನೆಲಕ್ಕೆ ಬಡಿದಿದ್ದಾನೆ. ಆನಂತರ ಕಟ್ಟಡದೊಳಗೆ ಹೋಗಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ಕೂಡಲೇ ಮಗುವನ್ನು ಮೀರಾ ರಸ್ತೆಯಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ.

ಮಗುವಿನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ