Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೇಲಿ ಮಾಡುತ್ತಿದ್ದ ಗಿಳಿಗಳು- ಕೆಟ್ಟ ಮಾತು ಕೇಳಲಾರದೇ ಪ್ರತ್ಯೇಕಗೊಳಿಸಿದ ಝು ಸಿಬ್ಬಂದಿ

Spread the love

ಗಿಳಿಗಳು ಮನುಷ್ಯರ ಧ್ವನಿಗಳನ್ನು ನಕಲು ಮಾಡುವುದರಲ್ಲಿ ತುಂಬಾ ಚಾಣಾಕ್ಷತನ ತೋರುವ ಪಕ್ಷಿಗಳಿವೆ. ಅನುಕರಣೆ ಮಾಡುವುದರಲ್ಲಿ ಜನಪ್ರಿಯವಾಗಿರುವ ಗಿಳಿಗಳು ಮನುಷ್ಯರ ಮಾತನ್ನು ಅವರಿಗಿಂತಲೂ ಚೆನ್ನಾಗಿ ಅನುಕರಿಸುತ್ತವೆ. ಗಿಳಿಗಳು ಮನಷ್ಯರಂತೆ ಮಾತನಾಡುವ ಹಲವು ವೀಡಿಯೋಗಳನ್ನು ನೀವು ನೋಡಿರಬಹುದು.

ಅಷ್ಟೇ ಅಲ್ಲದೇ ಕೆಲ ವರ್ಷಗಳ ಹಿಂದೆ ಗಿಳಿಯಿಂದಾಗಿ ಪತ್ನಿಗೆ ಪತಿಯ ಅನೈತಿಕ ಸಂಬಂಧ ತಿಳಿದು ಆಕೆ ಕೋರ್ಟ್ ಮೆಟ್ಟಿಲೇರಿ ಗಂಡನಿಗೆ ಶಿಕ್ಷೆಯೂ ಆದಂತಹ ಘಟನೆ ಕುವೈತ್‌ನಲ್ಲಿ ನಡೆದಿತ್ತು. ಹೀಗಿರುವಾಗ ಬ್ರಿಟನ್‌ನ ಮೃಗಾಲಯವೊಂದರಲ್ಲಿ ಜನರನ್ನು ಅನುಕರಿಸುವುದರ ಜೊತೆಗೆ ತಮ್ಮನ್ನು ನೋಡುವುದಕ್ಕೆ ಮೃಗಾಲಯಕ್ಕೆ ಬರುತ್ತಿದ್ದ ಪ್ರವಾಸಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿ ಜೊತೆಗೆ ನಗುತ್ತಿದ್ದ ಗಿಳಿಗಳನ್ನು ಅವುಗಳ ಉಪಟಳ ತಾಳಲಾಗದೇ ಮೃಗಾಲಯದ ಸಿಬ್ಬಂದಿ ಪ್ರತ್ಯೇಕಿಸಿದಂತಹ ಅಚ್ಚರಿಯ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

ಕಾಲೇಜು ಹುಡುಗರಂತೆ ರ‍್ಯಾಗಿಂಗ್ ಪ್ರವಾಸಿಗರ ಅಣಕವಾಡುತ್ತಿದ್ದ ಗಿಳಿಗಳು..

ಶಾಲೆಯಲ್ಲಿ ಜೊತೆಗೆ ಕುಳಿತ ಮಕ್ಕಳು ಪರಸ್ಪರ ಮಾತನಾಡುತ್ತಾ ತರಲೆ ಮಾಡಿದಾಗ ಶಿಕ್ಷಕರು ಆ ಮಕ್ಕಳನ್ನು ಪ್ರತ್ಯೇಕಗೊಳಿಸಿ ದೂರ ಕೂರಿಸುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲೊಂದು ಕಡೆ ಗಿಳಿಗಳನ್ನು ಮೃಗಾಲಯದ ಸಿಬ್ಬಂದಿ ದೂರ ಮಾಡಬೇಕಾದಂತಹ ಸ್ಥಿತಿ ಬಂದಿದೆ. ವರದಿಗಳ ಪ್ರಕಾರ 2020 ರಲ್ಲಿ ಬ್ರಿಟನ್‌ನ ಲಿಂಕನ್‌ಶೈರ್ ವನ್ಯಜೀವಿ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಈ ಮೃಗಾಲಯದಲ್ಲಿದ್ದ ಬಿಲ್ಲಿ, ಎಲ್ಸಿ, ಎರಿಕ್, ಜೇಡ್ ಮತ್ತು ಟೈಸನ್ ಎಂಬ ಹೆಸರಿನ ಬೂದು ಬಣ್ಣದ ಗಿಳಿಗಳು ಮನುಷ್ಯರಂತೆ ಕಂಡವರ ಬಗೆಯೆಲ್ಲಾ ಮಾತನಾಡಲು ಶುರು ಮಾಡಿದರು. ಈ ಐದೂ ಗಿಳಿಗಳನ್ನು ಲಿಂಕನ್‌ಶೈರ್ ಉದ್ಯಾನವನವೂ ಒಂದೇ ಸಮಯಲದಲ್ಲಿ ದತ್ತು ಪಡೆದಿತ್ತು.

ಗಿಳಿಗಳ ಕೆಟ್ಟ ಮಾತು ಕೇಳಲಾಗದೇ ಪ್ರತ್ಯೇಕಗೊಳಿಸಿದ ಝೂ ಸಿಬ್ಬಂದಿ..

ತಮ್ಮನ್ನು ನೋಡುವುದಕ್ಕೆ ಪಾರ್ಕ್‌ಗೆ ಬರುತ್ತಿದ್ದ ಪ್ರವಾಸಿಗರಿಗೆ ಈ ಹಕ್ಕಿಗಳು ಶಾಪ ಹಾಕುತ್ತಿದ್ದಿದ್ದಲ್ಲದೇ ಕೆಟ್ಟ ಕೆಟ್ಟದಾಗಿ ಮಾತನಾಡಿ ಜೊತೆಗೆ ನಗುತ್ತಿದ್ದವಂತೆ, ಒಟ್ಟಿನಲ್ಲಿ ಈ ಗಿಳಿಗಳು, ಕಂಡವರ ಬಗ್ಗೆ ಮಾತನಾಡಿ ನಗುವ ಅಕ್ಕಪಕ್ಕದ ಮನೆಯವರಂತೆ ಆಡಿವೆ. ಇದರಿಂದ ಮೃಗಾಲಯಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ಗಿಳಿಗಳ ನಡವಳಿಕೆಯಿಂದ ಇರಿಸುಮುರಿಸಾಗಿದೆ. ಇದೇ ಕಾರಣಕ್ಕೆ ಈ ಐದು ಗಿಳಿಗಳನ್ನು ಪ್ರತ್ಯೇಕಗೊಳಿಸಲಾಯ್ತು ಎಂದು ವರದಿಯಾಗಿದೆ. ಜನರ ಗಮನವನ್ನು ಸೆಳೆಯುವುದನನ್ನು ಈ ಗಿಳಿಗಳು ತುಂಬಾ ಇಷ್ಟಪಡುತ್ತಿದ್ದವು. ಒಟ್ಟಿನಲ್ಲಿ ರ‍್ಯಾಗಿಂಗ್ ಮಾಡುವ ಕಾಲೇಜು ಹುಡುಗರಂತೆ ಈ ಗಿಳಿಗಳು ವರ್ತಿಸುತ್ತಿದ್ದು ನಂತರ ಜೊತೆಯಲ್ಲೇ ನಗುತ್ತಿದ್ದವಂತೆ, ಈ ಗಿಳಿಗಳು ಪಬ್‌ನಲ್ಲಿರುವ ಪೋಲಿ ವೃದ್ಧರಂತೆ ಎಂದು ಉದ್ಯಾನವನದ ಪಾಲಕರೊಬ್ಬರು ಹೇಳಿಕೊಂಡಿದ್ದಾರೆ.

ಗಿಳಿಗಳ ಈ ವಿಚಿತ್ರ ವರ್ತನೆಯಿಂದ ಬೇಸತ್ತ ಮೃಗಾಲಯದ ಸಿಬ್ಬಂದಿ ಕೊನೆಗೆ ಈ ಹಕ್ಕಿಗಳು ಮೊಟ್ಟೆ ಇಡುವುದನ್ನು ತಪ್ಪಿಸುವುದಕ್ಕಾಗಿ ಅವುಗಳನ್ನು ಬೇರ್ಪಡಿಸುವುದಕ್ಕೆ ನಿರ್ಧರಿಸಿದರು. ಐ ಐದು ಹಕ್ಕಿಗಳನ್ನು ಉದ್ಯಾನವನದ ಬೇರೆ ಬೇರೆ ಕಡೆ ಇಟ್ಟು ಅವುಗಳು ಸಭ್ಯ ಭಾಷೆಯನ್ನು ಅರಿಯಲಿ ಎಂದು ಮೃಗಾಲಯದ ಸಿಬ್ಬಂದಿ ಬಯಸಿದರು ಎಂದು ವರದಿಯಾಗಿದೆ. ಅಲ್ಲದೇ ಈ ವನ್ಯಜೀವಿ ಉದ್ಯಾನವನದಲ್ಲಿರುವ ಸುಮಾರು 30 ಗಿಳಿಗಳು ಟ್ರಕ್‌ಗಳು ಹಿಮ್ಮುಖವಾಗಿ ಚಲಿಸುವಂತೆಯೇ ಶಬ್ದಗಳನ್ನು ಮಾಡುತ್ತವೆ, ಇನ್ನು ಕೆಲವು ಮೈಕ್ರೋವೇವ್‌ಗಳ ಸದ್ದನ್ನು ಅನುಕರಿಸುತ್ತವೆ. ಎಂದು ಪಾರ್ಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ನಿಕೋಲ್ಸ್ ಹೇಳಿದ್ದಾರೆ.

ಈ ಗಿಳಿಗಳ ಈ ಕೆಟ್ಟ ಮಾತಿನಿಂದಾಗಿ ಈ ಉದ್ಯಾನವನದಲ್ಲಿ ಅತಿಥಿಗಳು(ಪ್ರವಾಸಿಗರು) ಕೆಟ್ಟ ಭಾಷೆಯನ್ನು ಕೇಳಬಹುದು ಎಂದು ಸಿಬ್ಬಂದಿ ದೊಡ್ಡ ಫಲಕಗಳನ್ನು ಹಾಕಿದ್ದಾರೆ. ಗಿಳಿಗಳ ಬಗ್ಗೆ ಇಲ್ಲಿಯವರೆಗೆ ಯಾರೂ ದೂರು ನೀಡಿಲ್ಲ. ಪಕ್ಷಿಗಳ ವರ್ಣರಂಜಿತ ಶಬ್ದಕೋಶವು ಪ್ರಪಂಚದ ಎಲ್ಲಾ ವಿನಾಶ ಮತ್ತು ಕತ್ತಲೆಯ ನಡುವೆ ಮನಸ್ಥಿತಿಯನ್ನು ಹಗುರವಾಗಿ ಮತ್ತು ಮೋಜಿನಿಂದ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿಕೋಲ್ಸ್ ಹೇಳಿದ್ದಾರೆ. ಈ ಸ್ಟೋರಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.


Spread the love
Share:

administrator

Leave a Reply

Your email address will not be published. Required fields are marked *