ಸ್ಥಗಿತಗೊಳ್ಳಲಿದೆ ಮೈಕ್ರೋಸಾಫ್ಟ್ ನ ಜನಪ್ರಿಯ ಸ್ಕ್ಯಾನರ್ ಆಯಪ್

ನವದೆಹಲಿ : ಭಾರತದ ಸೇರಿದಂತೆ ಎಲ್ಲಾ ದೇಶಗಳಿಗೂ ಮೈಕ್ರೋಸಾಫ್ಟ್ ಅವಿಭಾಜ್ಯ ಅಂಗವಾಗಿದೆ. ವಿಶ್ವದ ಅತೀ ದೊಡ್ಡ ಟೆಕ್ ಕಂಪನಿ ಮೈಕ್ರೋಸಾಫ್ಟ್ ಇದೀಗ ತನ್ನ ಅತ್ಯಂತ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆಯಪ್ ಸ್ಥಗಿತಗೊಳಿಸುತ್ತಿದೆ. ಸೆಪ್ಟೆಂಬರ್ 15ರಿಂದ ಈ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆಯಪ್ ಲೆನ್ಸ್-ಪಿಡಿಎಫ್ ಸ್ಕ್ಯಾನರ್ ಆಯಪ್ ಸ್ಥಗಿತಗೊಳ್ಳುತ್ತಿದೆ.

ವಿಶ್ವಾದ್ಯಂತ ಆಯಂಡ್ರಾಯ್ಡ್ ಹಾಗೂ ಐಒಎಸ್‌ಗಳಲ್ಲಿ ಬಳಕೆಯಾಗುತ್ತಿದ್ದ ಈ ಆಯಪ್ ಸೆಪ್ಟೆಂಬರ್ 15ರ ಬಳಿಕ ಲಭ್ಯವಿಲ್ಲ. ಈಗಾಗಲೇ ಮಿಲಿಯನ್ ಡೌನ್ಲೋಡ್ ಕಂಡಿರುವ ಈ ಆಯಪ್ ಕಾರ್ಯನಿರ್ವಹಣೆ ಸ್ಥಗಿತಗೊಳಿಸುತ್ತಿದೆ.
ಏನಿದು ಮೈಕ್ರೋಸಾಫ್ಟ್ ಲೆನ್ಸ್ ಆಯಪ್?
ಆಯಂಡ್ರಾಯ್ಡ್ ಹಾಗೂ ಇಒಎಸ್ ಬಳೆಕೆದಾರರು ಇಮೇಜ್‌ಗಳನ್ನು ಪಿಡಿಎಫ್, ವರ್ಡ್, ಪವರ್ ಪಾಯಿಂಟ್, ಎಕ್ಸೆಲ್ ಕನ್ವರ್ಟ್ ಮಾಡಲು ಹೆಚ್ಚಾಗಿ ಈ ಲೆನ್ಸ್ ಡಾಕ್ಯುಮೆಂಟ್ ಸ್ಕ್ಯಾನರ್ ಆಯಪ್ ಬಳಸುತ್ತಿದ್ದರು. ಆರಂಭದಲ್ಲಿ ಇದು ಆಫೀಸ್ ಲೆನ್ಸ್ ಎಂಬ ಹೆಸರಿನಲ್ಲಿ ಜನಪ್ರಿಯವಾಗಿದ್ದರೆ, ಬಳಿಕ ಮೈಕ್ರೋಸಾಫ್ಟ್ ಲೆನ್ಸ್ ಎಂದು ಮರುನಾಮಕರಣ ಮಾಡಲಾಗಿತ್ತು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ 50 ಮಿಲಿಯನ್‌ಗೂ ಹೆಚ್ಚು ಡೌನ್ಲೋಡ್ ಕಂಡಿತ್ತು. 5ರಲ್ಲಿ 4.9 ರೇಟಿಂಗ್ ಪಡೆದಿದ್ದ ಈ ಮೈಕ್ರೋಸಾಫ್ಟ್ ಲೆನ್ಸ್ ಆಯಪ್ ಟಾಪ್ ರೇಟಿಂಗ್ ಆಯಪ್ ಎಂದು ಪರಿಗಣಿಸಲ್ಪಟ್ಟಿತ್ತು.
ಸೆ.15ಕ್ಕೆ ಲೆನ್ಸ್ ಆಯಪ್ ನಿವೃತ್ತಿ, ನವೆಂಬರ್ 15ಕ್ಕೆ ಪ್ಲೇ ಸ್ಟೋರ್‌ನಿಂದ ಡಿಲೀಟ್
ಮೈಕ್ರೋಸಾಫ್ಟ್ ಈ ಕುರಿತು ಸ್ಪಷ್ಟನೆ ನೀಡಿದೆ. ಮೈಕ್ರೋಸಾಫ್ಟ್ ಲೆನ್ಸ್ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಸೆಪ್ಟೆಂಬರ್ 15ಕಕ್ಕೆ ಮೈಕ್ರೋಸಾಫ್ಟ್ ಲೆನ್ಸ್ ನಿವೃತ್ತಿಯಾಗುತ್ತಿದೆ ಎಂದಿದೆ. ನವೆಂಬರ್ 15ಕ್ಕೆ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಯಪಲ್ ಸ್ಟೋರ್‌ನಿಂದ ಆಯಪ್ ಡಿಲೀಟ್ ಆಗಲಿದೆ ಎಂದಿದೆ.
ಡಿಸೆಂಬರ್ 15ರ ವರೆಗೆ ಬಳಕೆದಾರಿಗೆ ಸ್ಕ್ಯಾನಿಂಗ್ ಆಯಪ್ ಸೇವೆ
ಸೆಪ್ಟೆಂಬರ್ 15ಕ್ಕೆ ಮೈಕ್ರೋಸಾಫ್ಟ್ ಲೆನ್ಸ್ ಆಯಪ್ ಸೇವೆ ಸ್ಥಗಿತಗೊಳಿಸುತ್ತಿದೆ. ಆದರೆ ಪ್ಲೇ ಸ್ಟೋರ್‌ನಿಂದ ನೆವೆಂಬರ್ 15ಕ್ಕೆ ಆಯಪ್ ಡಿಲೀಟ್ ಆಗಲಿದೆ. ಇತ್ತ ಈಗಾಗಲೇ ಡೌನ್ಲೋಡ್ ಮಾಡಿ ಬಳಕೆ ಮಾಡುತ್ತಿರುವ ಬಳಕೆದಾರರು ಡಿಸೆಂಬರ್ 15ರ ವರೆಗೆ ಬಕೆ ಮಾಡಲು ಸಾಧ್ಯವಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಈಗಾಲೇ ಮೈಕ್ರೋಸಾಫ್ಟ್ ಲೆನ್ಸ್ ಆಯಪ್ ಬಳಕೆ ಮಾಡುತ್ತಿರುವವರು ನಿರಾಸೆ ಪಡಬೇಕಿಲ್ಲ. ಮೈಕ್ರೋಸಾಫ್ಟ್ 365 ಕೋಪೈಲೆಟ್ ಆಯಪ್ ಈ ಎಲ್ಲಾ ಸೇವೆ ನೀಡುತ್ತಿದೆ. ಹೀಗಾಗಿ ಬಳಕೆದಾರರು ಈ ಆಯಪ್ ಬಳಕೆ ಮಾಡಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ.
