ಮೆಟಾ ಕಂಪನಿಯ ಸಿಇಒ ಜುಕರ್ಬರ್ಗ್ ಸ್ಯಾಲರಿ ಕೇವಲ 85 ರೂಪಾಯಿ ಮಾತ್ರ!

ಮೆಟಾ ಸಂಸ್ಥೆ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲೊಂದು. ಇಷ್ಟೇ ಅಲ್ಲ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಫೇಸ್ಬುಕ್, ಇನ್ಸ್ಟಾಗ್ರಾಂ, ವ್ಯಾಟ್ಸಾಪ್ ಒಡೆತನ ಹೊಂದರುವ ಮೆಟಾ ಕಂಪನಿ ವಿಶ್ವದ ಅತೀ ಹೆಚ್ಚು ಆದಾಯ ಮಾಡುತ್ತಿರುವ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್ಬರ್ಗ್ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಆದರೆ ಮೆಟಾ ಕಂಪನಿಯ ಸಿಇಒ ಜುಕರ್ಬರ್ಗ್ ಸ್ಯಾಲರಿ ಕೇವಲ 85 ರೂಪಾಯಿ ಮಾತ್ರ. ಮಾರ್ಕ್ ಜುಕರ್ಬರ್ಗ್ 2013ರಲ್ಲಿ 4 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು. ಆದರೆ 2025ರಲ್ಲಿ ಮಾರ್ಕ್ ಜುಕರ್ಬರ್ಗ್ ತಿಂಗಳ ಸಂಬಳ ಕೇವಲ 85 ರೂಪಾಯಿ. 2018ರಲ್ಲಿ ಈ ಕುರಿತು ಹಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ವಿಶೇಷ ಅಂದರೆ ತನಗೆ ಕೇವಲ 1 ಅಮೆರಿಕನ್ ಡಾಲರ್ ಸ್ಯಾಲರಿ ಸಾಕು ಎಂದು ಖುದ್ದು ಮಾರ್ಕ್ ಜುಕರ್ಬರ್ಗ್ ಹೇಳಿದ್ದರು. ಇದರಂತೆ ಕಳೆದ ಹಲವು ವರ್ಷಗಳಿಂದ ಮಾರ್ಕ್ ಜುಕರ್ಬರ್ಗ್ ಕೇವಲ 85 ರೂಪಾಯಿ ತಿಂಗಳ ಸಂಬಳ ಪಡೆಯುತ್ತಿದ್ದಾರೆ. ಮಾರ್ಕ್ ಜುಕರ್ಬರ್ಗ್ 2004ರಲ್ಲಿ ಫೇಸ್ಬುಕ್ ಸಂಸ್ಥೆ ಹುಟ್ಟು ಹಾಕಿದ್ದರು. ಅಲ್ಲಿಂದ ಇಲ್ಲೀವರೆಗೆ ಫೇಸ್ಬುಕ್ ಸಂಸ್ಥೆಯಲ್ಲಿ ಅತೀ ಕಡಿಮೆ ಸಂಬಳ ಪಡೆದ ಉದ್ಯೋಗಿ ಅಂದರೆ ಅದು ಮಾರ್ಕ್ ಜುಕರ್ಬರ್ಗ್.
ಇಷ್ಟು ಕಡಿಮೆ ಸಂಬಳ ಪಡೆದರೂ ಮಾರ್ಕ್ ಜುಕರ್ಬರ್ಗ್ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೇಗೆ?
ಈ ಪ್ರಶ್ನೆಗೆ ಉತ್ತರವಿದೆ. 2025ರ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಮಾರ್ಕ್ ಜುಕರ್ಬರ್ಗ್ ಸ್ಥಾನ ಪಡೆದಿದ್ದಾರೆ. ಮಾರ್ಕ್ ಜುಕರ್ಬರ್ಗ್ ಆಸ್ತಿ ಬರೋಬ್ಬರಿ 120 ಬಿಲಿಯನ್ ಅಮೆರಿಕನ್ ಡಾಲರ್ ಎಂದು ದಾಖಲಿಸಿದೆ. ಇದಕ್ಕೆ ಮುಖ್ಯ ಕಾರಣ ಮೆಟಾ ಸಂಸ್ಥೆಯ ಈಕ್ಟಿಟಿ ಸ್ಟಾರ್ ಮೌಲ್ಯದಿಂದ ಮಾರ್ಕ್ ಜುಕರ್ಬರ್ಗ್ ಆಸ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತರ ಹಲವು ಟೆಕ್ ಸಂಬಂಧಿತ ಕಂಪನಿಗಳಲ್ಲೂ ಮಾರ್ಕ್ ಜುಕರ್ಬರ್ಗ್ ಹೂಡಿಕೆ ಮಾಡಿದ್ದಾರೆ. ಪ್ರಮುಖವಾಗಿ ಮೆಟಾ ಸ್ಟಾಕ್ಸ್ ಮಾರ್ಕ್ ಜುಕರ್ಬರ್ಗ್ ಆಸ್ತಿಯನ್ನು ಡಬಲ್ ಮಾಡುತ್ತಲೇ ಇದೆ. ಸೋಶಿಯಲ್ ಮೀಡಿಯಾ ನೆಟ್ವರ್ಕಿಂಗ್ ತಾಣವಾಗಿ ಆರಂಭಗೊಂಡ ಫೇಸ್ಬುಕ್ ಇದೀಗ ಅತೀ ದೊಡ್ಡ ಸೋಶಿಯಲ್ ಮೀಡಿಯಾ, ಬ್ಯೂಸಿನೆಸ್ ಆಗಿ ಹೊರಹೊಮ್ಮಿದೆ. ಕಂಪನಿಯ ಸಿಇಒ ಆಗಿ, ಮುಖ್ಯಸ್ಥರಾಗಿ ವೇತನ ನಿರಾಕರಿಸಿ ಕೆಲಸ ಮಾಡುತ್ತಿರುವ ಟ್ರೆಂಡ್ ಹೊಸದೇನಲ್ಲ. ರಿಲಯನ್ಸ್ ಇಂಡಸ್ಟ್ರಿ ಮಖ್ಯಸ್ಥ ಮುಕೇಶ್ ಅಂಬಾನಿ ಕೂಡ ಸ್ಯಾಲರಿ ಪಡೆಯುತ್ತಿಲ್ಲ. ಮುಕೇಶ್ ಅಂಬಾನಿ 15 ಕೋಟಿ ರೂಪಾಯಿ ಸ್ಯಾಲರಿ ಪಡೆಯುತ್ತಿದ್ದರು. ಆದರೆ ಕೋವಿಡ್ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಒಂದು ರೂಪಾಯಿ ಸ್ಯಾಲರಿ ಪಡೆಯದಿರಲು ನಿರ್ಧರಿಸಿದ್ದರು. ಈಗಲೂ ಮುಕೇಶ್ ಅಂಬಾನಿ ವೇತನ ಪಡೆಯದೇ ಕೆಲಸ ಮಾಡುತ್ತಿದ್ದಾರೆ.