ವೈಜಾಗ್‌ನಲ್ಲಿ ಗೂಗಲ್‌ನಿಂದ ₹1.33 ಲಕ್ಷ ಕೋಟಿ ಬೃಹತ್ ಹೂಡಿಕೆ: ಅಮೆರಿಕ ಹೊರಗೆ ಗೂಗಲ್ ನಿರ್ಮಿಸುತ್ತಿರುವ ಅತಿ ದೊಡ್ಡ AI ಡೇಟಾ ಹಬ್ ಇದೇ!

ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಅವರು Vizag ನಲ್ಲಿರುವ ‘G’ ಅಂದರೆ ಅದು ಗೂಗಲ್ ಎಂದು ಬಣ್ಣಿಸಿದ್ದಾರೆ.

ವಿಶಾಖಪಟ್ಟಣದಲ್ಲಿ(ವೈಜಾಗ್) ಎಐ ಡೇಟಾ ಹಬ್ ಮಾಡಲು ಗೂಗಲ್ ಆಂಧ್ರ ಸರ್ಕಾರದ ಜೊತೆ ಸಹಿ ಹಾಕಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಬಂದರು ನಗರಿಯಾಗಿರುವ ವೈಜಾಗ್‌ನ ಫೋಟೋವನ್ನು ಹಾಕಿ #YoungestStateHighestInvestment ಎಂದು ಹ್ಯಾಶ್‌ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.
ಡೇಟಾ ಹಬ್ ನಿರ್ಮಾಣಕ್ಕೆ ಗೂಗಲ್ ಸುಮಾರು 1.33 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿದ್ದು ಮುಂದಿನ 5 ವರ್ಷಗಳಲ್ಲಿ ತಲೆ ಎತ್ತಲಿದೆ. ಅಮೆರಿಕದ ಹೊರಗೆ ಗೂಗಲ್ ನಿರ್ಮಿಸುತ್ತಿರುವ ಅತಿ ದೊಡ್ಡ ಹೂಡಿಕೆ ಇದಾಗಿದೆ.
AI ಮೂಲಸೌಕರ್ಯ, ಡೇಟಾ ಕೇಂದ್ರಗಳು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಹೊಸ ಸಬ್‌ಸೀ ಗೇಟ್‌ವೇ ಅನ್ನು ಸಂಯೋಜಿಸುತ್ತದೆ. ಇದು ದೇಶದ ಮೊದಲ ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಕ್ಯಾಂಪಸ್ ಆಗಿರಲಿದೆ.
ಐದು ವರ್ಷಗಳ ಯೋಜನೆಯು (2026–2030) 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಎನ್ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಈ ಕೇಂದ್ರವನ್ನು ಅಡಾನಿಕಾನೆಕ್ಸ್ (AdaniConneX) ಮತ್ತು ಏರ್‌ಟೆಲ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಉಪಕ್ರಮದ ಭಾಗವಾಗಿ, ಗೂಗಲ್ ವಿಶಾಖಪಟ್ಟಣದಲ್ಲಿ ಹೊಸ ಅಂತರರಾಷ್ಟ್ರೀಯ ಸಬ್‌ಸೀ ಕೇಬಲ್‌ಗಳನ್ನು ನಿರ್ಮಿಸಲಿದೆ. ಇದು ಭಾರತದ ಇಂಟರ್ನೆಟ್ ಸಾಮರ್ಥ್ಯವನ್ನು ಸುಧಾರಿಸಲಿದೆ.