Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೆಲಂಗಾಣದಲ್ಲಿ ಮೂಕಪ್ರಾಣಿಗಳ ನರಮೇಧ

Spread the love

ಹೈದರಾಬಾದ್: ತೆಲಂಗಾಣದಲ್ಲಿ (Telangana) ಬೀದಿನಾಯಿಗಳ (Stray Dogs) ಸಾಮೂಹಿಕ ಹತ್ಯೆಯ ಆರೋಪಗಳು ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಕಳೆದ ಒಂದು ವಾರದಲ್ಲಿ 500 ನಾಯಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.

ಕಾಮರೆಡ್ಡಿ ಜಿಲ್ಲೆಯ ಭವಾನಿಪೇಟ್, ಪಲ್ವಂಚ, ಫರೀದ್‌ಪೇಟ್, ವಾಡಿ ಮತ್ತು ಬಂಡರಾಮೇಶ್ವರಪಲ್ಲಿ ಸೇರಿದಂತೆ ಹಳ್ಳಿಗಳಲ್ಲಿ ಬೀದಿ ನಾಯಿಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗಿದೆ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತ ಅದುಲಪುರಂ ಗೌತಮ್ (35) ಜನವರಿ 12 ರಂದು ದಾಖಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ. ಕಳೆದ ಎರಡು ಮೂರು ದಿನಗಳಲ್ಲಿ ಸುಮಾರು 200 ನಾಯಿಗಳನ್ನು ಕೊಲ್ಲಲಾಗಿದೆ ಎಂದು ಅವರು ಹೇಳಿದ್ದಾರೆ.

ಜನವರಿ 12 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗೌತಮ್ ಅವರಿಗೆ ನಾಯಿಗಳ ಸಾಮೂಹಿಕ ಹತ್ಯೆಯ ಬಗ್ಗೆ ಮಾಹಿತಿ ಸಿಕ್ಕಿತು. ಆಯಾ ಗ್ರಾಮದ ಸರಪಂಚರ ಸೂಚನೆಯ ಮೇರೆಗೆ ಈ ಕೃತ್ಯಗಳನ್ನು ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕೃತ್ಯಗಳನ್ನು ಉದ್ದೇಶಪೂರ್ವಕ ಮತ್ತು ಕ್ರೂರ ಎಂದು ದೂರುದಾರ ಕರೆದಿದ್ದಾರೆ. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಕೋರಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *