Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಗಾಂಜಾ ಬೆರೆಸಿದ ಸಿಗರೇಟ್ ಸೇವೆನೆ, ಓರ್ವ ಯುವಕನ ಬಂಧನ

Spread the love

ಮಂಗಳೂರು: ಸಿಗರೇಟ್‌ನಲ್ಲಿ ಗಾಂಜಾ ಬೆರೆಸಿ ಸೇವಿಸುತ್ತಿದ್ದ ಯುವಕನನ್ನು ಉರ್ವ ಠಾಣೆ ಪೊಲೀಸರು ಬಿಜೈ ಕಾಪಿಕಾಡಿನಲ್ಲಿ ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆ ಮುಳಿಯಾರ್‌ ಪೊವ್ವಲ್‌ ನಿವಾಸಿ ಮೊಹಮ್ಮದ್‌ ಫಾಸಿಲ್‌ ಫಿರೋಜ್‌ ಪಿ.ಸಿ. (23) ಬಂಧಿತ ಆರೋಪಿ. ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟು ಸೇದುತ್ತಿದ್ದ ಈತ, ಪೊಲೀಸರು ಬರುತ್ತಿದ್ದಂತೆ ಸಿಗರೇಟನ್ನು ಚರಂಡಿಗೆ ಎಸೆದಿದ್ದಾನೆ.

ವಿಚಾರಿಸಿದಾಗ ಬಾಯಿಯಲ್ಲಿ ಮಾದಕ ವಸ್ತು ಸೇವನೆಯ ಘಾಟು ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಗಾಂಜಾವನ್ನು ಸಿಗರೇಟಿನೊಳಗೆ ತುಂಬಿಸಿ ಸೇದುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *