Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರ ದಾಳಿ – 17 ಜಾನುವಾರುಗಳ ರಕ್ಷಣೆ, ಚಾಲಕ ಬಂಧನ!

Spread the love

ಮಂಗಳೂರು : ಅಕ್ರಮವಾಗಿ ಲಾರಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಜಾಲವನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಲಾರಿಯಲ್ಲಿದ್ದ 17 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಲಾರಿ ಚಾಲಕನನ್ನು ಬಂಧಿಸಲಾಗಿದೆ. ಹಾಸನ ಜಿಲ್ಲೆಯ ಹುಣಸಿನಕೆರೆ ರೋಡ್ ನಿವಾಸಿ ಸಾಧೀಕ್ ಜಿ. (23) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಸುಬಾನ್ ಹಾಗೂ ರೆಹಮಾನ್ ಎಂಬ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.

ಸೆಪ್ಟೆಂಬರ್ 22ರಂದು ಬೆಳಗಿನ ಜಾವ ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸಿದ್ದರಾಮ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಆಡ್ಯಾರು ಮಾರ್ಗವಾಗಿ ಮಂಗಳೂರು ನಗರಕ್ಕೆ ಲಾರಿಯೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಬೆಳಿಗ್ಗೆ ಸುಮಾರು 6:30ರ ಹೊತ್ತಿಗೆ ಆಡ್ಯಾರು ಕಡೆಯಿಂದ ಬಂದ ಕಂದು ಬಣ್ಣದ ಐಷರ್ ಲಾರಿಯನ್ನು ಪೊಲೀಸರು ಬೆನ್ನಟ್ಟಿ ಪಡೀಲ್‌ನ ಟೊಯೋಟಾ ಕಾರ್ ಶೋರೂಂ ಎದುರು ತಡೆದು ನಿಲ್ಲಿಸಿದರು. ಈ ವೇಳೆ ಚಾಲಕ ಸಾಧೀಕ್ ಸಿಕ್ಕಿಬಿದ್ದಿದ್ದು, ಲಾರಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ವಾಹನದಿಂದ ಇಳಿದು ಪರಾರಿಯಾಗಿದ್ದಾನೆ.

ಲಾರಿಯ ಹಿಂಭಾಗದ ಬಾಡಿಯನ್ನು ಹಸಿರು ಬಣ್ಣದ ಟಾರ್ಪಲಿನ್‌ನಿಂದ ಮುಚ್ಚಲಾಗಿತ್ತು. ಅದನ್ನು ತೆರೆದು ಪರಿಶೀಲಿಸಿದಾಗ ಒಟ್ಟು 17 ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳಿಗೆ ಕನಿಷ್ಠ ಉಸಿರಾಡಲೂ ಸಾದ್ಯವಾಗದಂತೆ, ಒಂದರ ಮೇಲೊಂದು ಬಿಗಿಯಾಗಿ ಹಗ್ಗಗಳಿಂದ ಲಾರಿಯ ಕ್ಯಾರೇಜ್‌ಗಳಿಗೆ ಕತ್ತುಗಳನ್ನು ಮೇಲಕ್ಕೆ ಎತ್ತಿ ಕಟ್ಟಿ ಅತ್ಯಂತ ಕ್ರೂರ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು.
ಪೊಲೀಸರು 17 ಜಾನುವಾರುಗಳು, ಸಾಗಾಟಕ್ಕೆ ಬಳಸಿದ್ದ ಐಷರ್ ಲಾರಿ ಹಾಗೂ ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿ ದಯಾ ಸಂಘರ್ಷ ತಡೆ ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಷೇಧ ಮತ್ತು ಸಂರಕ್ಷಣಾ ಕಾಯ್ದೆಯಡಿ (BNS ಸೆಕ್ಷನ್‌ಗಳು) ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಸುಬಾನ್ ಮತ್ತು ರೆಹಮಾನ್ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *