ಮಂಡ್ಯ: ಸಂತೇಬಾಚಹಳ್ಳಿ ವ್ಯಾಪ್ತಿಯಲ್ಲಿ 9 ನವಿಲುಗಳ ನಿಗೂಢ ಸಾವು; ಗ್ರಾಮಸ್ಥರಲ್ಲಿ ಆತಂಕ

ಸಂತೇಬಾಚಹಳ್ಳಿ (ಮಂಡ್ಯ ಜಿಲ್ಲೆ: ಸಮೀಪದ ಬೆಟ್ಟದಪುರ ಹಾಗೂ ಸೋಮೇನಹಳ್ಳಿ ಗಡಿ ಪ್ರದೇಶದಲ್ಲಿ 9 ನವಿಲುಗಳ ಕಳೇಬರಗಳು ಪತ್ತೆಯಾಗಿವೆ.

‘ಬೆಟ್ಟದಪುರ ಸರ್ವೇ ನಂಬರ್ 2ರ ಹಳ್ಳ ಹಾಗೂ ಬೇಲಿ ಸರಹದ್ದಿನಲ್ಲಿ 7 ನವಿಲುಗಳು ಹಾಗೂ ಸೋಮೇನಹಳ್ಳಿಯ 54ನೇ ಸರ್ವೆ ನಂಬರ್ನಲ್ಲಿ ಎರಡು ನವಿಲುಗಳ ಕಳೇಬರ ಪತ್ತೆಯಾಗಿವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಹೇಳಿದರು. ವಲಯ ಅರಣ್ಯಧಿಕಾರಿ ಅನಿತಾ ಮಾತನಾಡಿ, ‘ನವಿಲುಗಳ ಅಂಗಾಂಗ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.