Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫ್ರೀ ಸಿನಿಮಾ ನೋಡಲು ಹೋಗಿ 56 ಸಾವಿರ ಕಳೆದುಕೊಂಡ ವ್ಯಕ್ತಿ

Spread the love

ಬೆಂಗಳೂರು: ಹೊಸ ಸಿನೆಮಾ ರಿಲೀಸ್ ಆಗಿದೆ, ಓಟಿಟಿಗೂ ಬಂದಿದೆ ಆದರೆ ಹಣ ಕೊಟ್ಟು ನೋಡಲು ಮನಸ್ಸಿಲ್ಲವೆಂದು ಫ್ರೀಯಾಗಿ ಎಪಿಕೆ ಫೈಲ್ ಡೌನ್​ಲೋಡ್ ಮಾಡುವ ಗೀಳಿಗೆ ಬಿದ್ದವರು ಹಲವರು ಇದ್ದಾರೆ. ಆದರೆ ಹೀಗೆ ಉಚಿತವಾಗಿ ಸಿನಿಮಾ (Free Movie) ನೋಡಲು ಮುಂದಾದ ಕಾಂಟ್ರಾಕ್ಟರ್ ಒಬ್ಬರು ಸೈಬರ್ ವಂಚನೆಗೆ ಒಳಗಾಗಿ 56 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಓಟಿಪಿ ಇಲ್ಲದೆಯೇ ಹೋಯ್ತು ಹಣ!
ಅಪರಿಚಿತ ವ್ಯಕ್ತಿಯೊಬ್ಬರು ಬಾಲಕೃಷ್ಣ ಎಂಬುವವರಿಗೆ ವಾಟ್ಸಾಪ್ ಮೂಲಕ ಬಾರ್ಡರ್-2 ಚಿತ್ರದ ಎಪಿಕೆ ಫೈಲ್ ಕಳುಹಿಸಿದ್ದರು. ಈ ಲಿಂಕ್ ಮೂಲಕ ಚಿತ್ರವನ್ನು ಡೌನ್‌ಲೋಡ್ ಮಾಡಲು ಮುಂದಾದಾಗ, ಸೈಬರ್ ವಂಚಕರು ಬಾಲಕೃಷ್ಣ ಅವರ ಖಾಸಗಿ ಡೇಟಾವನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರ ಡೌನ್‌ಲೋಡ್ ಆಗುತ್ತಿರುವ ಸಮಯವನ್ನು ದುರುಪಯೋಗಪಡಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ 56 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ.ಇದಕ್ಕೂ ಮೊದಲು ಬ್ಯಾಂಕ್​ನಿಂದ ಎಟಿಎಮ್ ಕಾರ್ಡ್​ ಕಳುಹಿಸಲು ನಿಮ್ಮ ಮನೆಯ ವಿಳಾಸ ಕಳುಹಿಸಿ ಎಂಬ ಹುಸಿ ಕರೆಯನ್ನೂ ಬಾಲಕೃಷ್ಣ ಸ್ವೀಕರಿಸಿದ್ದರು. ಆದರೆ ಇವರು ತಮ್ಮ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಂಡಿರಲಿಲ್ಲ. ನಂತರ ಫೆಬ್ರವರಿ 2ರಂದು ಅವರ ವಾಟ್ಸಾಪ್ಗೆ ಬೇರೊಂದು ನಂಬರ್​ನಿಂದ ಮೂವಿಯ ಎಪಿಕೆ ಫೈಲ್ ಬಂದಿತ್ತು ಎಂದು ದೂರುದಾರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *