Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೋರಿಯನ್ನ ಕೆಣಕಿ ಆಸ್ಪತ್ರೆ ಪಾಲಾದ ವ್ಯಕ್ತಿ; ಮೂರ್ಖತನಕ್ಕೆ ತಕ್ಕ ಪಾಠ ಕಲಿಸಿದ ಗೂಳಿ!

Spread the love

ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಕಚ್ವಾ ಎಂಬಲ್ಲಿ ವ್ಯಕ್ತಿಯ ಮೂರ್ಖತನಕ್ಕೆ ಗೂಳಿಯೊಂದು ತಕ್ಕ ಪಾಠ ಕಲಿಸಿದ ವಿಡಿಯೋ ವೈರಲ್ ಆಗಿದೆ. ಅಲೆದಾಡುತ್ತಿದ್ದ ಹೋರಿಯನ್ನು ವಿನಾಕಾರಣ ಕೆಣಕಿದ ವ್ಯಕ್ತಿಯೊಬ್ಬ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಸ್ಥಳೀಯ ನಿವಾಸಿಯಾದ ರಾಜು ಸಿಂಗ್ ಎಂಬ ವ್ಯಕ್ತಿ ರಸ್ತೆಯಲ್ಲಿ ಸುಮ್ಮನೆ ಓಡಾಡುತ್ತಿದ್ದ ಹೋರಿಗೆ ಹೊಡೆಯಲು ಹೋಗಿದ್ದಾರೆ. ಮೊದಲು ಇಟ್ಟಿಗೆಗಳನ್ನು ಹೋರಿಯ ಮೇಲೆ ಎಸೆದು ಅದನ್ನು ಓಡಿಸಲು ಪ್ರಯತ್ನಿಸಿದ ಆತ, ನಂತರ ಕೋಲನ್ನು ಹಿಡಿದು ಹೋರಿಗೆ ಮನಬಂದಂತೆ ಹೊಡೆಯಲು ಆರಂಭಿಸಿದ್ದ.
ಸತತವಾಗಿ ಏಟು ತಿಂದ ಹೋರಿಯ ತಾಳ್ಮೆ ಕಟ್ಟೆಯೊಡೆದಿದೆ. ರಾಜು ಸಿಂಗ್‌ನ ಹಲ್ಲೆಯಿಂದ ಕೆರಳಿದ ಹೋರಿ, ಕ್ಷಣಾರ್ಧದಲ್ಲಿ ಆತನ ಮೇಲೆರಗಿದೆ. ರಾಜು ತಪ್ಪಿಸಿಕೊಳ್ಳುವ ಮೊದಲೇ ತನ್ನ ಬಲಿಷ್ಠವಾದ ಕೊಂಬುಗಳಿಂದ ಆತನನ್ನು ತಿವಿದು ದೂರಕ್ಕೆ ಎಸೆದಿದೆ.ಸುತ್ತಮುತ್ತಲಿದ್ದ ಜನರು ಹೋರಿಯನ್ನು ಓಡಿಸಿ ರಾಜು ಸಿಂಗ್‌ನನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *