Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಲಯಾಳಂ ಚಿತ್ರ ‘ವಿಕ್ಟೋರಿಯಾ’ ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

Spread the love

ತಿರುವನಂತಪುರಂ: ಭಾರತೀಯ ಸಿನಿಮೋದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಚೀನಾದಲ್ಲಿ ನಡೆಯಲಿರುವ 27ನೇ ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Shanghai International Film Festival) ಈ ಬಾರಿ ಮಲಯಾಳಂನ ‘ವಿಕ್ಟೋರಿಯಾ’ (Victoria) ಸಿನಿಮಾ ಆಯ್ಕೆಯಾಗಿದೆ.

2024ರಲ್ಲಿ ಕೇರಳದ 29ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನಗೊಂಡು ಅತ್ಯುತ್ತಮ ಮಲಯಾಳಂ ಚಲನ ಚಿತ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು. ಇದೀಗ 27ನೇ ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (SIFF) ಅಧಿಕೃತವಾಗಿ ಆಯ್ಕೆಯಾಗಿದೆ‌. ಈ ಮೂಲಕ ಶಿವರಂಜಿನಿ ಜೆ. ನಿರ್ದೇಶಿಸಿದ ಮಲಯಾಳಂ ಚಿತ್ರ ಶಾಂಘೈ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಏಕೈಕ ಭಾರತೀಯ ಸಿನಿಮಾ ಎಂಬ ಖ್ಯಾತಿ ಪಡೆದಿದೆ.

ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಚೀನಾದ ಅತಿದೊಡ್ಡ ಫಿಲ್ಮ್‌ ಫೆಸ್ಟಿವಲ್‌ ಎನಿಸಿಕೊಂಡಿದೆ. ಬರೋಬ್ಬರಿ 10 ದಿನಗಳ ಕಾಲ ಈ ಚಲನಚೊತ್ರೋತ್ಸವ ನಡೆಯಲಿದೆ. ಜೂ. 13ರಿಂದ ಜೂನ್ 22ರವರೆಗೆ ಆಯೋಜಿಸಲಾಗಿದ್ದು, ಇರಾನ್, ಜಪಾನ್, ಚೀನಾ, ಶ್ರೀಲಂಕಾ, ಟರ್ಕಿ ಸೇರಿದಂತೆ ಹಲವು ದೇಶಗಳ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಅದೇ ರೀತಿ ಚಲನಚಿತ್ರೋತ್ಸವದಲ್ಲಿ ಏಷ್ಯನ್ ನ್ಯೂ ಟ್ಯಾಲೆಂಟ್ ವಿಭಾಗದಲ್ಲಿ ʼವಿಕ್ಟೋರಿಯಾʼ ಸಿನಿಮಾವನ್ನು ಪ್ರದರ್ಶಿಸಲಾಗುತ್ತದೆ.

ʼಕಾತಲ್ʼ ಚಿತ್ರದ ಮೂಲಕ ಖ್ಯಾತಿ ಪಡೆದ ಜನಪ್ರಿಯ ನಿರ್ದೇಶಕ ಜಿಯೋ ಬೇಬಿ ಈ ಖುಷಿ ಸುದ್ದಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಸಿನಿಮೋದ್ಯಮಕ್ಕೆ ಇದೊಂದು ಹೆಮ್ಮೆಯ ಕ್ಷಣ. 27ನೇ ಶಾಂಘೈ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆಯಲಿರುವ ಏಕೈಕ ಭಾರತೀಯ ಚಿತ್ರ ‘ವಿಕ್ಟೋರಿಯಾ’. ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಯುವ ಬ್ಯೂಟಿಷಿಯನ್ ವಿಕ್ಟೋರಿಯಾ ಎನ್ನುವ ಪಾತ್ರದ ಸುತ್ತ ಸಾಗುವ ಚಿತ್ರ ಇದಾಗಿದೆ. ಕ್ಯಾಥೋಲಿಕ್ ಧರ್ಮದಲ್ಲಿ ಹುಟ್ಟಿದ್ದ ವಿಕ್ಟೋರಿಯಾ ಮನೆಯಲ್ಲಿ ಜಗಳವಾಡಿ ಹಿಂದೂ ಗೆಳೆಯನೊಂದಿಗೆ ಓಡಿಹೋಗಲು ನಿರ್ಧರಿಸುತ್ತಾಳೆ. ಧಾರ್ಮಿಕ ಒತ್ತಡ, ಮಹಿಳಾ ಸ್ವಾತಂತ್ರ್ಯ ಮತ್ತು ಇತರ ವಿಷಯಗಳು ಕೂಡ ಈ ಸಿನಿಮಾದ ಮುಖ್ಯ ಕಥಾವಸ್ತುವಾಗಿದೆ. ಚಿತ್ರದಲ್ಲಿ ಮೀನಾಕ್ಷಿ ಜಯನ್, ಶ್ರೀಶ್ಮಾ ಚಂದ್ರನ್, ಜಾಲಿ ಚಿರಾಯತ್, ಸ್ಟೀಜಾ ಮೇರಿ, ದರ್ಶನ ವಿಕಾಸ್, ಜೀನಾ ರಾಜೀವ್ ಮತ್ತು ರೇಮಾದೇವಿ ನಟಿಸಿದ್ದಾರೆ.

ʼಲಾಪತಾ ಲೇಡಿಸ್ʼ ಸಿನಿಮಾ ಖ್ಯಾತಿಯ ನಿರ್ಮಾಪಕಿ ಕಿರಣ್ ರಾವ್ ಈ ಉತ್ಸವದ ಮುಖ್ಯ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಅದೇ ರೀತಿ ಪ್ಯಾರಡಿಸೊದ ಪ್ರಸಿದ್ಧ ನಿರ್ದೇಶಕಿ ಗೈ ಸೆಪ್ಪೆ ಟೊರ್ನಾ ಟೋರ್ ಕೂಡ ಮುಖ್ಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. SIFF ಅನ್ನು ಚೀನಾ ಚಲನಚಿತ್ರ ಮಂಡಳಿ ಮತ್ತು ಶಾಂಘೈ ಸಂಸ್ಥೆ ಆಯೋಜಿಸುತ್ತಿವೆ. FIAPFನಿಂದ ಮಾನ್ಯತೆ ಪಡೆದ ಏಕೈಕ ಚೀನೀ ಉತ್ಸವ ಇದಾಗಿದ್ದು ಈ ಉತ್ಸವವನ್ನು ಪ್ರತಿ ವರ್ಷ ಜೂನ್‌ನಲ್ಲಿ ಹತ್ತು ದಿನಗಳ ಕಾಲ ನಡೆಸಲಾಗುತ್ತದೆ


Spread the love
Share:

administrator

Leave a Reply

Your email address will not be published. Required fields are marked *