ರಾಹುಲ್ ಗಾಂಧಿ ಆರೋಪಕ್ಕೆ ಮಹದೇವಪುರ ಮನೆ ಮಾಲೀಕರಿಂದ ತಿರುಗೇಟು

ಬೆಂಗಳೂರು: ‘ಮಹದೇವಪುರ ಕ್ಷೇತ್ರದಲ್ಲಿ 1 ಬಿಎಚ್‌ಕೆ ಮನೆಯಲ್ಲಿ 80 ಮಂದಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ’ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಆ ಮನೆ ಮಾಲಿಕ ಜಯರಾಮ್ ರೆಡ್ಡಿ ಪ್ರತಿಕ್ರಿಯಿಸಿ, ತಿರುಗೇಟು ನೀಡಿದ್ದಾರೆ

ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದವರೆಗೆ ವಾಸಿಸುವ ವಲಸೆ ಕಾರ್ಮಿಕರು ತಮ್ಮ ಮನೆಗೆ ಬಾಡಿಗೆಗೆ ಬರುತ್ತಾರೆ.
ಏಜೆಂಟ್ ಮೂಲಕ ಬಾಡಿಗೆ ಒಪ್ಪಂದದ ಆಧಾರದ ಮೇರೆಗೆ ಆ ವಲಸೆ ಕಾರ್ಮಿಕರಿಗೆ ಮತದಾರರ ಗುರುತಿನ ಚೀಟಿ ಪಡೆಯುತ್ತಾರೆ. ಅವರು ಇಲ್ಲಿಂದ ತೆರಳಿದಾಗಲೂ ಈ ವಿಳಾಸದೊಂದಿಗೆ ವೋಟರ್ ಕಾರ್ಡ್‌ಗಳನ್ನು ಬಳಸುತ್ತಾರೆ’.
ಆ ಕಾರ್ಮಿಕರು ಮತ ಚಲಾಯಿಸಲು ಅವುಗಳನ್ನು ಬಳಸುವುದಿಲ್ಲ. ಅವರು ಇಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ, ವಲಸೆ ಕಾರ್ಮಿಕರು ಸಾಮಾನ್ಯವಾಗಿ ವಿಳಾಸದ ಪುರಾವೆಯಾಗಿ ಮತದಾರರ ಕಾರ್ಡ್‌ಗಳನ್ನು ಬಳಸುತ್ತಾರೆ’ ಎಂದು ತಿಲಿಸಿದ್ದಾರೆ.
ತಮ್ಮ ಹಾಗೂ ಬಿಜೆಪಿ ನಡುವಿನ ಸಂಪರ್ಕದ ಬಗ್ಗೆ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಯರಾಮ್ ರೆಡ್ಡಿ, ನಾನು ಕಾಂಗ್ರೆಸ್ ಸದಸ್ಯನಾಗಿದ್ದೇನೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದೇನೆ. ಬಿಜೆಪಿಯೊಂದಿಗೆ ಯಾವುದೇ ರಾಜಕೀಯ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.