Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಭದ್ರಕೋಟೆಯಲ್ಲೇ ಡೆಮಾಕ್ರಟಿಕ್ ಅಭ್ಯರ್ಥಿ ಎಮಿಲಿ ಗ್ರೆಗೊರಿ ಜಯಭೇರಿ

Spread the love

ಫ್ಲೋರಿಡಾ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ನಿವಾಸವಿರುವ ಫ್ಲೋರಿಡಾದ 87ನೇ ಹೌಸ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಎಮಿಲಿ ಗ್ರೆಗೊರಿ ಗೆಲುವು ಸಾಧಿಸಿದ್ದಾರೆ. ಟ್ರಂಪ್ ಅನುಮೋದನೆ ಪಡೆದ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮ್ಯಾಪಲ್ಸ್ ಅವರನ್ನು ಅವರು 2 ಶೇಕಡಾ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
2024ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಟ್ರಂಪ್ ಅವರು ಕಮಲಾ ಹ್ಯಾರಿಸ್ ಗಿಂತ 11 ಶೇಕಡಾ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇತ್ತೀಚಿನ ಫಲಿತಾಂಶ ರಾಜಕೀಯ ವಲಯದಲ್ಲಿ ಗಮನಸೆಳೆಯುತ್ತಿದೆ. ಒಟ್ಟು 33,429 ಮತದಾರರು ಪಾಲ್ಗೊಂಡ ಉಪಚುನಾವಣೆಯಲ್ಲಿ ಈ ತಿರುವು ಕಂಡುಬಂದಿದೆ.

ಹಿಂದಿನ ಹಾಲಿ ಸದಸ್ಯ ಮೈಕ್ ಕರುಸೊ ಅವರನ್ನು ಗವರ್ನರ್ ರಾನ್ ಡಿಸಾಂಟಿಸ್ ಕೌಂಟಿ ನ್ಯಾಯಾಲಯದ ಕ್ಲರ್ಕ್ ಆಗಿ ನೇಮಕ ಮಾಡಿದ ಬಳಿಕ ಅವರು ರಾಜೀನಾಮೆ ನೀಡಿದ್ದರಿಂದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಿತು.
ಜುಪಿಟ‌ರ್ ಪ್ರದೇಶದ ಸಣ್ಣ ಉದ್ಯಮಿಯಾದ ಗ್ರೆಗೊರಿ, ಲೇಕ್ ಕ್ಲಾರ್ಕ್ ಶೋರ್ಸ್ ಪಟ್ಟಣ ಮಂಡಳಿ ಸದಸ್ಯರಾಗಿದ್ದ ಮ್ಯಾಪಲ್ಸ್ ಅವರನ್ನು ಸೋಲಿಸಿದ್ದಾರೆ. ಮುಂಬರುವ ಮಧ್ಯಂತರ ಚುನಾವಣೆಯ ಮುನ್ನ ಹೊಸ ತಲೆಮಾರಿನ ಅಭ್ಯರ್ಥಿಗಳಲ್ಲಿ ಗ್ರೆಗೊರಿ ಅವರನ್ನು ಡೆಮೋಕ್ರಾಟ್ ಗಳು ಪ್ರಮುಖ ಮುಖವಾಗಿ ಪರಿಗಣಿಸುತ್ತಿವೆ.

ರನ್ ಫಾರ್ ಸಮ್ ಥಿಂಗ್ ಸಂಸ್ಥೆಯ ಸಹ-ಸ್ಥಾಪಕಿ ಅಮಂಡಾ ಲಿಟ್‌ಮನ್, ಮತದಾರರು ಬದಲಾವಣೆಯನ್ನು ಬಯಸುತ್ತಿರುವುದು ಸ್ಪಷ್ಟವಾಗಿದೆ. ಸಮುದಾಯಗಳೊಂದಿಗೆ ನೇರ ಸಂಪರ್ಕ ಹೊಂದುವ ನಾಯಕತ್ವಕ್ಕೆ ಬೆಂಬಲ ಹೆಚ್ಚುತ್ತಿದೆ,” ಎಂದು ತಿಳಿಸಿದ್ದಾರೆ.
2024ರ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಮೈಕ್ ಕರುಸೊ ಸುಮಾರು 20 ಶೇಕಡಾ ಅಂತರದಲ್ಲಿ ಗೆದ್ದಿದ್ದರು. ಅದೇ ವೇಳೆ ಟ್ರಂಪ್ ಕೂಡ ಕ್ಷೇತ್ರದಲ್ಲಿ 11 ಶೇಕಡಾ ಅಂತರದಲ್ಲಿ ಮುನ್ನಡೆ ಪಡೆದಿದ್ದರು.
ಇತ್ತೀಚಿನ ಫಲಿತಾಂಶವು ಪಕ್ಷೇತರ ಮತದಾರರ ಮನೋಭಾವದಲ್ಲಿ ಬದಲಾವಣೆ ಉಂಟಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ. ದೇಶದಾದ್ಯಂತದ ಸಮೀಕ್ಷೆಗಳ ಪ್ರಕಾರ, ಪಕ್ಷೇತರ ಮತದಾರರು ಡೆಮೋಕ್ರಾಟ್‌ಗಳತ್ತ ಒಲವು ತೋರುತ್ತಿರುವುದು ಗಮನಾರ್ಹವಾಗಿದೆ.

ಟ್ರಂಪ್ ಅವರ ಕಾರ್ಯಕ್ಷಮತೆಯನ್ನು 36 ಶೇಕಡಾ ಮಂದಿ ಮಾತ್ರ ಒಪ್ಪಿಕೊಂಡಿದ್ದು, 62 ಶೇಕಡಾ ಮಂದಿ ಒಪ್ಪಿಕೊಂಡಿಲ್ಲ ಎಂದು ರಾಯಿಟರ್ಸ್-ಇನ್ಫೋಸ್ ಸಮೀಕ್ಷೆ ತಿಳಿಸಿದೆ. ಚುನಾವಣಾ ದಿನ ಗ್ರೆಗೊರಿ, ಈ ಚುನಾವಣೆಯಲ್ಲಿ ಜನರು ಸ್ಥಳೀಯ ಸಮಸ್ಯೆಗಳು ಮತ್ತು ದಿನನಿತ್ಯದ ಖರ್ಚಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದಾರೆ ಎಂದು ಹೇಳಿದರು.
ಫಲಿತಾಂಶದ ಬಳಿಕ ಪ್ರತಿಕ್ರಿಯಿಸಿದ ಫ್ಲೋರಿಡಾ ಹೌಸ್ ರಿಪಬ್ಲಿಕನ್ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಯಾಮ್ ಗ್ಯಾರಿಸನ್, ಇತರ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿರುವುದನ್ನು ಉಲ್ಲೇಖಿಸಿದರು. ಸ್ಟೇಟ್ ಹೌಸ್ ಹಾಗೂ ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು ಇನ್ನೂ ಬಹುಮತ ಹೊಂದಿದೆ ಎಂದೂ ಹೇಳಿದರು. ನವೆಂಬ‌ರ್ ಚುನಾವಣೆಗೆ ಮುನ್ನ ಪಕ್ಷಕ್ಕೆ ಸುಮಾರು 15 ಲಕ್ಷ ಮತದಾರರ ಮುನ್ನಡೆಯೂ ಇದೆ ಎಂದು ಅವರು ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *