Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೈವೇದ್ಯ ಸೇವಿಸದ ದೇವರಿಗೆ ಬೈದ ಪುಟ್ಟ ಬಾಲಕಿ”

Spread the love

ದೆಹಲಿ: ಗಣೇಶ ಚತುರ್ಥಿ ಹಬ್ಬದ ಆಚರಣೆಗಳು ಮುಗಿದಿರಬಹುದು. ಆದರೆ ಸಾಮಾಜಿಕ ಮಾಧ್ಯಮ (Social media)ವು ಹಬ್ಬದ ವಿಡಿಯೊಗಳಿಂದ ತುಂಬಿ ಹೋಗಿದೆ. ಮಕ್ಕಳು ಮತ್ತು ವಯಸ್ಕರು ಗಣೇಶನನ್ನು ಪೂಜಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯುತ್ತಿವೆ. ಇದೀಗ ವೈರಲ್ ಆಗಿರುವ ಹೃದಯಸ್ಪರ್ಶಿ ವಿಡಿಯೊದಲ್ಲಿ (Viral Video), ನೈವೇದ್ಯ ಸೇವಿಸದಿದ್ದಕ್ಕಾಗಿ ಮಗುವು ದೇವರನ್ನು ಬೈಯುವುದನ್ನು ಕಾಣಬಹುದು. ಗಣೇಶೋತ್ಸವ ಮುಗಿದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಈ ವಿಡಿಯೊ ಆಕರ್ಷಿಸಿದೆ.

ವಿಡಿಯೊದಲ್ಲಿ ಮಗುವು ದೇವರ ವಿಗ್ರಹಗಳಿಗೆ ಆಹಾರವನ್ನು ತಿನ್ನಲು ಹೇಳುತ್ತಾ ಗದರಿಸಿದೆ. ಈ ವೇಳೆ ತಾಯಿ ಮಧ್ಯಪ್ರವೇಶಿಸಿ ತನ್ನ ಮಗಳಿಗೆ ವಿಗ್ರಹಗಳೊಂದಿಗೆ ಹಾಗೆ ವರ್ತಿಸಬೇಡ ಎಂದು ಮೃದುವಾಗಿ ಕೇಳಿಕೊಂಡಿದ್ದಾಳೆ. ದೇವರರೊಂದಿಗೆ ಯಾಕೆ ಹೀಗೆ ಮಾತನಾಡುತ್ತೀಯಾ? ಎಂದು ಅವಳು ಕೇಳುತ್ತಾಳೆ. ಒಳ್ಳೆಯ ನಡತೆಯ ವಿದ್ಯಾರ್ಥಿಯಂತೆ, ಪುಟ್ಟ ಬಾಲಕಿ ತನ್ನ ತಾಯಿಯ ಮಾತುಗಳನ್ನು ಪಾಲಿಸಿದ್ದಾಳೆ.

ದೇವರ ವಿಗ್ರಹಗಳಿಗೆ ಗದರಿಸುತ್ತಿದ್ದ ಪುಟ್ಟ ಪೋರಿ ನಂತರ ನಿಧಾನವಾಗಿ ಮಾತನಾಡುತ್ತಾಳೆ. ಮೃದುವಾಗಿ, ಅನುನಯಿಸುವ ಧ್ವನಿಯಲ್ಲಿ ದೇವತೆಗಳಿಗೆ ಆಹಾರವನ್ನು ಸೇವಿಸಿ ಮಲಗಲು ಹೇಳುತ್ತಾಳೆ. ಚಿಂತೆ ಮಾಡಬೇಡಿ, ನಿಮ್ಮ ಬಳಿ ಟೊಮೊಟೊಗಳಿವೆ ಎಂದಿದ್ದಾಳೆ. ಅಂದರೆ ದೇವರ ಬಳಿ ಟೊಮೆಟೊ ತಿನ್ನುವಂತೆ ಕೇಳಿಕೊಂಡಿದ್ದಾಳೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ಎಲ್ಲ ದೇವರಿಗೆ ಭಯದ ವಾತಾವರಣವಿದೆ ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದರು. ಟೊಮೆಟೊಗಳು ನನಗೆ ತುಂಬಾ ಇಷ್ಟ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಈಗ ಶ್ರೀಕೃಷ್ಣನು ಹೇಗೆ ನಿರಾಕರಿಸಲು ಸಾಧ್ಯ ಎಂದು ಮಗದೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇಷ್ಟು ಹೇಳಿದರೂ ದೇವರು ಇನ್ನೂ ತಿನ್ನದಿದ್ದರೆ, ಅವನಿಗೆ ಹೊಡೆತ ಬೀಳುವುದು ಖಂಡಿತ. ದೇವರೇ, ಒಮ್ಮೆ ಮಗುವಿನ ಮಾತು ಕೇಳಿ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಆಟವಾಡಲು ಗಣೇಶನ ವಿಗ್ರಹವನ್ನು ಕದ್ದ ಮಗು

ಇದೇ ರೀತಿಯ ಮತ್ತೊಂದು ವಿಡಿಯೊ ವೈರಲ್ ಆಗಿದ್ದು, ಪುಟ್ಟ ಮಗುವೊಂದು ಗಣೇಶ ಮೂರ್ತಿಯೊಂದಿಗೆ ಆಟವಾಡಲು ಕದಿಯುತ್ತಿರುವುದು ಕಂಡು ಬಂದಿದೆ. ಅವನ ತಾಯಿ ವಿಗ್ರಹವನ್ನು ಹಿಂತಿರುಗಿಸುವಂತೆ ಕೇಳಿಕೊಂಡರೂ, ಆ ಮಗು ತುಂಟತನದಿಂದ ನಿರಾಕರಿಸಿತು. ಇಂತಹ ವಿಡಿಯೊಗಳು, ಮಕ್ಕಳ ಮುಗ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತವೆ.


Spread the love
Share:

administrator

Leave a Reply

Your email address will not be published. Required fields are marked *