ವಿದ್ಯುತ್ ಶಾಕ್‌ಗೆ ಬಲಿಯಾದ ಯುವಕನ ಶವ ಕೆರೆಯಲ್ಲಿ ಹೂತಿಟ್ಟ ಲೈನ್‌ಮನ್ ಬಂಧನ

ಗುಡಿಬಂಡೆ(ಚಿಕ್ಕಬಳ್ಳಾಪುರ): ತಾಲೂಕಿನಲ್ಲಿ ಪೋಲಂಪಲ್ಲಿ ಗ್ರಾಮದಲ್ಲಿ ವಿದ್ಯುತ್ ಶಾಕ್‌ಗೆ ಬಲಿಯಾದ ಯುವಕನನ್ನು ಯಾರ ಗಮನಕ್ಕೂ ಬಾರದೇ ಕೆರೆಯಲ್ಲಿ ಹೂತಿಟ್ಟ ಪ್ರಕರಣವನ್ನು ಗುಡಿಬಂಡೆ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೈನ್‌ಮನ್ ಚಂದ್ರಕುಮಾರ್ ಎನ್.
ಎಂಬಾತ ಬೀಚಗಾನಹಳ್ಳಿ ಗ್ರಾಮದ ಅನಿಲ್ ಬಿ.ಎ. (25) ಎಂಬುವನನ್ನು ಸೋಮವಾರ ವಿದ್ಯುತ್ ಕಂಬ ಹತ್ತಿಸಿದ್ದನ್ನು. ಈ ವೇಳೆ ಅಚಾನಕ್ ಆಗಿ ಅನಿಲ್ ವಿದ್ಯುತ್ ಶಾಕ್‌ಗೆ ಬಲಿಯಾಗಿದ್ದನು. ಆದರೆ, ಈ ಘಟನೆ ಯಾರ ಗಮನಕ್ಕೂ ಬಾರದಂತೆ ಲೈನ್‌ಮೆನ್ ಚಂದ್ರಕುಮಾರ್ ಮೃತ ಯುವಕನ ಶವವನ್ನು ಸಮೀಪದ ಕೆರೆಯಲ್ಲಿ ಹೂತಿಟ್ಟು ಪರಾರಿಯಾಗಿದ್ದನು.
ಘಟನೆ ಸಂಬಂಧ ಮೃತನ ಅಣ್ಣ ಗಂಗರಾಜು ಬುಧವಾರ ನೀಡಿದ ದೂರನ್ನು ಆಧರಿಸಿ, ತನಿಖೆ ನಡೆಸಿದ ಪೊಲೀಸರು, ಲೈನ್‌ಮನ್ ಚಂದ್ರಕುಮಾರ್‌ನನ್ನು ಬಂಧಿಸಿದ್ದಾರೆ.