Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲೆಬನಾನ್ ದುರಂತ: ತಂದೆಯ ಅಂತ್ಯಕ್ರಿಯೆಯಲ್ಲೇ ಇಸ್ರೇಲ್ ಬಾಂಬ್ ದಾಳಿಗೆ ಬಲಿಯಾದ ಎರಡು ವರ್ಷದ ಮಗು ತಲೀನ್

Spread the love

ಬೈರೂತ್: ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎರಡು ವರ್ಷದ ಮಗುವೊಂದು ಇತ್ತೀಚಿನ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಲೆಬನಾನ್‌ನಲ್ಲಿ ನಡೆದಿದೆ. ಮೃತ ಮಗುವನ್ನು ತಲೀನ್ ಎಂದು ಗುರುತಿಸಲಾಗಿದೆ.
ಕಳೆದ ವಾರ ದಕ್ಷಿಣ ಲೆಬನಾನ್ ನಲ್ಲಿರುವ ತನ್ನ ನಿವಾಸದ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಆಕೆಯ ತಂದೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮತ್ತೆ ನಡೆದ ಇಸ್ರೇಲ್ ದಾಳಿಯಲ್ಲಿ ಎರಡು ವರ್ಷದ ತಲೀನ್ ಹಾಗೂ ಆಕೆಯ ಇನ್ನಿತರ ಸಂಬಂಧಿಕರು ಮೃತಪಟ್ಟಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಟ್ಟ ಮೊದಲ ದಿನವಾದ ಬುಧವಾರ ಕ್ರಿಫಾ ಗ್ರಾಮದಲ್ಲಿನ ತಲೀನ್ ಕುಟುಂಬದ ನಿವಾಸದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಈ ಕದನ ವಿರಾಮ ತಮಗೂ ಅನ್ವಯವಾಗುತ್ತದೆ ಎಂದು ಲೆಬನಾನ್ ಭಾವಿಸಿತ್ತು. ಆದರೆ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನ್‌ನಾದ್ಯಂತ ಮತ್ತೆ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ತಲೀನ್ ಕುಟುಂಬದಲ್ಲೂ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ತಲೀನ್‌ನ ಸಹೋದರಿಯಾದ ಏಳು ವರ್ಷದ ಅಲೈನ್ ಸಯೀದ್ ಸ್ವಲ್ಪದರಲ್ಲಿ ಪಾರಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.
“ಅವರು ಇದು ಕದನ ವಿರಾಮ ಎಂದು ಹೇಳಿದರು. ಎಲ್ಲರಂತೆ ನಾವೂ ಕೂಡ ಗ್ರಾಮಕ್ಕೆ ತೆರಳಿದವು. ನಾವು ಪ್ರಾರ್ಥನೆ ಮಾಡಲು ಕ್ಯಾಸ್ಕೆಟ್ ಗೆ ತೆರಳಿದೆವು. ಮನೆಯತ್ತ ಹೆಜ್ಜೆ ಹಾಕಿದೆವು. ದಿಢೀರನೆ ನಮ್ಮ ತಲೆಯ ಮೇಲೆಯೇ ಚಂಡಮಾರುತವೊಂದು ಅಪ್ಪಳಿಸಿದಂತಾಯಿತು’ ಎಂದು ಈ ದಾಳಿಯಲ್ಲಿ ಬದುಕುಳಿದ ತಲೀನ್ ನ ತಾತ ನಾಸರ್ ಸಯೀದ್ ಹೇಳಿದ್ದಾರೆ.
“ಮಾನವ ಹಕ್ಕುಗಳು ಎಲ್ಲಿವೆ? ಇಸ್ರೇಲ್‌ನಲ್ಲಿ ಒಂದು ಮಗು ಗಾಯಗೊಂಡರೆ ಇಡೀ ಜಗತ್ತೇ ಎದ್ದು ನಿಲ್ಲುತ್ತದೆ. ನಾವೂ ಜನರಲ್ಲವೆ? ನಾವೂ ಮನುಷ್ಯರಲ್ಲವೆ? ನಾವು ಕೂಡ ಅವರಂತೆಯೇ!” ಎಂದು ನಾಸರ್ ಸಯೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ದಕ್ಷಿಣ ಬಂದರು ನಗರವಾದ ಟೈರ್‌ನಿಂದ ಹಸಿರು ಬಟ್ಟೆಯಲ್ಲಿ ಸುತ್ತಿದ್ದ ಮೃತದೇಹಗಳನ್ನು ಸಂಗ್ರಹಿಸಲು ಅವರು ತಮ್ಮ ಸಂಬಂಧಿಕರ ಜೊತೆಗೂಡಿದ್ದರು. ಈ ಮೃತದೇಹಗಳ ಪೈಕಿ ಉಳಿದವರಿಗಿಂತ ಪುಟ್ಟ ಗಾತ್ರದಲ್ಲಿದ್ದ ಅವರ ಮೊಮ್ಮಗಳು ತಲೀನ್ ನ ಮೃತದೇಹವೂ ಇತ್ತು. ಆಕೆಗೆ ಇನ್ನೂ ಎರಡು ವರ್ಷ ಕೂಡ ಆಗಿರಲಿಲ್ಲವೆನ್ನಲಾಗಿದೆ.
ಹಿಝುಲ್ಲಾ ಹಾಗೂ ಇಸ್ರೇಲ್ ನಡುವೆ ಕೊನೆಯದಾಗಿ ನಡೆದಿದ್ದ 2024ರ ಯುದ್ಧದ ಸಂದರ್ಭದಲ್ಲಿ ತಲೀನ್ ಜನಿಸಿದ್ದಳು. ‘ಆಕೆ ಯುದ್ಧದ ವೇಳೆ ಜನಿಸಿದಳು. ಯುದ್ಧದ ವೇಳೆಯೇ ಮೃತಪಟ್ಟಳು” ಎಂದು ತಲೀನ್ ನ ತಾಯಿ ಘಿನ್ಸಾರ ತಂದೆ ಮುಹಮ್ಮದ್ ನುಲ್ ಹೇಳಿದ್ದಾರೆ.
ತಲೀನ್‌ನ ಈ ಅಕಾಲಿಕ ಮೃತ್ಯುವಿನ ಆಘಾತದಿಂದ ಆಕೆಯ ತಾಯಿ ಫಿನ್ಹಾ ಇನ್ನೂ ಚೇತರಿಸಿಕೊಂಡಿಲ್ಲ.


Spread the love
Share:

administrator

Leave a Reply

Your email address will not be published. Required fields are marked *