Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್: ಕುವೈತ್‌ನಲ್ಲಿ ಈದುಲ್ ಫಿತರ್ ಸಾಮೂಹಿಕ ಪ್ರಾರ್ಥನೆ ರದ್ದು”

Spread the love

ಕುವೈತ್‌ : ಪ್ರಸ್ತುತ ಉದ್ವಿಗ್ನ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕುವೈತ್ ನ ಗ್ಯಾಂಡ್ ಮಸೀದಿಯಲ್ಲಿ ಈದುಲ್ ಫಿತ್ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ. “ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈದುಲ್ ಫಿತ್ ಪ್ರಾರ್ಥನೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ” ಎಂದು ಮಸೀದಿ ಆಡಳಿತ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದೆ ಎಂದು Aljazeera ವರದಿ ಮಾಡಿದೆ.


ಇದಕ್ಕೂ ಮೊದಲು, ಕುವೈತ್ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ, ದೇಶದ ಚಂದ್ರ ದರ್ಶನ ಸಮಿತಿಯು ಶುಕ್ರವಾರವನ್ನು ಶವ್ವಾಲ್ ತಿಂಗಳ ಮೊದಲ ದಿನವೆಂದು ಅಧಿಕೃತವಾಗಿ ದೃಢಪಡಿಸಿದೆ.
ಪವಿತ್ರ ರಮಝಾನ್ ತಿಂಗಳ ಅಂತ್ಯವನ್ನು ಸೂಚಿಸುವ ಈದುಲ್ ಫಿತ್ ವಿಶ್ವದಾದ್ಯಂತ ಭಕ್ತಿಭಾವದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಆದರೆ, ಇರಾನ್ ಮೇಲೆ ನಡೆಯುತ್ತಿರುವ ಯುಎಸ್-ಇಸ್ರೇಲ್ ಯುದ್ಧ ಹಾಗೂ ಅದರ ಪರಿಣಾಮವಾಗಿ ಗಲ್ಫ್ ಪ್ರದೇಶ ಮತ್ತು ಅದರಾಚೆಗೆ ವಿಸ್ತರಿಸುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಈದುಲ್ ಫಿತ್ರೆ ಆಚರಣೆಗಳ ಮೇಲೆ ಯುದ್ಧದ ಕರಿನೆರಳು ಆವರಿಸಿದೆ


Spread the love
Share:

administrator

Leave a Reply

Your email address will not be published. Required fields are marked *