ಕೇರಳದ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ: ಮನುಷ್ಯರ ಧ್ವನಿಯನ್ನು ಪೇಪರ್ ಮೇಲೆ ಬರೆಯುವ AI ಯಂತ್ರ ಅಭಿವೃದ್ಧಿ

ಕೇರಳ : ಜಗತ್ತಲ್ಲಿ ಈಗ ಹೇಳಿ ಕೇಳಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (artificial intelligence) ಜಮಾನ. ಎಲ್ಲಾ ಕ್ಷೇತಗಳಲ್ಲೂ ಎಐ ತಂತ್ರಜ್ಞಾನ ಅಳವಡಿಕೆ ಮಾಡಲಾಗ್ತಿದ್ದು, ಇದೀಗ ಮನುಷ್ಯರು ಮಾತಾಡಿದ್ದನ್ನು “ಬರೆಯುವ” ಎಐ ಯಂತ್ರವನ್ನು ಕೇರಳ(Kerala) ವಿದ್ಯಾರ್ಥಿಗಳು (Students) ಅನ್ವೇಷಣೆ ಮಾಡಿದ್ದಾರೆ.

ವ್ಯಕ್ತಿಗಳು ನೀಡುವ ವಾಯ್ಸ್ ಆಧರಿಸಿ ಎಐ ಯಂತ್ರ ಇದೀಗ ಬರೆಯುವ ಸಾಮರ್ಥ್ಯ ಅಭಿವೃದ್ಧಿ ಪಡಿಸಲಾಗಿದ್ದು, ಹೊಸ ಚಮತ್ಕಾರ ಇದೀಗ ಎಲ್ಲೆಡೆ ವ್ಯಾಪಕವಾಗಿ ಸದ್ದು ಮಾಡುತ್ತಿದೆ.
ಆಲಪ್ಪಿಯಲ್ಲಿ ನಡೆದ ಕೇರಳಂ ಎಕ್ಸ್ಪೋ ದಲ್ಲಿ ಇ and ಸಿ ವಿಭಾಗದ ಸ್ಟೂಡೆಂಟ್ಸ್ ಹೊಸ ಯಂತ್ರವನ್ನು ಪರಿಚಯಿಸಿದ್ದು, ವಾಯ್ಸ್ ನಲ್ಲಿ ಹೇಳಿದ ಟೆಕ್ಸ್ಟ್ ಅನ್ನು ಯಥಾವತ್ತಾಗಿ ಅಭಿವೃದ್ಧಿ ಪಡಿಸಿರುವ ಮೆಷಿನ್ ಹಾಗೆಯೇ ತಪ್ಪಿಲ್ಲದೇ ಬರೆದುಕೊಂಡಿದೆ. ಭವಿಷ್ಯದ ದೃಷ್ಟಿಯಿಂದ ಟೈಪಿಂಗ್ ಅನ್ನು ಮತ್ತಷ್ಟು ಸುಲಭ ಮಾಡಲು ಇ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಜಯ್ ಎಂಬ ವ್ಯಕ್ತಿ ಎಐ ಮೆಷಿನ್ ಬರೆಯುತ್ತಿರೋ ವಿಡಿಯೋ ಶೇರ್ ಮಾಡಿದ್ದು, “Department of Electronics” ಎಂಬ ವಾಕ್ಯವನ್ನು ಅಜಯ್ ಉಚ್ಚಾರಣೆ ಮಾಡಿದ ಬಳಿಕ ಮೆಷಿನ್ ಅದನ್ನು ತಪ್ಪಿಲ್ಲದೇ A4 ಸೈಜ್ ಶೀಟ್ನಲ್ಲಿ ಪೆನ್ ಮೂಲಕ ಬರೆದುಕೊಂಡಿದೆ.
Raspberry Pi, Arduino, and Python ತಂತ್ರಾoಶ ಉಪಯೋಗಿಸಿ ಈ ಸಾಧನವನ್ನು ರೆಡಿ ಮಾಡಲಾಗಿದ್ದು, ವಾಯ್ಸ್ ಟು ಪೆನ್ ಕನ್ವರ್ಶನ್ ಪ್ರಯೋಗ ಯಶಸ್ವಿಯಾಗಿದೆ.
ಅಜಯ್ ನೇತೃತ್ವದ ವಿದ್ಯಾರ್ಥಿಗಳ ತಂಡದಲ್ಲಿ ಅಪರ್ಣ ಹರಿ, ಆಕಾಶ್, ರೂಬಕ್ ಹರಿ ನಾಯರ್ ಈ ಪ್ರಾಜೆಕ್ಟ್ ನಲ್ಲಿ ಭಾಗಿಯಾಗಿದ್ದು, ಅವಿರತ ಶ್ರಮದಿಂದ ಎಐ ಮೆಷಿನ್ ಅಭಿವೃದ್ಧಿಯಾಗಿದೆ.
ಪ್ರಮುಖವಾಗಿ ದೃಷ್ಟಿಹೀನ ಹಾಗೂ ಅಂಗವಿಕಲರ ಸಹಾಯಕ್ಕೆ ಈ ತಂತ್ರಜ್ಞಾನ ಬಳಸಿ ವಾಯ್ಸ್ ಟು ಪೆನ್ ಸಿಸ್ಟಮ್ ಮೆಷಿನ್ ತಯಾರಿ ಮಾಡಲಾಗಿದೆ. ಮುಂಬರುವ ದಿನದಲ್ಲಿ ಸುಧಾರಣಾ ಕ್ರಮಗಳನ್ನು ಪರಿಚಯ ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಬಗ್ಗೆಯೂ ತಂಡ ಗುರಿ ಹೊಂದಿದೆ.
ಈಗಾಳಗಲೇ ಮೊಬೈಲ್‌ನಲ್ಲಿ ನಾವು ಹೇಳಿದ್ದನ್ನು ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನ ಬಂದಾಗಿದೆ. ಕೀಬೋರ್ಡ್‌ನಲ್ಲಿಯೇ ಈ ಟೆಕ್ನಾಲಜಿ ಬಂದು ಹಲವು ವರ್ಷಗಳೇ ಕಳೆದಿದೆ. ಆದರೆ ಇದೀಗ ವಿದ್ಯಾರ್ಥಿಗಳು ಪೇಪರ್ ಮೇಲೆ ನಾವು ಮಾತಾಡಿದ್ದನ್ನು ಬರೆಯುವ ಯಂತ್ರವನ್ನು ಅನ್ವೇಷಿಸಿದ್ದು, ತಂತ್ರಜ್ಞಾನ ಮತ್ತೊಂದು ರೂಪ ಪಡೆದಿದೆ
ಮಾನವ ನಿರ್ಮಿತ ತಂತ್ರಜ್ಞಾನವು ಮಾನವನೇ ಮಾಡುವ ಕೆಲಸಗಳನ್ನು ಮಾನವನಂತೆಯೇ ಮಾಡಲಾರಂಭಿಸಿದ್ದು, ಒಂದು ಕಡೆ ಇದು ವಿಜ್ಞಾನದ ಬೆಳವಣಿಗೆ ಎಂದು ಸಂಭ್ರಮ ಪಡೆಬೇಕಾದ ವಿಷಯವಾದರೂ ಮುಂದೊಂದು ದಿನ ಇದು ಮನುಷ್ಯನ ಕೆಲಸಗಳನ್ನು ಕಸಿದುಕೊಳ್ಳುತ್ತಾ ಎಂಬ ಆತಂಕವೂ ಇದೆ.
