ಕೇರಳ ದೇಶದ ಮೊದಲ ಡಿಜಿಟಲ್ ಸಾಕ್ಷರತಾ ರಾಜ್ಯ: 22 ಲಕ್ಷ ಹಿರಿಯ ನಾಗರಿಕರಿಗೆ ತರಬೇತಿ

ತಿರುವನಂತಪುರ: ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ಮತ್ತೊಂದು ಸಾಕ್ಷರತೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಹಿರಿಯ ನಾಗರಿಕರಿಗೆ ಮೊಬೈಲ್ ಮತ್ತು ಆನ್ಲೈನ್ ಜ್ಞಾನವನ್ನು ಕಲಿಸಲು ಅಲ್ಲಿನ ಸರ್ಕಾರ ಡಿಜಿಟಲ್ ಸಾಕ್ಷರತೆ ಅಭಿಯಾನವನ್ನು ನಡೆಸಿದೆ.

ಈ ಮೂಲಕ ದೇಶದ ಮೊದಲ ಡಿಜಿಟಲ್ ಸಾಕ್ಷರತೆಯ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದರಿಂದಾಗಿ 22 ಲಕ್ಷ ಹಿರಿಯ ನಾಗರಿಕರು ಡಿಜಿಟಲ್ ಜ್ಞಾನವನ್ನು ಕರಗತಗೊಳಿಸಿಕೊಂಡಿದ್ದಾರೆ. ಇದೇ ರೀತಿ 104 ವರ್ಷದ ಎಂ.ಎ.ಅಬ್ದುಲ್ಲಾ ಮೌಲ್ವಿ ಎಂಬುವರು ಈಗ ಸ್ವಯಂಪ್ರೇರಿತರಾಗಿ ಯೂಟ್ಯೂಬ್ ವೀಕ್ಷಣೆ, ವಿಡಿಯೋ ಕಾಲ್ ಮಾಡುವುದನ್ನು ಸಹ ಕಲಿತಿದ್ದಾರೆ. 2022ರಲ್ಲಿ ಜಾರಿಗೆ ತಂದ ಈ ಯೋಜನೆಯಲ್ಲಿ ವಿದ್ಯಾರ್ಥಿಗಳು, ಸ್ವಯಂಸೇವಕರು ಮತ್ತು ಸರ್ಕಾರಿ ಅಧಿಕಾರಿಗಳ ಒಗ್ಗಟ್ಟಿನ ಕೆಲಸದಿಂದಾಗಿ ಈ ಕೀರ್ತಿ ಸಾಕಾರವಾಗಿದೆ ಎಂದು ಅಲ್ಲಿನ ಸ್ಥಳೀಯ ಸ್ವ- ಸರ್ಕಾರ ಇಲಾಖೆ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ.
ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ಮಾನಸಿಕ ಒತ್ತಡ
ಈಗಿನ ಅಧುನಿಕ ಬದುಕಿನಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ಬಹುತೇಕ ಸಮಯವನ್ನ ಕಂಪ್ಯೂಟರ್, ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತೇವೆ.ಪ್ರತಿನಿತ್ಯ ಕಡಿಮೆ ಎಂದರೂ ಹತ್ತರಿಂದ ಹನ್ನೇರಡು ಗಂಟೆಗಳ ಕಾಲ ಕಂಪ್ಯೂಟರ್, ಮೊಬೈಲ್ ಮುಂದೆ ಕೂತಿರುತ್ತೇವೆ. ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ಮಾನಸಿಕ ಒತ್ತಡ. ಒಣ ಕಣ್ಣು ಸಮಸ್ಯೆ ಉಂಟಾಗುತ್ತಿದೆ.ಇನ್ನೂ ಹೆಚ್ಚು ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿರುವ ಈ ಯುಗದಲ್ಲಿ “ಡಿಜಿಟಲ್ ತಣಿವು” (Digital Fatigue) ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಕೇವಲ ಮಾನಸಿಕವಾಗಿ ಅಲ್ಲ ಕಣ್ಣುಗಳ ಮೇಲೆ ಸಹ ಪ್ರಭಾವ ಬೀರುತ್ತಿದೆ. ಡಿಜಿಟಲ್ ದಣಿವಿನಿಂದ ಉಂಟಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಎಂದರೆ “ಒಣ ಕಣ್ಣು” (Dry Eye Syndrome).
ಕಂಪ್ಯೂಟರ್, ಮೊಬೈಲ್, ಟಿವಿ ಮುಂತಾದ ಡಿಜಿಟಲ್ ಪರಿಕರಗಳನ್ನು ನಿರಂತರವಾಗಿ ಬಳಸುವಾಗ ನಾವು ಅಪಾರ ಸಮಯ ಕಂಪ್ಯೂಟರ್,ಮೊಬೈಲ್ ಮೇಲೆ ದೃಷ್ಟಿ ನೆಟ್ಟಿರುತ್ತೇವೆ. ಇದರ ಕಾರಣವಾಗಿ ಕಣ್ಣು ಮಿಟುಕಿಸುವ ಕ್ರಿಯೆ (blinking) ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ, ಮನುಷ್ಯನೊಬ್ಬನು ನಿಮಿಷಕ್ಕೆ ಸುಮಾರು 15-20 ಬಾರಿ ಕಣ್ಣು ಮಿಟುಕಿಸುತ್ತಾನೆ. ಆದರೆ, ಡಿಜಿಟಲ್ ಪರಿಕರಗಳನ್ನ ಬಳಸುವಾಗ ಈ ಸಂಖ್ಯೆಯು ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಇದರಿಂದ ಕಣ್ಣುಗಳ ಮೇಲಿನ ತೇವಾಂಶವನ್ನು ಕಾಯ್ದುಕೊಳ್ಳುವ “ಕಣ್ಣಿನ ನೀರಿನ ಪದರ” ಸುಲಭವಾಗಿ ಒಣಗುತ್ತದೆ. ಇದಕ್ಕೆ ಜೊತೆಗೆ, ನಿರಂತರವಾಗಿ ಸ್ಕ್ರೀನ್ ಬಳಕೆಯಿಂದ ಕಣ್ಣುಗಳಲ್ಲಿ ಒತ್ತಡ, ಕೆಂಪುತನ,ಮಬ್ಬು ಮತ್ತು ಕೆಲವೊಮ್ಮೆ ಕಣ್ಣು ನೀರಾಡುವಂತಹ ಲಕ್ಷಣಗಳೂ ಕಾಣಿಸಬಹುದು.
ಕೆಲವೊಮ್ಮೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಹ ಅಡಚಣೆ ಉಂಟಾಗಬಹುದು.ಇಂತಹ ಪರಿಸ್ಥಿತಿಗಳನ್ನು ತಡೆಗಟ್ಟಲು, ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣುಗಳನ್ನು 20 ಸೆಕೆಂಡುಗಳ ಕಾಲ 20 ಅಡಿಗಳ ದೂರದ ವಸ್ತುವಿನತ್ತ ನೋಡಿ ವಿಶ್ರಾಂತಿ ನೀಡುವುದು (20-20-20 ನಿಯಮ), ಕಣ್ಣು ಹೆಚ್ಚು ಹೈಡ್ರೇಟೆಡ್ ಆಗಿರುವುದು ಅವಶ್ಯಕ. ಹೆಚ್ಚು ಡಿಜಿಟಲ್ ಉಪಕರಣವನ್ನ ಬಳಸದೇ ಇರುವುದು ಒಣಕಣ್ಣನ್ನು ತಡೆಯುವುದು ನಮ್ಮ ದೃಷ್ಟಿ ಆರೋಗ್ಯವನ್ನು ಕಾಯ್ದುಕೊಳ್ಳಲು ಅತ್ಯಂತ ಮುಖ್ಯವಾದ ಹೆಜ್ಜೆಯಾಗಿದೆ.
