Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಸರಗೋಡು: ಮಗನ ಸಾವಿನ ದುಃಖ ತಾಳಲಾರದೆ ದಂಪತಿ ಆತ್ಮಹ*ತ್ಯೆ

Spread the love

ಕಾಸರಗೋಡು: ಪುತ್ರನ ಸಾವಿನ ದುಃಖವನ್ನು ತಾಳಲಾರದೆ ದಂಪತಿಗಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇಲ್ಪರಂಬ ಠಾಣಾ ವ್ಯಾಪ್ತಿಯ ಪೊಯಿನಾಚಿಯಲ್ಲಿ ನಡೆದಿದೆ.
ಪೊಯಿನಾಚಿ ಪರಂಬದ ವೇಣುಗೋಪಾಲನ್ ನಾಯರ್ (55) ಮತ್ತು ಅವರ ಪತ್ನಿ ಸ್ಮಿತಾ (45) ಮೃತಪಟ್ಟವರು.
ಇವರ ಏಕೈಕ ಪುತ್ರ ಎಂ. ಶಿವಾನಂದನ್ (19) ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಕಳೆದ ಡಿಸೆಂಬರ್ 29ರಂದು ಬೇಕಲ್ ಉತ್ಸವದ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮಗನ ಸಾವಿನ ಬಳಿಕ ದಂಪತಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ 9 ಗಂಟೆಯಾದರೂ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನೆರೆಮನೆಯವರು ಅನುಮಾನಗೊಂಡು ಪರಿಶೀಲಿಸಿದಾಗ, ಕೋಣೆಯೊಳಗೆ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ವೇಣುಗೋಪಾಲನ್ ನಾಯರ್ ನಂತರ ಪೊಯಿನಾಚಿಯಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *