ಸೆಲ್ಫಿಗಾಗಿ ಬಂದ ವ್ಯಕ್ತಿಯ ಮೇಲೆ ಜಯಾ ಬಚ್ಚನ್ ಆಕ್ರೋಶ: ವಿಡಿಯೋ ವೈರಲ್

ಮಂಗಳವಾರ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಟಿ-ರಾಜಕಾರಣಿ ಜಯಾ ಬಚ್ಚನ್ ಅವರೊಂದಿಗೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಅವರು ತಾಳ್ಮೆ ಕಳೆದುಕೊಂಡರು.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ಈ ಕ್ಲಿಪ್ನಲ್ಲಿ, ಸಮಾಜವಾದಿ ಪಕ್ಷದ ಸಂಸದೆ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ತಳ್ಳುತ್ತಿರುವುದು ಕಂಡುಬಂದಿದೆ. ಅವರು, “ಕ್ಯಾ ಕರ್ ರಹೇ ಹೈ ಆಪ್ (ನೀವು ಏನು ಮಾಡುತ್ತಿದ್ದೀರಿ?) ಇದೇನಿದು?” ಎಂದು ಕೇಳಿದರು. ಬಚ್ಚನ್ ಅವರ ಸಹ ಸಂಸದೆ ಮತ್ತು ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಸಮಾಜವಾದಿ ಸಂಸದೆಯ ಬಳಿ ನಿಂತಿರುವುದು ಕಂಡುಬಂದಿದೆ. ಬಚ್ಚನ್ ಆ ವ್ಯಕ್ತಿಯನ್ನು ತಳ್ಳಿದ ತಕ್ಷಣ, ಚತುರ್ವೇದಿ ತಿರುಗಿ ಸುತ್ತಲೂ ನೋಡಿ ನಂತರ ಕ್ಲಬ್ ಕಡೆಗೆ ನಡೆಯಲು ಮುಂದಾದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ, ನೆಟಿಜನ್ಗಳು ಜಯಾ ಬಚ್ಚನ್ ಅವರ ವರ್ತನೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿ ಅದನ್ನು ಖಂಡಿಸಿದರು. ಜನರು ಅಂತಹ ವ್ಯಕ್ತಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚರಾಗಲು ಕಾರಣವೇನು” ಎಂದು ಬಳಕೆದಾರರಲ್ಲಿ ಒಬ್ಬರು ಬರೆದಿದ್ದಾರೆ.