ಕತಾರ್ನಲ್ಲಿ ಹಮಾಸ್ ನಾಯಕರಿದ್ದ ಕಟ್ಟಡದ ಮೇಲೆ ಇಸ್ರೇಲ್ ವಾಯುದಾಳಿ

ದೋಹಾ: ಕತಾರ್ ನಲ್ಲಿ ಆರಾಮಾಗಿ ಜೀವನ ನಡೆಸುತ್ತಿರುವ ಹಮಾಸ್ ನಾಯಕರ ವಿರುದ್ದ ಇಸ್ರೇಲ್ ತಿರುಗಿ ಬಿದ್ದಿದ್ದು, ಸಭೆ ನಡೆಸುತ್ತಿರುವ ಮಾಹಿತಿ ಬೆನ್ನಲ್ಲೇ ಹಮಾಸ್ ನಾಯಕರಿದ್ದ ವಸತಿ ಕಟ್ಟಡಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದೆ.

ಈ ದಾಳಿಯನ್ನು ಇಸ್ರೇಲ್ ಮಿಲಿಟರಿ ಪಡೆ IDF ಖಚಿತಪಡಿಸಿದೆ. ಹಮಾಸ್ ಉಗ್ರ ಸಂಘಟನೆಯ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು IDF ಮತ್ತು ISA (ಭದ್ರತಾ ಏಜೆನ್ಸಿ) ಈ ದಾಳಿ ನಡೆಸಿರುವುದಾಗಿ ಹೇಳಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾಪವನ್ನು ಚರ್ಚಿಸುತ್ತಿರುವಾಗ ಪ್ಯಾಲೆಸ್ತೀನ್ ಗುಂಪಿನ ಸಂಧಾನಕಾರರು ಇಸ್ರೇಲ್ ದಾಳಿಗೆ ಗುರಿಯಾಗಿದ್ದಾರೆ ಎಂದು ಹಿರಿಯ ಹಮಾಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
ಇನ್ನು ಇಸ್ರೇಲ್ ನ ಈ ದಾಳಿಯನ್ನು ಕತಾರ್ ಖಂಡಿಸಿದ್ದು, ಹೇಡಿತನ ದು ಕತಾರ್ ಟೀಕಿಸಿದೆ. ಇಸ್ರೇಲ್ ನ ಈ ರೀತಿಯ ವರ್ತನೆ ಮತ್ತು ಪ್ರಾದೇಶಿಕ ಭದ್ರತೆಗೆ ಭದ್ರತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.