Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೈರೂತ್ ಮೇಲೆ ಇಸ್ರೇಲ್ ವಾಯು ದಾಳಿ; ಏಳು ಮಂದಿ ಸಾವು, ಹಲವರಿಗೆ ಗಾಯ

Spread the love

ಲೆಬನಾನ್: ದಕ್ಷಿಣ ಬೈರೂತ್ ಮಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಜ್ಞಾಹ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಐದು ಮಂದಿ ಮೃತಪಟ್ಟು 21 ಮಂದಿ ಗಾಯಗೊಂಡಿದ್ದರೆ, ಖಲ್ಲೇಹ್ ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.
ದಕ್ಷಿಣ ಲೆಬನಾನ್ ನಲ್ಲಿ ಹಿಜ್ಜುಲ್ಲಾ ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಮೃತಪಟ್ಟಿದ್ದು, ಇರಾನ್ ಸರ್ಕಾರವನ್ನು ಬೆಂಬಲಿಸಿ ಇರಾನ್ ನ ಕರಾಜ್ ನಲ್ಲಿ ಸಾವಿರಾರು ಮಂದಿ ರ್ಯಾಲಿ ನಡೆಸಿದರು.

ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ಮುಂದುವರಿಸಿರುವ ದಾಳಿಯಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೂವರು ಶಾಂತಿಪಾಲಕರು ಮೃತಪಟ್ಟಿದ್ದಾರೆ. ಫೆಬ್ರುವರಿ 28ರಿಂದೀಚೆಗೆ ನಡೆಯುತ್ತಿರುವ ಸಂಘರ್ಷದಲ್ಲಿ ಜೀವ ಕಳೆದುಕೊಂಡ ನಾಗರಿಕರ ಸಂಖ್ಯೆ 1240ನ್ನು ತಲುಪಿದೆ.
ಏತನ್ಮಧ್ಯೆ ಇರಾನ್ ಸ್ಪೀಕರ್ ಜತೆ ಸಂಧಾನ ಮಾತುಕತೆ ನಡೆಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ನೀಡಿದ್ದು, ಇರಾನ್ ಇಂಥ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿದೆ.
ಇರಾನ್ ವಿರುದ್ಧದ ಕಾರ್ಯಾಚರಣೆ ಅತಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ವಾಯುದಾಳಿ ಮುಂದುವರಿದಿರುವ ನಡುವೆಯೇ ಎರಡು ಮೂರು ವಾರಗಳ ಒಳಗೆ ಕಾರ್ಯಾಚರಣೆ ಮುಕ್ತಾಯವಾಗಲಿದೆ ಎಂಬ ಸುಳಿವು ನೀಡಿದ್ದಾರೆ. ಶ್ವೇತಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “ಇರಾನ್ ಪತನವಾಗುತ್ತಿದೆ. ನಮ್ಮ ಪಡೆಗಳು ತಮ್ಮ ಕಾರ್ಯವನ್ನು ಮುಗಿಸುವ ಹಂತದಲ್ಲಿದ್ದಾರೆ. ಬಹುಶಃ ಎರಡು ವಾರಗಳಲ್ಲಿ ಅಥವಾ ಮತ್ತೆ ಕೆಲ ದಿನಗಳಲ್ಲಿ ಪಡೆಗಳನ್ನು ವಾಪಾಸು ಕರೆಸಿಕೊಳ್ಳಬಹುದು” ಎಂದು ಸ್ಪಷ್ಟಪಡಿಸಿದರು.


Spread the love
Share:

administrator

Leave a Reply

Your email address will not be published. Required fields are marked *