ಇರಾನ್‌ನಿಂದ 10 ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಮುಕ್ತ ಅವಕಾಶ: ಟ್ರಂಪ್ ಅಭಿನಂದನೆ

ವಾಷಿಂಗ್ಟನ್/ಟೆಹ್ರಾನ್: ಯುದ್ಧ ಅಂತ್ಯಗೊಳಿಸುವ ಮಾತುಕತೆಗಳ ಬಗ್ಗೆ ತನ್ನ ಗಂಭೀರತೆಯನ್ನು ತೋರಿಸಲು ಇರಾನ್ 10 ತೈಲ ಟ್ಯಾಂಕರ್ ಗಳನ್ನು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಕ್ರಮವನ್ನು ಟ್ರಂಪ್ ಉಡುಗೊರೆ’ ಎಂದು ವರ್ಣಿಸಿದ್ದಾರೆ.
ಈ ವಾರದ ಆರಂಭದಲ್ಲಿ ಈ ಕುರಿತು ನೀಡಿದ್ದ ನಿಗೂಢ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಇರಾನ್ ಮೊದಲಿಗೆ ಎಂಟು “ದೊಡ್ಡ ತೈಲ ಹಡಗುಗಳನ್ನು” ಸಾಗಲು ಅವಕಾಶ ನೀಡಿತು ಎಂದು ಹೇಳಿದರು. ಬಳಿಕ ಇನ್ನೂ ಎರಡು ಹಡಗುಗಳಿಗೆ ಅನುಮತಿ ನೀಡಲಾಗಿದೆ ಎಂದು ವಿವರಿಸಿದರು.
ಈ ಟ್ಯಾಂಕರ್ ಗಳಲ್ಲಿ ಪಾಕಿಸ್ತಾನದ ಧ್ವಜ ಹೊಂದಿರುವ ಕೆಲವು ಹಡಗುಗಳೂ ಸೇರಿವೆ ಎಂದು ಟ್ರಂಪ್ ತಿಳಿಸಿದ್ದಾರೆ.
