Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಪಿಎಲ್ 2026: 15ರ ಹರೆಯದ ವೈಭವ್ ಸೂರ್ಯವಂಶಿ ಅಟ್ಟಹಾಸ; ಕ್ರಿಸ್ ಗೇಲ್ ದಾಖಲೆ ಧೂಳೀಪಟ ಮಾಡಿ ಆರೆಂಜ್ ಕ್ಯಾಪ್ ವಶ!

Spread the love

ಅಹ್ಮದಾಬಾದ್‌: ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಫೈನಲ್ ತಲುಪದಿದ್ದರೂ, ತಂಡದ ಯುವಪ್ರತಿಭೆ 15 ವರ್ಷದ ವೈಭವ್‌ ಸೂರ್ಯವಂಶಿ ಪ್ರಸಕ್ತ ಸಾಲಿನಲ್ಲಿ ಅತಿಹೆಚ್ಚು ರನ್ ಗಳಿಸಿದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಸಹಿತ ಐದು ವೈಯಕ್ತಿಕ ಗೌರವಗಳಿಗೆ ಪಾತ್ರರಾದರು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳಿಂದ 776 ರನ್ ಕಲೆಹಾಕಿರುವ ಅವರು, 750ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರ ಎನಿಸಿದರು.
ಇದರ ಜತೆಗೆ ಸೀಸನ್ ನ ಉದಯೋನ್ಮುಖ ಆಟಗಾರ, ಸೂಪರ್ ಸ್ಟೈಕರ್ ಆಫ್ ದ ಸೀಸನ್, ಸೂಪರ್ ಸಿಕ್ಸಸ್ ಆಫ್ ದ ಸೀಸನ್ ಹಾಗೂ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಗಳನ್ನು ಬಾಚಿಕೊಂಡರು.

ಫೈನಲ್ ತಲುಪಿದ್ದ ಜಿಟಿ ತಂಡದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್, ಭರವಸೆಯ ಯುವ ಆಟಗಾರನಿಗೆ ನಿಕಟ ಪೈಪೋಟಿ ನೀಡಿದರೂ, 17 ಇನಿಂಗ್ಸ್ ಗಳಿಂದ ಕ್ರಮವಾಗಿ 732 ಹಾಗೂ 722 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. 15ನೇ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸೂರ್ಯವಂಶಿ ಈ ಸಾಧನೆ ಮಾಡಿದ ಅತಿಕಿರಿಯ ಆಟಗಾರ ಎನಿಸಿದರು. ಇದಕ್ಕೂ ಮುನ್ನ ಸಾಯಿ ಸುದರ್ಶನ್ (23) ಈ ದಾಖಲೆ ಹೊಂದಿದ್ದರು.
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರನಾಗಿರುವ ಸೂರ್ಯವಂಶಿ ಈ ವರ್ಷದ ಐಪಿಎಲ್ ನಲ್ಲಿ 237.31 ಸ್ಟೈಕ್ ರೇಟ್ ಹೊಂದಿದ್ದಾರೆ. ಇವರು 16 ಪಂದ್ಯಗಳಲ್ಲಿ 72 ಸಿಕ್ಸರ್ ಗಳನ್ನು ಸಿಡಿಸಿ ಐಪಿಎಲ್ ಸೀಸನ್ ನಲ್ಲಿ ಅತ್ಯಧಿಕ ಸಿಕ್ಸರ್ (59) ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆ ಪುಡಿಗಟ್ಟಿದರು. ಸೂರ್ಯವಂಶಿಯವರ ವಿಶೇಷ ಸಾಧನೆಯನ್ನು ಸಚಿನ್ ತೆಂಡೂಲ್ಕರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕ್ರಿಸ್ ಗೇಲ್ ಅವರು 2012ರ ಸೀಸನ್ ನಲ್ಲಿ 456 ಎಸೆತಗಳಲ್ಲಿ 50 ಸಿಕ್ಸರ್ ಬಾರಿಸಿದ್ದರು. ಅಂದರೆ ಪ್ರತಿ 7.7 ಎಸೆತಗಳಿಗೆ ಒಂದರಂತೆ ಸಿಕ್ಸ‌ರ್ ಸಿಡಿಸಿದ್ದರು. ಆದರೆ ಸೂರ್ಯವಂಶಿ ಕೇವಲ 327 ಎಸೆತಗಳಲ್ಲಿ 72 ರನ್ ಸಿಡಿಸಿದ್ದು, ಪ್ರತಿ 4.5 ಎಸೆತಕ್ಕೆ ಒಂದರಂತೆ ಸಿಕ್ಸ‌ರ್ ಬಾರಿಸಿದ್ದಾರೆ. ಸೂರ್ಯವಂಶಿಯವರ 776 ರನ್ ಗಳ ಪೈಕಿ 521 ರನ್ ಗಳು ಪಂದ್ಯದ ಮೊದಲ ಆರು ಓವರ್‌ ಗಳಲ್ಲೇ ಬಂದಿರುವುದು ವಿಶೇಷ.


Spread the love
Share:

administrator

Leave a Reply

Your email address will not be published. Required fields are marked *